newsfirstkannada.com

ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಪತ್ನಿಯ ಕಾರು ಕಳ್ಳತನ.. ಕದ್ದ ಖದೀಮ ಯಾರು?

Share :

Published March 25, 2024 at 12:01pm

Update March 25, 2024 at 12:05pm

  ಜೆಪಿ ನಡ್ಡಾ ಅವರ ಪತ್ನಿ ಮಲ್ಲಿಕಾ ನಡ್ಡಾ ಬಳಸುತ್ತಿದ್ದ ಕಾರು ಕಳ್ಳತನ

  ಮಲ್ಲಿಕಾ ನಡ್ಡಾರ ಫಾರ್ಚೂನರ್​ ಕಾರು ಕದ್ದು ಎಸ್ಕೇಪ್​​ ಆಗಿರುವ ಖದೀಮ

  ಬಿಜೆಪಿ ರಾಷ್ಟ್ರಾಧ್ಯಕ್ಷನ ಪತ್ನಿ ಕಾರಿನ ಮೇಲೆ ಬಿತ್ತು ಖದೀಮನ ಕಣ್ಣು! ಕಾರು ಸಿಕ್ತಾ?

ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರ ಪತ್ನಿ ಮಲ್ಲಿಕಾ ನಡ್ಡಾ ಅವರು ಕಾರು ಕಳ್ಳತನವಾದ ಘಟನೆಯೊಂದು ವರದಿಯಾಗಿದೆ. ದೆಹಲಿಯ ಗೋವಿಂದಪುರಿಯ ಸೇವಾ ಕೇಂದ್ರದಿಂದ ಕಾರು ಕಳ್ಳತನಾಗಿದೆ ಎಂದು ಹೇಳಲಾಗುತ್ತಿದೆ.

ಮಲ್ಲಿಕಾ ನಡ್ಡಾ ಅವರು ಫಾರ್ಚೂನರ್​ ಕಾರು ಬಳಸುತ್ತಿದ್ದರು. ಈ ಕಾರನ್ನು ಗೋವಿಂದಪುರಿಯ ಸರ್ವೀಸ್​ ಸೆಂಟರ್​ನಲ್ಲಿ ಬಿಡಲಾಗಿತ್ತು. ಆದರೆ ಖದೀಮರು ಸರ್ವೀಸ್​ ಸ್ಟೇಷನ್​ ಬಳಿಯಿಂದಲೇ ಕಾರನ್ನು ಕದ್ದಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ: ‘ಭಸ್ಮ ಆರತಿ’ ಮಾಡುವ ವೇಳೆ​​ ದೇವಸ್ಥಾನದಲ್ಲಿ ಬೆಂಕಿ ಅವಘಡ; ಅರ್ಚಕರು ಸೇರಿ 13 ಮಂದಿಗೆ ಗಾಯ

ಮಾರ್ಚ್​ 19ರಂದು ಕಾರು ಕಳ್ಳತನವಾಗಿದೆ. ಫಾರ್ಚೂನರ್​ ಕಾರು ಕಳ್ಳತನ ಬಗ್ಗೆ ಡ್ರೈವರ್​ ಜೋಗಿಂದರ್​ ಸಿಂಗ್​ ಅದೇ ದಿನ ಪೊಲೀಸ್​​ ಠಾಣೆಗೆ ತೆರಳಿ ದೂರು ನೀಡಿದ್ದರು. ಸದ್ಯ ಕಾರು ಪತ್ತೆಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.

ಕಾರು ಡ್ರೈವರ್​ ಜೋಗಿಂದರ್​ ಸಿಂಗ್​​ ಸರ್ವೀಸ್​ ಸೆಂಟರ್​ ಬಳಿ ಕಾರು ನಿಲ್ಲಿಸಿ ಬಳಿಕ ಊಟ ಮಾಡಿ ಮನೆಗೆ ಹೋಗಿದ್ದರು. ಆದರೆ ಹಿಂತಿರುಗಿ ಬರುವಾಗ ಕಾರು ಅಲ್ಲಿರಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸದ್ಯ ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರು ಹುಡುಕಾಡುತ್ತಿದ್ದಾರೆ. ಕಾರು ಕೊನೆಯದಾಗಿ ಗುರುಗ್ರಾಮ್​​ ಕಡೆಗೆ ತೆರಳಿರುವುದಾಗಿ ತಿಳಿದುಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಪತ್ನಿಯ ಕಾರು ಕಳ್ಳತನ.. ಕದ್ದ ಖದೀಮ ಯಾರು?

https://newsfirstlive.com/wp-content/uploads/2024/03/JP-Nadda.jpg

Load More