newsfirstkannada.com

ಹೆಚ್​.ಕೆ.ಪಾಟೀಲ್ ವಿರುದ್ಧ ನೂರಾರು ಕೋಟಿ ಬೆಲೆ ಬಾಳುವ ಆಸ್ತಿ ಲೂಟಿಗೆ ಯತ್ನಿಸ್ತಿರುವ ಆರೋಪ

Share :

Published March 2, 2024 at 1:07pm

Update March 2, 2024 at 1:09pm

    ಗದಗ ಜಿಲ್ಲೆಯ ಬಿಜೆಪಿ ನಾಯಕರಿಂದ ಸಚಿವರ ವಿರುದ್ಧ ಗಂಭೀರ ಆರೋಪ

    ನಗರಸಭೆ ಸಾಮಾನ್ಯ ಸಭೆಯಲ್ಲಿ ಬಿಜೆಪಿ-ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ

    ಪ್ರಾಧಿಕಾರ ರಚನೆಗೆ ಮುಂದಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವರಿಗೆ ತೀವ್ರ ಹಿನ್ನಡೆ

ಗದಗ: ಜಿಲ್ಲಾ ಉಸ್ತುವಾರಿ ಸಚಿವ ಹೆಚ್​.ಕೆ.ಪಾಟೀಲ್ ನೂರಾರು ಕೋಟಿ ರೂಪಾಯಿ ಬೆಲೆ ಬಾಳುವ ನಗರಸಭೆಯ ಆಸ್ತಿಯನ್ನು ಪ್ರಾಧಿಕಾರದ ಮೂಲಕ ಲೂಟಿಗೆ ನಿಂತಿದ್ದಾರೆ ಎಂದು ಗದಗ ಜಿಲ್ಲೆ ಬಿಜೆಪಿ ಆರೋಪಿಸಿದೆ.

ವಾಣಿಜ್ಯ, ಸಾಂಸ್ಕೃತಿಕ ವಸ್ತುಪ್ರದರ್ಶನ ಪ್ರಾಧಿಕಾರ ರಚನೆಗೆ ಭಾರೀ ವಿರೋಧ ವ್ಯಕ್ತಪಡಿಸಿರುವ ನಗರಸಭೆಯ ಬಿಜೆಪಿ ಸದಸ್ಯರು.. ಪ್ರಾಧಿಕಾರದ ಮೂಲಕ ನಗರಸಭೆ ಆಸ್ತಿ ಕಬಳಿಕೆಗೆ ಯತ್ನ ಎಂದು ಕಿಡಿಕಾರಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ ನಡೆದ ಸಾಮಾನ್ಯ ಸಭೆಯು ಗೊಂದಲದ ಗೂಡಾಗಿತ್ತು.

ಗದಗ ಜಿಲ್ಲಾ ಉಸ್ತುವಾರಿ ಹೆಚ್.ಕೆ.ಪಾಟೀಲ್ ನಗರಸಭೆ ಆಸ್ತಿ ಲೂಟಿಗೆ ನಿಂತಿದ್ದಾರೆ. ನಾವು ಯಾವುದೇ ಕಾರಣಕ್ಕೂ ನಗರಸಭೆ ಆಸ್ತಿ ಕಬಳಿಕೆಗೆ ಬಿಡಲ್ಲ. ನಗರಸಭೆ ಆಸ್ತಿ ಕಬಳಿಕೆಗೆ ಕಾಂಗ್ರೆಸ್ ಸದಸ್ಯರ ಬೆಂಬಲ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆಚ್​.ಕೆ.ಪಾಟೀಲ್ ವಿರುದ್ಧ ನೂರಾರು ಕೋಟಿ ಬೆಲೆ ಬಾಳುವ ಆಸ್ತಿ ಲೂಟಿಗೆ ಯತ್ನಿಸ್ತಿರುವ ಆರೋಪ

https://newsfirstlive.com/wp-content/uploads/2024/03/HK-PATIL-1.jpg

Load More