newsfirstkannada.com

×

‘28ಕ್ಕೆ 28 ಲೋಕಸಭಾ ಸೀಟು ಗೆಲ್ಲೋಣ’- ಕಾರ್ಯಕಾರಿಣಿಯಲ್ಲಿ BYV ಕೊಟ್ಟ ಟಾರ್ಗೆಟ್ ಏನು?

Share :

Published January 28, 2024 at 5:57am

    ಜಗದೀಶ್‌ ಶೆಟ್ಟರ್‌ಗೆ ಕೋರ್ ಕಮಿಟಿಯಲ್ಲಿ ಸ್ಥಾನ ಕೊಟ್ಟ ಬಿಜೆಪಿ

    ಕರ್ನಾಟಕದಲ್ಲಿ ಕ್ಲೀನ್​​ಸ್ವೀಪ್​​ ಮಾಡಲು ಕಮಲ ತಂತ್ರ

    ಮೋದಿ ಗೆಲ್ಲಿಸೋಣ, ಭಾರತದ ಭವಿಷ್ಯ ರೂಪಿಸೋಣ

ಲೋಕಸಭಾ ಸಮರಕ್ಕೆ ಕೇಸರಿ ಪಡೆ ಶಸ್ತ್ರಾಭ್ಯಾಸ ಆರಂಭಿಸಿದೆ. ವಿಧಾನಸಭೆ ಸೋಲಿನ ಸೇಡು ತೀರಿಸಿಕೊಳ್ಳಲು ರಣವ್ಯೂಹ ರಚಿಸ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಉತ್ಸಾಹದ ಬುಗ್ಗೆ ಆಗಿರುವ ಬಿಜೆಪಿ ಪಡೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾರ್ಯಕಾರಿಣಿ ಸಭೆ ನಡೆಸಿದೆ. ಪದಾಧಿಕಾರಿಗಳ ನೇಮಕದ ಬಳಿಕ ಇದು ಮೊದಲ ಸಭೆಯಾಗಿದೆ. ಕಾರ್ಯಕಾರಿಣಿ ಸಭೆಯಲ್ಲಿ ಮೊನ್ನೆಯಷ್ಟೇ ಬಿಜೆಪಿಗೆ ವಾಪಸ್​​ ಆದ ಮಾಜಿ ಸಿಎಂ ಶೆಟ್ಟರ್‌ ಭಾಗಿಯಾಗಿದ್ರು.

ಲೋಕಸಭೆ ಚುನಾವಣೆ ಗೆಲ್ಲಲು ಬಿಜೆಪಿ ಶಸ್ತ್ರಾಭ್ಯಾಸ!

ಆರಂಭವಾದ ಕಾರ್ಯಕಾರಿಣಿಯನ್ನ ಕೇಂದ್ರ ಸಚಿವ ಭೂಪೇಂದ್ರ ಯಾದವ್ ಉದ್ಘಾಟಿಸಿದ್ರು. ರಾಜ್ಯಾಧ್ಯಕ್ಷ ವಿಜಯೇಂದ್ರ, ಹೊಸ ಟೀಂ ಕಟ್ಟಿದ ಬಳಿಕ ನಡೆಯುತ್ತಿರುವ ಮೊದಲ ಸಭೆ ಇದಾಗಿದ್ದು ಗೆಲುವೊಂದೇ ಮಂತ್ರವಾಗಿಸಿಕೊಂಡಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೂ ಬಿಜೆಪಿ ಉಸ್ತುವಾರಿಗಳನ್ನ ನೇಮಕ ಮಾಡಿ ಅಧಿಕೃತ ಪಟ್ಟಿಯನ್ನು ಹೊರಡಿಸಿದೆ. ಪ್ರತಿ ಕ್ಷೇತ್ರಕ್ಕೆ ಓರ್ವ ಉಸ್ತುವಾರಿ, ಒಬ್ಬರು ಸಂಚಾಲಕರನ್ನ ನೇಮಿಸಿದೆ.

ಮೋದಿ ಗೆಲ್ಲಿಸೋಣ, ಭಾರತದ ಭವಿಷ್ಯ ರೂಪಿಸೋಣ!

ರಾಜ್ಯದಲ್ಲಿ 28ಕ್ಕೆ 28 ಸೀಟುಗಳನ್ನ ಗೆಲ್ಲುವ ಸಂಕಲ್ಪ ಮಾಡಬೇಕು. ಮೋದಿ ಅವರನ್ನ ಗೆಲ್ಲಿಸೋಣ, ಭಾರತದ ಭವಿಷ್ಯ ರೂಪಿಸೋಣ. ಪ್ರಚಾರ, ಸಮಾವೇಶ, ಸಂಘಟನೆ ಬಗ್ಗೆ ಸಮಾಲೋಚನೆ ಮಾಡಲಾಗಿದೆ. ಯಾವುದೇ ಕ್ಷಣದಲ್ಲಾದರೂ ಸಂಸತ್ ಎಲೆಕ್ಷನ್ ಘೋಷಣೆ ಆಗಲಿದೆ. ಯಾರೂ ಮೈ ಮರೆಯಬೇಡಿ, ಹಗಲು ರಾತ್ರಿ ಕೆಲಸ ಮಾಡೋಣ.

– ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ

ಶೆಟ್ಟರ್‌ಗೆ ಕೋರ್ ಕಮಿಟಿಯಲ್ಲಿ ಸ್ಥಾನ ಕೊಟ್ಟ ಬಿಜೆಪಿ

ಹೌದು 9 ತಿಂಗಳ ಬಳಿಕ ಮಾಜಿ ಸಿಎಂ ಶೆಟ್ಟರ್​​​, ಬಿಜೆಪಿ ಮನೆಗೆ ಮರಳಿದ್ದಾರೆ. ಪಕ್ಷದಲ್ಲಿ ಶೆಟ್ಟರ್​​​ಗೆ ಪ್ರಮುಖವಾದ ಕೋರ್​​​ ಕಮಿಟಿಯಲ್ಲಿ ಸ್ಥಾನ ಕಲ್ಪಿಸಲಾಗಿದೆ. ಇತ್ತ, ಶೆಟ್ಟರ್ ಆಗಮನದಿಂದ ಬಿಜೆಪಿ ಪಕ್ಷಕ್ಕೆ ಶಕ್ತಿ ಮರಳಿದೆ ಅಂತ ಮಾಜಿ ಸಿಎಂ ಯಡಿಯೂರಪ್ಪ ಬಣ್ಣಿಸಿದ್ದಾರೆ. ಹೆಣ್ಣುಮಕ್ಕಳ ಮಾನ ಕಾಪಾಡಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗ್ತಿಲ್ಲ ಅಂತ ವಾಗ್ದಾಳಿ ನಡೆಸಿದ್ರು.

ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭಾಗಿ ಆಗಿದ್ರು. ಮಾಜಿ ಸಿಎಂಗಳಾದ ಬಿಎಸ್​​ವೈ, ಬೊಮ್ಮಾಯಿ, ಸದಾನಂದಗೌಡ, ಅಶೋಕ್​​​, ಈಶ್ವರಪ್ಪ, ಸಿ.ಟಿ.ರವಿ ಹಾಜರಿದ್ರು. ಬಿಜೆಪಿ ಸಭೆಗಳಿಂದ ದೂರವೇ ಇದ್ದ ಸಂಸದ ಅನಂತಕುಮಾರ್​​ ಹೆಗಡೆ ಇವತ್ತಿನ ಸಭೆಯಲ್ಲಿ ಕಾಣಿಸಿಕೊಂಡ್ರು. ಕುತೂಹಲದ ವಿಷಯ ಏನಂದ್ರೆ ವೇದಿಕೆಯ ಮುಂಭಾಗ ಬಾಲರಾಮನ ಮೂರ್ತಿ ಇಟ್ಟಿದ್ದು, ಎಲೆಕ್ಷನ್​​ಗೆ ಅಯೋಧ್ಯೆ ಅಸ್ತ್ರ ಪ್ರಯೋಗ ಖಚಿತ ಅನ್ನೋದು ಸಾರಿದಂತಿತ್ತು.

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಗೈರಾಗಿದ್ರು. ಬಿಜೆಪಿಯ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್​ ಅನುಪಸ್ಥಿತಿಯಲ್ಲೇ ಸಭೆ ನಡೆದಿದೆ. ಇನ್ನು, ಮಾಜಿ ಸಚಿವ ಸೋಮಣ್ಣ, S.T ಸೋಮಶೇಖರ್​​, ರಾಮುಲು, ಶಿವರಾಂ ಹೆಬ್ಬಾರ್, ರಮೇಶ್​ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಬಸನಗೌಡ ಯತ್ನಾಳ್​ ಗೈರು ಎದ್ದುಕಾಣಿಸ್ತು. ಒಟ್ಟಾರೆ, ಕಳೆದ ಬಾರಿ ಲೋಕಸಬಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ 25ರಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಈ ಬಾರಿ ಚುನಾವಣೆಯಲ್ಲಿ ಅಷ್ಟೂ ಸ್ಥಾನಗಳನ್ನು ಉಳಿಸಿಕೊಳ್ಳುವ ಸವಾಲು ವಿಜಯೇಂದ್ರ ಹೆಗಲೇರಿದೆ.. ಅದಕ್ಕೆ ಪೂರಕ ಎಂಬಂತೆ ವಿಜಯೇಂದ್ರ, ಅಸ್ತ್ರ, ಶಸ್ತ್ರಗಳನ್ನ ಸಿದ್ಧಪಡಿಸ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘28ಕ್ಕೆ 28 ಲೋಕಸಭಾ ಸೀಟು ಗೆಲ್ಲೋಣ’- ಕಾರ್ಯಕಾರಿಣಿಯಲ್ಲಿ BYV ಕೊಟ್ಟ ಟಾರ್ಗೆಟ್ ಏನು?

https://newsfirstlive.com/wp-content/uploads/2023/12/BY_VIJAYENDRA_TASK-1.jpg

Load More