newsfirstkannada.com

ಲೋಕಸಭಾ ಚುನಾವಣೆ; ಎರಡಲ್ಲ, ಮೂರಲ್ಲ, ಜೆಡಿಎಸ್​ಗೆ BJP ಬಿಗ್​ ಆಫರ್​​; ಎಷ್ಟು ಕ್ಷೇತ್ರ..?

Share :

Published March 16, 2024 at 10:18pm

    ಬಹುನಿರೀಕ್ಷಿತ 2024ರ ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿ

    ಅಮಿತ್​ ಶಾ, ಮಾಜಿ ಸಿಎಂ ಕುಮಾರಸ್ವಾಮಿ ಮಹತ್ವದ ಮೀಟಿಂಗ್​​

    ಕರ್ನಾಟಕದ ಕಾಂಗ್ರೆಸ್​ ಸೋಲಿಸಲು ಇಬ್ಬರಿಂದ ಮಾಸ್ಟರ್​ ಪ್ಲಾನ್​

ನವದೆಹಲಿ: ಭಾರತದ ಮಹಾಯುದ್ಧಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಲೋಕಸಭಾ ಕುರುಕ್ಷೇತ್ರಕ್ಕೆ ದಿನಾಂಕ ನಿಗದಿ ಮಾಡಿ ಕೇಂದ್ರ ಚುನಾವಣಾ ಆಯೋಗ ಷರಾ ಬರೆದಿದೆ. 7 ಹಂತಗಳಲ್ಲಿ ಚುನಾವಣೆಗೆ ಡೇಟ್‌ ಕನ್ಫರ್ಮ್ ಮಾಡಿ ‘ಲೋಕ’ ಸಭಾ ಅಖಾಡವನ್ನ ಮತ್ತಷ್ಟು ರಂಗೇರಿಸಿದೆ. ಕರ್ನಾಟಕದ ಲೋಕಸಭಾ ಕ್ಷೇತ್ರಗಳಲ್ಲೂ ಎರಡು ಹಂತಗಳಲ್ಲಿ ಪಾರ್ಲಿಮೆಂಟ್ ಫೈಟ್‌ಗೆ ಮತದಾನ ನಡೆಯಲಿದೆ.

ಅದರಲ್ಲೂ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಕಾವು ಮತ್ತಷ್ಟು ರಂಗೇರಿದೆ. ಹೇಗಾದ್ರೂ ಮಾಡಿ ಕಾಂಗ್ರೆಸ್ಸನ್ನು ಸೋಲಿಸಬೇಕೆಂದು ಬಿಜೆಪಿ, ಜೆಡಿಎಸ್​​ ಮೈತ್ರಿ ಮಾಡಿಕೊಂಡಿವೆ. ಇಂದು ಮಾಜಿ ಸಿಎಂ ಹೆಚ್​​​.ಡಿ ಕುಮಾರಸ್ವಾಮಿ ಮತ್ತು ಬಿಜೆಪಿ ಚಾಣಕ್ಯ ಅಮಿಶ್​ ದಿಢೀರ್​ ಭೇಟಿಯಾಗಿ ಸೀಟ್​ ಹಂಚಿಕೆ ಬಗ್ಗೆ ಮಾತಾಡಿದ್ದಾರೆ.

ಇನ್ನು, ಮೀಟಿಂಗ್​​ನಲ್ಲಿ ಬಿಜೆಪಿ ಹೈಕಮಾಂಡ್ ಅಮಿತ್​​ ಶಾ ಕುಮಾರಸ್ವಾಮಿಗೆ ಬಿಗ್ ಆಫರ್ ನೀಡಿದ್ದಾರೆ. 3 ಕ್ಷೇತ್ರಗಳ ಜೊತೆ ಮತ್ತೊಂದು ಕ್ಷೇತ್ರ ಬಿಟ್ಟುಕೊಡುವ ಆಫರ್ ಕೊಟ್ಟಿದ್ದಾರೆ. ಅದು ಚಿಕ್ಕಬಳ್ಳಾಪುರ ಕ್ಷೇತ್ರ ಜೆಡಿಎಸ್​​ಗೆ ಬಿಟ್ಟುಕೊಡುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.

ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಿಎಂ ಹೆಚ್​​.ಡಿ ಕುಮಾರಸ್ವಾಮಿ ಅವರೇ ಕಣಕ್ಕಿಳಿದ್ರೆ ಬಿಟ್ಟುಕೊಡುವುದಾಗಿ ಅಮಿತ್​ ಶಾ ಮಾತು ಕೊಟ್ಟಿದ್ದಾರೆ. ಆದ್ರೆ ಸ್ಪರ್ಧಿಸಲು ಹೆಚ್​​​ಡಿಕೆ ಅನಾರೋಗ್ಯದ ಕಾರಣ ಹೇಳಿದ್ದಾರೆ. ಇನ್ನೆರಡು ದಿನಗಳಲ್ಲಿ ಜೆಡಿಎಸ್​ ಟಿಕೆಟ್ ಘೋಷಣೆ ಮಾಡುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕಸಭಾ ಚುನಾವಣೆ; ಎರಡಲ್ಲ, ಮೂರಲ್ಲ, ಜೆಡಿಎಸ್​ಗೆ BJP ಬಿಗ್​ ಆಫರ್​​; ಎಷ್ಟು ಕ್ಷೇತ್ರ..?

https://newsfirstlive.com/wp-content/uploads/2024/02/HDK-Amith-Sha.jpg

Load More