ಬಿಜೆಪಿ ಕೋರ್​ ಕಮಿಟಿ ಸಭೆಯಲ್ಲಿ ಸಿಟಿ ರವಿ ವಿರುದ್ಧ ಗರಂ; ಮೋದಿ ಬಗ್ಗೆ ಹಾಗೇ ಮಾತಾಡಬೇಡಿ ಎಂದ ವರಿಷ್ಠರು

author-image
Gopal Kulkarni
Updated On
ಮತೊಮ್ಮೆ BJP ತೊರೆಯುತ್ತಾರಾ ಶ್ರೀರಾಮುಲು? ಉಸ್ತುವಾರಿ ಮಾತಿಗೆ ಸಿಡಿಮಿಡಿಯಾಗಿ ಹೇಳಿದ್ದೇನು?
Advertisment
  • ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ರಾಧಾಮೋಹನ ದಾಸ್ ಗರಂ
  • ಸಿ.ಟಿ.ರವಿ ಸೇರಿ ಸಾಲು ಸಾಲು ಬಿಜೆಪಿ ನಾಯಕರಿಗೆಲ್ಲಾ ಫುಲ್ ಕ್ಲಾಸ್​
  • ಮಾಧ್ಯಮಗಳ ಮುಂದೆ ಮಾತನಾಡುವುದು ಕಡಿಮೆ ಮಾಡಲು ಸೂಚನೆ

ರಾಜ್ಯದಲ್ಲಿ ನಿನ್ನೆ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ ದಾಸ್​ ಅಗರವಾಲ್ ಫುಲ್ ಗರಂ ಆಗಿ, ಸಾಲು ಸಾಲು ನಾಯಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಬಗ್ಗೆ ನ್ಯೂಸ್​ಫಸ್ಟ್​ಗೆ ಕೋರ್ ಕಮಿಟಿ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಅದರಲ್ಲೂ ಸಿ.ಟಿ. ರವಿ ವಿರುದ್ಧ ರಾಧಾಮೋಹನ್ ದಾಸ್ ಫುಲ್ ಗರಂ ಆಗಿದ್ದರು ಎಂದು ತಿಳಿದು ಬಂದಿದೆ. ನೀವು ವಿಧಾನಸಭೆಯಲ್ಲಿ ಸೋತಿದ್ದೀರಿ. ನಿಮ್ಮನ್ನು ಕರೆದುಕೊಂಡು ಬಂದು ಎಂಎಲ್​ಸಿ ಮಾಡಿದ್ದೇವೆ. ಇತ್ತೀಚೆಗೆ ಮುಂದಿನ ಪ್ರಧಾನ ಮಂತ್ರಿ ಯೋಗಿ ಆದಿತ್ಯನಾಥ್ ಆಗಬೇಕು ಎಂದು ಹೇಳಿಕೆ ಕೊಟ್ಟಿದ್ದೀರಿ. ದೇಶದಲ್ಲಿ ಪ್ರದಾನಮಂತ್ರಿಗಳ ಖುರ್ಚಿ ಇದೆಯಾ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:ಬಿಜೆಪಿ ಬಣ ಬಡಿದಾಟಕ್ಕೆ ಬ್ರೇಕ್ ಬೀಳುತ್ತಾ.. ಸಭೆಯಲ್ಲಿ ಚರ್ಚೆ ಆದ ಮಹತ್ವದ ಅಂಶಗಳು ಏನೇನು?

ದೇಶಕ್ಕೆ ಏಕೆ, ಇಡೀ ಪ್ರಪಂಚಕ್ಕೆ ಪ್ರಧಾನಿ ಮೋದಿ ಅವರ ಜನಪ್ರಿಯತೆ ತಿಳಿದಿದೆ. ಹೀಗಿರುವಾಗ ನೀವೋಬ್ಬ ಬಿಜೆಪಿ ಸಂಘಟನೆಯಲ್ಲಿ ಕಾರ್ಯ ನಿರ್ವಹಣೆ ಮಾಡಿದವರಾಗಿ ಏನು ಹೇಳಬೇಕು? ಏನು ಹೇಳಬಾರದು? ಎಂಬುದು ಗೊತ್ತಿರಬೇಕು ಅಲ್ಲವೇ ಎಂದು ರಾಧಾಮೋಹನ್ ದಾಸ್ ಗರಂ ಆಗಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಗುರುಗಳು ಆಶೀರ್ವಾದ ಮಾಡಿದಾಗ ಏನು ಹೇಳೋಕೆ ಆಗುತ್ತದೆ -CM ಬದಲಾವಣೆ ಮಾತಿಗೆ ಡಿಕೆಶಿ ಅಚ್ಚರಿ ಹೇಳಿಕೆ

ನೀವು ಮಾಧ್ಯಮಗಳ ಮುಂದೆ ಮಾತನಾಡುವುದನ್ನು ಕಡಿಮೆ ಮಾಡಿ. ನರೇಂದ್ರ ಮೋದಿಯವರ ಜನಪ್ರಿಯತೆ ಏನು? ಯೋಗಿ ಆದಿತ್ಯನಾಥರ ಜನಪ್ರಿಯತೆ ಏನು? ಎಂಬುದರ ಅರಿವು ನಿಮಗೆ ಬರುವುದಿಲ್ಲ ಎಂದರೆ ಹೇಗೆ ಎಂದು ಸಿ.ಟಿ.ರವಿಯವರಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment