newsfirstkannada.com

ಹಾಸನ ಪೆನ್​ಡ್ರೈವ್ ಹಂಚಿಕೆ ಆರೋಪದಡಿ ದೇವರಾಜೇಗೌಡ‌ರ ವಿಚಾರಣೆ.. ಪ್ರಜ್ವಲ್​ಗೆ ಎದುರಾಯ್ತು ಮತ್ತೊಂದು ಸಂಕಷ್ಟ

Share :

Published May 3, 2024 at 6:40am

    ಬಿರುಗಾಳಿ ಎಬ್ಬಿಸಿರೋ ಹಾಸನದ ಪೆನ್​ಡ್ರೈವ್​ ಪ್ರಕರಣ

    ವಿಚಾರಣೆ ಹಾಜರಾಗಿ SIT ಮುಂದೆ ಸತ್ಯ ಬಿಚ್ಚಿಟ್ಟ ದೇವರಾಜೇಗೌಡ

    ವಿಚಾರಣೆ ಬಳಿಕ ವಾಟ್ಸಾಪ್​ನಲ್ಲಿ ಸ್ಟೇಟಸ್ ಹಾಕಿದ ಬಿಜೆಪಿ ನಾಯಕ

ಅಶ್ಲೀಲ ವಿಡಿಯೋ ಹರಿದಾಟ ಪ್ರಕರಣದಿಂದ ಆಘಾತಕ್ಕೆ ಒಳಗಾಗಿರೋ ರೇವಣ್ಣ ಕುಟುಂಬಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ಸಿಐಡಿ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಈ ಮೂಲಕ ಕೇಸ್​​ಗಳ ಸಂಖ್ಯೆ ಏರಿಕೆ ಆಗ್ತಿದೆ. ಇತ್ತ, ವಿಚಾರಣೆಗೆ ಹಾಜರಾಗಿ ಎಸ್​ಐಟಿ ಮುಂದೆ ಸತ್ಯ ಬಿಚ್ಚಿಟ್ಟ ದೇವರಾಜೇಗೌಡ, ಆರೋಪಿಗಳ ಕ್ಲೂ ನೀಡಿ ಹೊರಬಂದಿದ್ದಾರೆ.

ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿರೋ ಹಾಸನದ ಪೆನ್​ಡ್ರೈವ್​ ಪ್ರಕರಣ ಸದ್ಯ ಕಾನೂನು ಹೋರಾಟದ ಹಾದಿಯಲ್ಲಿದೆ. ವೈರಲ್​ ಪ್ರಪಂಚದಲ್ಲಿ ಹಲ್​ಚಲ್ ಎಬ್ಬಿಸಿದ್ದ ಅಶ್ಲೀಲ ವಿಡಿಯೋಗಳ ಹರಿದಾಟ ದೊಡ್ಡಗೌಡರ ಕುಟುಂಬವನ್ನ ಆಘಾತಕ್ಕೆ ತಳ್ಳಿದೆ. ಆರೋಪಗಳ ಮೇಲೆ ಆರೋಪ, ಪ್ರತಿಪಕ್ಷಗಳ ಟೀಕೆ ಟಿಪ್ಪಣಿಗಳು ದೊಡ್ಡಗೌಡರ ಕುಟುಂಬಕ್ಕೆ ನುಂಗಲಾರದ ತುತ್ತಾಗಿವೆ. ಪ್ರಕರಣ ದಿನೇ ದಿನೇ ಹೊಸ ಹೊಸ ತಿರುವ ಪಡೆಯುತ್ತಿರೋದು ಪ್ರಜ್ವಲ್​ಗೆ ಸಂಕಷ್ಟಗಳ ಸರಮಾಲೆಯನ್ನೇ ತಂದೊಡ್ಡಿದೆ.

ಪ್ರಜ್ವಲ್ ವಿರುದ್ಧ ಸಿಐಡಿಯಲ್ಲಿಯೂ ಪ್ರಕರಣ ದಾಖಲು

ಹಾಸನದ ಹೊಳೆನರಸೀಪುರದಲ್ಲಿ ದಾಖಲಾದ ಅತ್ಯಾಚಾರ ಪ್ರಕರಣ, ಅಶ್ಲೀಲ ವಿಡಿಯೋ ಕೇಸ್​ನ ಬೆನ್ನುಬಿದ್ದಿರೋ ಎಸ್​ಐಟಿ ತಂಡದ ಭಯದ ಜೊತೆ ಪ್ರಜ್ವಲ್​ಗೆ ಮತ್ತೊಂದು ಕಂಟಕ ಎದುರಾಗಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ಸಿಐಡಿಯಲ್ಲಿ ಆತ್ಯಾಚಾರ ಪ್ರಕರಣ ದಾಖಲಾಗಿದ್ದು, ಸಿಐಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿದೆ. 376(2), 506, 354(A), 354(B), 354(C) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಅಶ್ಲೀಲ ವಿಡಿಯೋ ಪ್ರಕಣಕ್ಕೆ ಹೊಸ ತಿರುವು ನೀಡಿದೆ.

ಅಶ್ಲೀಲ ವಿಡಿಯೋ ಹರಿದಾಟ ಪ್ರಕರಣ ಸಂಬಂಧ ನಿನ್ನೆ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ದೇವರಾಜೇಗೌಡ‌ಗೆ ನೊಟೀಸ್ ನೀಡಿತ್ತು. ನೋಟಿಸ್​ ಹಿನ್ನೆಲೆ ನಿನ್ನೆ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗಿದ್ದ ದೇವರಾಜೇಗೌಡ ಈ ವೇಳೆ ಪೆನ್​ಡ್ರೈವ್ ಬಗ್ಗೆ ಹಲವು ಮಾಹಿತಿಯನ್ನ ಎಸ್​ಐಟಿಗೆ ನೀಡಿದ್ದಾರೆ ಅಂತ ಗೊತ್ತಾಗಿದೆ. ಅಲ್ಲದೇ ತನಿಖೆಗೆ ಸಹಕರಿಸೋದಾಗಿ ಹೇಳಿ ಬಂದಿರೋ ದೇವರಾಜೇಗೌಡ ವಾಟ್ಸಾಪ್ ಸ್ಟೇಟಸ್​ ಸಹ ಹಾಕಿದ್ದಾರೆ.

ದೇವರಾಜೇಗೌಡ ವಾಟ್ಸ್​ಆ್ಯಪ್​ ಸ್ಟೇಟಸ್​ನಲ್ಲಿ ಏನಿತ್ತು?

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಇವರ ಪೆನ್​ಡ್ರೈವ್​ ಅಶ್ಲೀಲ ವಿಡಿಯೋ ಬಿಡುಗಡೆ ವಿಷಯ ಸಂಬಂಧ ನನಗೆ ಎಸ್​ಐಟಿ ತಂಡವು ನೋಟಿಸ್ ನೀಡಿತ್ತು. ಈ ಹಿನ್ನೆಲೆ ನಾನು ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ಎಸ್ಐಟಿ ತಂಡದ ತನಿಖಾಧಿಕಾರಿಗಳ ಮುಂದೆ ಹಾಜರಾಗಿದ್ದೆ. ಪ್ರಕರಣಕ್ಕೆ ಪೂರಕವಾದ ಸಾಕ್ಷಿಯ ಹೇಳಿಕೆಯನ್ನು ನೀಡಿ ಈ ಪ್ರಕರಣದ ಪ್ರಮುಖ ಆರೋಪಿಗಳ ವಿರುದ್ಧ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳಲು ಹೇಳಿದ್ದೇನೆ. ಪೆನ್​ಡ್ರೈವ್​ನಲ್ಲಿ ಇರುವ ಅಶ್ಲೀಲ ವಿಡಿಯೋಗಳನ್ನು ರಾಜ್ಯಾದ್ಯಂತ ಹಂಚಿರುವ ಕಡು ನೀಚರ ಬಗ್ಗೆ ಹಲವು ಸುಳಿವುಗಳನ್ನು ನೀಡಿದ್ದೇನೆ. ಸದರಿ ಕಿರಾತಕರನ್ನು ಬಂಧಿಸಲು ಬೇಕಾದ ಎಲ್ಲಾ ರೀತಿಯ ಸಹಕಾರ ನೀಡಲು ನಾನು ಸಹಕರಿಸುವುದಾಗಿ ಹೇಳಿರುತ್ತೇನೆ. ಹಾಗೂ ಈ ಪ್ರಕರಣದಲ್ಲಿ ರಾಜ್ಯದ ಹೆಣ್ಣು ಮಕ್ಕಳ ಘನತೆ ಹಾಗೂ ಅವರ ಶೀಲದಲ್ಲಿ ಚೆಲ್ಲಾಟವಾಡಿರುವ ರಾಜಕಾರಣಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದೇನೆ.

ಇಂದು ಪ್ರಜ್ವಲ್​ ರೇವಣ್ಣ ಬೇಲ್​ಗೆ ಅರ್ಜಿ ಸಲ್ಲಿಸೋ ಸಾಧ್ಯತೆ

ಅಶ್ಲೀಲ ವಿಡಿಯೋ ಹರಿದಾಟ ಪ್ರಕರಣದ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ಇಂದು​​ ಬೇಲ್​ಗೆ ಅರ್ಜಿ ಹಾಕುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಬಂಧನ ಭೀತಿಯಿಂದ ಸೇಫ್ ಆಗಲು ಪ್ರಜ್ವಲ್ ಬೇಲ್​ ಅಸ್ತ್ರದ ಮೊರೆ ಹೋಗ್ತಾರಾ ಕಾದು ನೋಡಬೇಕಿದೆ.

ಒಟ್ನಲ್ಲಿ ಸಾಲು ಸಾಲು ಸವಾಲುಗಳ ಮಧ್ಯೆ ಅಶ್ಲೀಲ ವಿಡಿಯೋ ಪ್ರಕರಣ ದಿನದಿನವೂ ಹೊಸ ತಿರುವು ಪಡೆದುಕೊಳ್ತಿದೆ. ವಿಡಿಯೋ ಮಾಡಿದ್ಯಾರು, ಪೆನ್​ಡ್ರೈವ್ ಹಂಚಿದ್ಯಾರು ಅನ್ನೋ ಸತ್ಯ ಕೆದಕಲು ಮುಂದಾಗಿರೋ ಎಸ್​ಐಟಿಗೆ ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳೋದೆ ಸವಾಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಸನ ಪೆನ್​ಡ್ರೈವ್ ಹಂಚಿಕೆ ಆರೋಪದಡಿ ದೇವರಾಜೇಗೌಡ‌ರ ವಿಚಾರಣೆ.. ಪ್ರಜ್ವಲ್​ಗೆ ಎದುರಾಯ್ತು ಮತ್ತೊಂದು ಸಂಕಷ್ಟ

https://newsfirstlive.com/wp-content/uploads/2024/05/Devrajegowda.jpg

Load More