newsfirstkannada.com

‘ಲೋಕ’ ಗೆಲ್ಲಲು ಬಿಜೆಪಿ ಸರಣಿ ಸಭೆ; ಕಾಂಗ್ರೆಸ್​ ವಾರ್​​ ರೂಮ್​​ನಲ್ಲಿ ರಾಜ್ಯದ ಸಚಿವರಿಗೆ ಸೇಂಥಿಲ್ ಪಾಠ..!

Share :

Published January 12, 2024 at 6:27am

    28 ರಣಕಲಿಗಳ ಮಾಹಿತಿ ಸಂಗ್ರಹಿಸಿದ ಬಿ.ವೈ ವಿಜಯೇಂದ್ರ

    ರಾಜ್ಯ ಸಚಿವರಿಗೆ ಲೋಕಸಂಗ್ರಾಮದಲ್ಲಿ ಟಾರ್ಗೆಟ್-20

    ರಾಜ್ಯದ ಸಚಿವರಿಗೆ ಹಲವಾರು ಸಲಹೆ, ಸೂಚನೆ ನೀಡಿರುವ ಸೆಂಥಿಲ್

ಲೋಕಸಂಗ್ರಾಮದಲ್ಲಿ ಗೆದ್ದು ಬೀಗಲು ಸರ್ವಪಕ್ಷಗಳು ಭಾರೀ ರಣತಂತ್ರಗಳನ್ನು ಹೆಣೆಯುತ್ತಿವೆ. ಕಳೆದೆರಡು ದಿನಗಳಿಂದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ರಾಜ್ಯ ಹಾಗೂ ರಾಷ್ಟ್ರ ರಾಜಧಾನಿಯಲ್ಲಿ ಸರಣಿ ಸಭೆ ನಡೆಸಿವೆ. ವಿಜಯಲಕ್ಷ್ಮೀಯನ್ನು ಒಲಿಸಿಕೊಳ್ಳಲು ತಂತ್ರ ಹೆಣೆದಿವೆ.

ಲೋಕಸಮರದಲ್ಲಿ ಗೆದ್ದೇ ಗೆಲ್ಲಬೇಕೆಂದು ಸರ್ವಪಕ್ಷಗಳು ಸಖತ್ತಾಗೇ ಶಸ್ತ್ರಾಭ್ಯಾಸ ಮಾಡಿವೆ. ತೀಸ್ರೀ ಬಾರ್ ಮೋದಿ ಸರ್ಕಾರ್ ಅಂತ ಕೇಸರಿ ಸೈನ್ಯ ಮೋದಿಯನ್ನು ಮತ್ತೆ ಪ್ರಧಾನಿ ಪಟ್ಟಕ್ಕೇರಿಸಲು ತಂತ್ರ ಹೆಣೆದಿದೆ. ಕಳೆದೆರಡು ದಿನಗಳಿಂದ ಬಿಜೆಪಿ ಮತ್ತು ಕಾಂಗ್ರೆಸ್ ಸತತವಾಗಿ ಸಭೆ ನಡೆಸಿ ಗೆಲುವಿನ ಲೆಕ್ಕಾಚಾರ, ತಂತ್ರಗಳನ್ನು ಮಾಡಿವೆ. ಈ ವೇಳೆ ಗೆಲ್ಲೋ ಕುದುರೆಗಳ ಬಗ್ಗೆ ಚರ್ಚೆ ನಡೆದಿದೆ.

ಬೆಂಗಳೂರಿನ ಯಲಹಂಕ ಬಳಿ ಖಾಸಗಿ ರೆಸಾರ್ಟ್​ನಲ್ಲಿ ಬಿಜೆಪಿ ಎರಡು ದಿನಗಳ ಲೋಕಸಭೆ ಚುನಾವಣೆ ಸಿದ್ಧತಾ ಸಭೆ ಮಾಡಿದೆ. ವಿಧಾನಸಭೆ ಸೋಲಿನಿಂದ ಪಾಠ ಕಲಿತಿರುವ ರಾಜ್ಯ ಕೇಸರಿ ಪಡೆ, ಹಾಲಿ ಸಂಸದರ ಮೌಲ್ಯಮಾಪನ ಮಾಡಿದೆ. ಎರಡು ದಿನಗಳ ಕಾಲ ನಡೆದ ಸಭೆಯಲ್ಲಿ ಒಟ್ಟು 28 ಲೋಕಸಭಾ ಕ್ಷೇತ್ರದ ಅಭಿಪ್ರಾಯ ಸಂಗ್ರಹಿಸಿದೆ. ಬೆಂಗಳೂರು ಭಾಗದ ಲೋಕಸಭಾ ಕ್ಷೇತ್ರದ ಸಭೆ ನಡೆದಿದೆ. ನಿನ್ನೆ ಒಟ್ಟು 15 ಲೋಕಸಭಾ ಕ್ಷೇತ್ರದ ಅಭಿಪ್ರಾಯವನ್ನು ನಾಯಕರು ಸಂಗ್ರಹ ಮಾಡಿದ್ದಾರೆ. ಅಲ್ಲದೇ ಈಗಾಗಲೇ ಪ್ರತಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಬಗ್ಗೆ ಮಾಹಿತಿಯನ್ನೂ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಪಡೆದಿದ್ದಾರೆ.

ಗ್ಯಾರಂಟಿ ಅಲೆಯಲ್ಲಿ ತೇಲುತ್ತಿರುವ ರಾಜ್ಯ ಕಾಂಗ್ರೆಸ್​​ನ ಪ್ರಭಾವಿ ಸಚಿವರಿಗೆ ಲೋಕಸಂಗ್ರಾಮದಲ್ಲಿ ಕನಿಷ್ಠ 20 ಕ್ಷೇತ್ರಗಳನ್ನು ಗೆಲ್ಲುವಂತೆ ಹೈಕಮಾಂಡ್ ಟಾರ್ಗೆಟ್​ ನೀಡಿದೆ. ದೆಹಲಿಯ ಎಐಸಿಸಿ ಕಚೇರಿಯಲ್ಲಿ ಚರ್ಚೆ ನಡೆಸಿದ ಹೈಕಮಾಂಡ್​, ಸಚಿವರಿಗೆ ಗೆದ್ದು ಗೆಲ್ಲಿಸುಕೊಂಡು ಬರುವ ತಾಕತ್ತು ಇರಬೇಕು. ನೀವು ಹೆಚ್ಚು ಕ್ಷೇತ್ರಗಳನ್ನ ಗೆದ್ದಿಲ್ಲ ಅಂದ್ರೆ, ಸಚಿವರಾಗಿ ಉಳಿಯಲು ನಿಮಗೆ ಯಾವ ನೈತಿಕತೆ ಇರುತ್ತೆ? ಅಂತ ಹೈಕಮಾಂಡ್​ ಸಚಿವ ಸ್ಥಾನದ ತಲೆದಂಡದ ಪರೋಕ್ಷ ಸೂಚನೆಯನ್ನೂ ನೀಡಿದೆ. ಅಲ್ಲದೆ ದಕ್ಷಿಣ ಭಾರತದಲ್ಲಿ ಕನಿಷ್ಠ 60 ರಿಂದ 70 ಸೀಟ್​ಗಳನ್ನ ಕಾಂಗ್ರೆಸ್ ಗೆಲ್ಲಲೇಬೇಕು. ಕರ್ನಾಟಕದಲ್ಲಿ ಗೆಲ್ಲದಿದ್ದರೆ, AICC ಅಧ್ಯಕ್ಷರ ರಾಜ್ಯದಲ್ಲಿಯೇ ಆಗಿಲ್ಲ ಅನ್ನೋ ಮಾತು ಬರುತ್ತೆ. ಇದರಿಂದ ಮುಂದೆ ಪರಿಣಾಮ ಬೀರಲಿದೆ ಅಂತ ಹೈಕಮಾಂಡ್ ಹೇಳಿದೆ. ಕಾಂಗ್ರೆಸ್ ವಾರ್ ರೂಮ್ ಅಧ್ಯಕ್ಷ ಶಸಿಕಾಂತ್ ಸೆಂಥಿಲ್ ಕೂಡ ಸಚಿವರಿಗೆ ಪಾಠ ಮಾಡಿದ್ದಾರೆ.

ಸಚಿವರಿಗೆ ‘ಹೈ’ ಪಾಠ

  • ಸಚಿವರಿಗೆ ಕಾಂಗ್ರೆಸ್ ವಾರ್ ರೂಮ್ ಅಧ್ಯಕ್ಷ ಶಸಿಕಾಂತ್ ಸೆಂಥಿಲ್ ಪಾಠ
  • ಲೋಕಸಭೆ ಚುನಾವಣೆ ಸಿದ್ದರಾಗಿರುವಂತೆ ಸಚಿವರಿಗೆ ತಾಕೀತು
  • ವಾರ್ ರೂಂ ಜೊತೆ ಯಾವ ರೀತಿ ಸಂಪರ್ಕದಲ್ಲಿ ಇರಬೇಕೆಂದು ಸಲಹೆ
  • ಮತದಾರರನ್ನು ವಾರ್ ರೂಮ್ ಜೊತೆ ಯಾವ ರೀತಿ ಸಂಪರ್ಕದಲ್ಲಿಡಬೇಕು
  • ಗ್ರಾಮೀಣ ಭಾಗಕ್ಕೆ ಪಕ್ಷವನ್ನು ಯಾವ ರೀತಿ ತೆಗೆದುಕೊಂಡ ಹೋಗಬೇಕು
  • ವಿವಿಧ ಸಮುದಾಯಗಳ ಮತಗಳನ್ನ ಹೇಗೆ ಸೆಳೆಯಬೇಕು ಅಂತ ಸಲಹೆ
  • ರಾಜ್ಯದ ಸಚಿವರಿಗೆ ಹಲವಾರು ಸಲಹೆ, ಸೂಚನೆ ನೀಡಿರುವ ಸೆಂಥಿಲ್

ಒಟ್ಟಾರೆ ಲೋಕ ಸಂಗ್ರಾಮಕ್ಕಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಭಾರೀ ಕಸರತ್ತು ನಡೆಸುತ್ತಿದ್ದಾರೆ. ಸರಣಿ ಸಭೆ ನಡೆಸಿ ಲೋಕ ಗೆಲ್ಲಲು ಬಿಜೆಪಿ ಹಾಗೂ ಕಾಂಗ್ರೆಸ್ ರಣ ತಂತ್ರ ಹೆಣೆದಿವೆ. ಇದರಲ್ಲಿ ಸಚಿವರಿಗೆ ಕಾಂಗ್ರೆಸ್ ಹೈಕಮಾಂಡ್ ಟಾಸ್ಕ್ ನೀಡಿದ್ದು ಕೊಂಚ ತಲೆಬಿಸಿಗೆ ಕಾರಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಲೋಕ’ ಗೆಲ್ಲಲು ಬಿಜೆಪಿ ಸರಣಿ ಸಭೆ; ಕಾಂಗ್ರೆಸ್​ ವಾರ್​​ ರೂಮ್​​ನಲ್ಲಿ ರಾಜ್ಯದ ಸಚಿವರಿಗೆ ಸೇಂಥಿಲ್ ಪಾಠ..!

https://newsfirstlive.com/wp-content/uploads/2024/01/BY-VIJAYENDRA-2.jpg

Load More