/newsfirstlive-kannada/media/post_attachments/wp-content/uploads/2025/02/HDK_BJP.jpg)
ಬಜೆಟ್ ಅಧಿವೇಶನಕ್ಕೆ ದಿನಗಣನೆ ಆರಂಭಗೊಂಡಿದೆ. ಬಜೆಟ್ ಮಂಡಿಸಲು ಗ್ಯಾರಂಟಿ ಸರ್ಕಾರ ಸಿದ್ಧತೆ ನಡೆಸ್ತಿದೆ. ಇದೀಗ ಕಲಾಪದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರವನ್ನ ಕಟ್ಟಿಹಾಕಲು ದೋಸ್ತಿಗಳು ಮಹತ್ವದ ಸಭೆ ನಡೆಸಿದ್ದಾರೆ. ಹೇಗೆಲ್ಲಾ ಸರ್ಕಾರವನ್ನ ಕಾಡಬಹುದು ಅಂತ ಪ್ಲಾನ್ ಮಾಡಿದ್ದಾರೆ.
ರಾಜ್ಯ ಬಜೆಟ್ ಅಧಿವೇಶನಕ್ಕೆ ಡೇಟ್ ಫಿಕ್ಸ್ ಆಗಿದೆ. ಮಾರ್ಚ್ 3 ರಿಂದ ಬಜೆಟ್ ಅಧಿವೇಶನ ಆರಂಭವಾಗಲಿದೆ. ಮಾರ್ಚ್ 7ಕ್ಕೆ ಸಿದ್ದರಾಮಯ್ಯ ದಾಖಲೆಯ ಬಜೆಟ್ ಮಂಡನೆ ಮಾಡಲಿದ್ದಾರೆ. ಇದರ ಮಧ್ಯೆ ಬಜೆಟ್ ಅಧಿವೇಶನದಲ್ಲಿ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ದೋಸ್ತಿಗಳು ಸನ್ನದ್ಧರಾಗಿದ್ದಾರೆ.
ಬಜೆಟ್ ಅಧಿವೇಶನಕ್ಕೆ ‘ಕಮಲ-ದಳ’ ನಾಯಕರ ಸಿದ್ಧತೆ
ಬಜೆಟ್ ಅಧಿವೇಶನಕ್ಕೆ ಪೂರ್ವಭಾವಿಯಾಗಿ ಬಿಜೆಪಿ-ಜೆಡಿಎಸ್ ನಾಯಕರು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸಮನ್ವಯ ಸಭೆ ನಡೆಸಿದರು. ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹಾಗೂ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನೇತತೃತ್ವದಲ್ಲಿ ಮಹತ್ವದ ಸಭೆ ನಡೀತು. ಈ ವೇಳೆ ಸರ್ಕಾರದ ಮೈನಸ್ ಪಾಯಿಂಟ್ ಬಗ್ಗೆ ಚರ್ಚೆ ನಡೆಸಲಾಯಿತು.
‘ದೋಸ್ತಿ’ ಟಾರ್ಗೆಟ್ ವಿಷಯ!
- ಈಚೆಗೆ ಸರ್ಕಾರಕ್ಕಾದ ಮುಜುಗರಗಳೇ ಸದನದಲ್ಲಿ ಟಾರ್ಗೆಟ್
- ಮೈಕ್ರೋ ಫೈನಾನ್ಸ್ ಕಿರುಕುಳ ಹಾಗೂ ಸಾವು-ನೋವುಗಳು
- ಬಾಣಂತಿಯರ ಸಾವು, ರೈತರಿಗೆ ಪರಿಹಾರ ನೀಡದೇ ಇರುವುದು
- ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂಬ ವಿಚಾರ
- ಮೆಟ್ರೋ ಟಿಕೆಟ್ ದರ ಏರಿಕೆ ವಿರುದ್ಧ ಹೋರಾಟಕ್ಕೆ ನಿರ್ಧಾರ
ಗ್ರೇಟರ್ ಬೆಂಗಳೂರು ಬಿಲ್ ಮಂಡಿಸಲು ಮುಂದಾಗಿರುವ ಸರ್ಕಾರದ ನಡೆಯನ್ನು ಮತ್ತೊಮ್ಮೆ ಪ್ರಶ್ನೆ ಮಾಡುವಂತೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಇದಕ್ಕೆ ಸಾಥ್ ನೀಡಿದ ಹಲವಾರು ಬೆಂಗಳೂರು ಶಾಸಕರು ಒಕ್ಕೊರಲಿನಿಂದ ಮಾತನಾಡುವುದಾಗಿ ಸಭೆಯಲ್ಲಿ ಒಪ್ಪಿಗೆ ನೀಡಿದರು.
ಬಜೆಟ್ ಅಧಿವೇಶನದ ಬಗ್ಗೆ ಚರ್ಚೆ
ರಾಜ್ಯದಲ್ಲಿನ ಲಾ ಆ್ಯಂಡ್ ಆಂರ್ಡರ್ ಸಮಸ್ಯೆ, ಕೆಪಿಎಸ್ಸಿ ಅಕ್ರಮಗಳು ಈ ಬಗ್ಗೆ ಸರ್ಕಾರವನ್ನು ಪ್ರಶ್ನೆ ಮಾಡಲಾಗುವುದು. ಮೈಕ್ರೋ ಫೈನಾನ್ಸ್ಗೆ ಸುಗ್ರಿವಾಜ್ಞೆ ತಂದಿದ್ದೇವೆ ಎಂದರೂ ಜನ ಜೀವಕಳೆದುಕೊಳ್ಳುತ್ತಿದ್ದಾರೆ. ಸರ್ಕಾರ ಏನ್ ಮಾಡುತ್ತಿದೆ?.
ಹೆಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ
ಇದನ್ನೂ ಓದಿ:ಶಿವರಾತ್ರಿ ಜಾಗರಣೆಗೆ ದೇವಾಲಯಕ್ಕೆ ಹೋಗ್ತಿದ್ದ 30 ಭಕ್ತರ ಮೇಲೆ ಆನೆ ಹಿಂಡು ದಾಳಿ
ಸಿಎಂಗೆ ಮನವಿ ನೀಡುವ ಚರ್ಚೆ
ಬೆಂಗಳೂರಿಗೆ ಹೆಚ್ಚಿನ ಅನುದಾನ ನೀಡಬೇಕು. ಫೆ.28ಕ್ಕೆ ಭೇಟಿ ಮಾಡಿ ಮನವಿಯನ್ನು ಕೊಡಬೇಕು ಎಂದು ನಾವು ಚರ್ಚೆ ಮಾಡಿದ್ದೇವೆ. ಬೆಂಗಳೂರಿನಲ್ಲಿ ಬಿಬಿಎಂಪಿ ಎಲೆಕ್ಷನ್ ಆಗಬೇಕು. ಗ್ರೇಟರ್ ಬೆಂಗಳೂರು, ಟನಲ್ ರೋಡ್ ಕಾನ್ಸೆಪ್ಟ್ ಕೈಬಿಡಬೇಕು. ಸಿಟಿಯಲ್ಲಿ ಟ್ರಾಫಿಕ್ ಹೊರೆ ಇಳಿಸಬೇಕು. ಸರ್ಕಾರ ಅವೈಜ್ಞಾನಿಕವಾಗಿ ಯೋಚನೆ ಮಾಡಬಾರದು.
ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
ಚಳಿಗಾಲದ ಅಧಿವೇಶನದಲ್ಲಿ ಸರ್ಕಾರ ಪಾರಾಗಿತ್ತು.. ಆದರೆ ಬಜೆಟ್ ಅಧಿವೇಶನದಲ್ಲಿ ಯಾವುದೇ ಕಾರಣಕ್ಕೂ ಸರ್ಕಾರ ನುಣುಚಿಕೊಳ್ಳಲು ಬೀಡಬಾರದು ಅಂತ ವಿಪಕ್ಷ ನಾಯಕ ಆರ್. ಅಶೋಕ್ ಸಭೆಯಲ್ಲಿ ತಮ್ಮ ಪ್ಲಾನ್‌ನ ಮಂಡಿಸಿದ್ದಾರೆ.
ಸರ್ಕಾರದ ತಪ್ಪುಗಳನ್ನು ಒಂದೊಂದಾಗಿ ಬಯಲಿಗೆ ಎಳೆಯಲು NDA ಮೈತ್ರಿಕೂಟ ಸಜ್ಜಾಗಿದೆ.. ಆದ್ರೆ ದೋಸ್ತಿ ಪಾಳಯದಲ್ಲೇ ಬಣ ರಾಜಕೀಯ ಸಹ ಜೋರಾಗಿದೆ. ಇದನ್ನೇ ಲಾಭ ಪಡೆಯಲು ಸರ್ಕಾರ ತುದಿಗಾಲಲ್ಲಿ ನಿಂತಿದೆ ಎಂಬ ಮಾತಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ