newsfirstkannada.com

ಹೆಚ್​​​ಡಿಕೆಗೆ ಬಿಗ್​ ಶಾಕ್.. ಲೋಕಸಭೆ ಚುನಾವಣೆಗೆ ಸುಮಲತಾಗೆ ಮಂಡ್ಯ ಬಿಜೆಪಿಗರ ಸಪೋರ್ಟ್!​​

Share :

Published January 25, 2024 at 4:04pm

Update January 25, 2024 at 4:05pm

  ತಾರಕಕ್ಕೇರಿದ ಮಂಡ್ಯ ಲೋಕಸಭಾ ಚುನಾವಣೆ

  ಮಂಡ್ಯದಿಂದಲೇ ಸುಮಲತಾ ಅಂಬರೀಶ್​ ಕಣಕ್ಕೆ

  ಸುಮಲತಾಗೆ ಬಿಜೆಪಿ ಟಿಕೆಟ್​ ಕೊಡಲಿ ಎಂದ ಮಾಜಿ ಮಿನಿಸ್ಟರ್​​!

ಮಂಡ್ಯ: ಲೋಕಸಭಾ ಸಮರದ ಸೇನಾನಿಗಳ ಆಯ್ಕೆಗೆ ಕಸರತ್ತು ಜೋರಾಗಿದೆ. ಮಾಜಿ ಸಿಎಂ ಹೆಚ್​​ಡಿಕೆ ಅವರ ಬಿಡದಿ ಫಾರ್ಮ್​​ ಹೌಸ್​​, ರಾಜಕೀಯ ಚಟುವಟಿಕೆಯ ಪ್ರವಾಸಿ ಕ್ಷೇತ್ರವಾಗಿದೆ. ಬಿಜೆಪಿಯ ಸರಣಿ ನಾಯಕರು ಹೆಚ್​​ಡಿಕೆ ಬಳಿ ಮದ್ದು ಪಡೆಯುತ್ತಿದ್ದಾರೆ. ಆದ್ರೆ, ದಳಪತಿಗಳ ಗಟ್ಟಿ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ, ಮಂಡೆ ಬಿಸಿ ಮಾಡ್ತಿದೆ. ಇತ್ತ, ಬಿಜೆಪಿಗೆ ರೆಡ್ಡಿ, ಸಂಕಟ ಹೆಚ್ಚಿಸಿದ್ದಾರೆ.

ಸಿಲಿಕಾನ್​ ಸಿಟಿ ಬೆಂಗಳೂರು ರಾಜ್ಯ ರಾಜಕೀಯದ ವಠಾರ. ಆದ್ರೆ, ಬಿಡದಿಯ ಫಾರ್ಮ್​​ ಹೌಸ್​​ ಈಗ ಪವರ್​​ ಸ್ಟೇಷನ್​​ ಆಗಿ ಬದಲಾಗಿದೆ. ಬಿಜೆಪಿ, ಜೆಡಿಎಸ್​​ನ ರಾಜಕೀಯ ನಿರ್ಣಾಯಕ ನಿರ್ಧಾರ ಕೈಗೊಳ್ಳುವ ಶಕ್ತಿ ಕೇಂದ್ರವಾಗಿದೆ. ಜೆಡಿಎಸ್​​ ನಾಯಕರ ಪಾಲಿನ ತವರು ಮನೆ ಆದ ಈ ಬಿಡದಿ ಫಾರ್ಮ್​ ಹೌಸ್​ಗೆ ಬಿಜೆಪಿ ನಾಯಕರಿಗೂ ಈ ಮದ್ದಿನ ಅರಮನೆ, ಟ್ರಬಲ್​​ ಶೂಟರ್​​ ರೀತಿ ಕಾಣಿಸ್ತಿದೆ. ಲೋಕಸಭೆ ಎಲೆಕ್ಷನ್​​​ ಹೊತ್ತಲ್ಲೇ ಬಿಜೆಪಿಯ ಸಾಲು ಸಾಲು ನಾಯಕರು, ದಳಪತಿ ಭೇಟಿಗೆ ಸಾಲುಗಟ್ಟುತ್ತಿದ್ದಾರೆ. ಮೈತ್ರಿ ಆಗಿರೋ ಕಾರಣ ಮಂಡ್ಯವನ್ನು ಬಿಜೆಪಿ, ಜೆಡಿಎಸ್​ಗೆ ಬಿಟ್ಟುಕೊಡಲಿದೆ. ಹೀಗಾಗಿ ಕಳೆದ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಸಪೋರ್ಟ್​ ಮಾಡಿದ್ದ ಸುಮಲತಾ ಅಂಬರೀಶ್​​ ಅವರ ಮುಂದಿನ ನಡೆಯೇನು ಅನ್ನೋದು ಬಹಳ ಕುತೂಹಲ ಆಗಿದೆ. ಈ ಮಧ್ಯೆ ಸುಮಲತಾ ಅಂಬರೀಶ್​ಗೆ ಬಿಜೆಪಿ ಟಿಕೆಟ್​ ನೀಡಬೇಕು ಎಂದು ಮಾಜಿ ಸಚಿವ ನಾರಾಯಣಗೌಡ ಒತ್ತಾಯಿಸಿದ್ದಾರೆ.

ಮಾಜಿ ಸಚಿವ ನಾರಾಯಣಗೌಡ ಹೇಳಿದ್ದೇನು..?

ಮಂಡ್ಯದಲ್ಲಿ ಬಿಜೆಪಿಯಿಂದ 7 ಜನ ಸ್ಪರ್ಧೆ ಮಾಡಿದ್ದೆವು. ಅಂದಿನಿಂದ ಬಿಜೆಪಿಗೆ ಸುಮಲತಾ ಅಂಬರೀಶ್​ ಅವರು ಸಪೋರ್ಟ್​ ಮಾಡಿದ್ದಾರೆ. ಮಂಡ್ಯವನ್ನು ಜೆಡಿಎಸ್​ಗೆ ಯಾಕೆ ಬಿಟ್ಟು ಕೊಡಬೇಕು? ಈಗಷ್ಟೇ ಜಿಲ್ಲೆಯಲ್ಲಿ ಬಿಜೆಪಿ ಚಿಗುರುತ್ತಿದೆ. ನಾನು ಇದೇ ಜಿಲ್ಲೆಯಿಂದಲೇ ಗೆದ್ದು ಬಿಜೆಪಿ ಶಾಸಕನಾದವನು. ಸುಮಲತಾ ಅಂಬರೀಶ್​ಗೆ ಬಿಜೆಪಿ ಟಿಕೆಟ್​ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನು, ಮಂಡ್ಯ ಟಿಕೆಟ್​ ವಿಚಾರಕ್ಕೆ ಕಗ್ಗಂಟು ಮುಂದುವರಿದಿದೆ. ಈ ಸಲ ಸುಮಲತಾ ಸ್ಪರ್ಧೆ ಖಚಿತ ಎಂದು ಗೊತ್ತಾಗಿದೆ. ಹೀಗಾಗಿ ಜೆಡಿಎಸ್‌ಗೆ ಟೆನ್ಷನ್‌ ಡಬಲ್​​​ ಆಗಿದ್ದು, ಈ ಬಗ್ಗೆ ಜೆಡಿಎಸ್‌ನಲ್ಲಿ ಚರ್ಚೆ ನಡೆದಿದೆ. ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ಆಗಿದ್ದು, ಸೋತ ಕಣದಲ್ಲೇ ಗೆಲ್ಲಲು ಕುಮಾರಸ್ವಾಮಿ ಅಗತ್ಯತೆಯ ಅಭಿಪ್ರಾಯ ವ್ಯಕ್ತವಾಗಿದೆ. ಆದ್ರೆ, ಕಳೆದ ಬಾರಿ ಸುಮಲತಾ ಪರವಿದ್ದ ಅನುಕಂಪ, ನಿಖಿಲ್​​ ಪರ ತಿರುಗಿದೆ ಅನ್ನೋ ಅಭಿಪ್ರಾಯ ಕ್ಷೇತ್ರದಲ್ಲಿ ಕಾಣಿಸ್ತಿದ್ದು, ನಿಖಿಲ್‌ಗೆ ಮತ್ತೆ ಕಣಕ್ಕಿಳಿಸಲು ಹೆಚ್‌ಡಿಕೆ ಪ್ಲಾನ್‌ ರೂಪಿಸಿದ್ದಾರೆ.

ಹೆಚ್​​​ಡಿಕೆಗೆ ಬಿಗ್​ ಶಾಕ್.. ಲೋಕಸಭೆ ಚುನಾವಣೆಗೆ ಸುಮಲತಾಗೆ ಮಂಡ್ಯ ಬಿಜೆಪಿಗರ ಸಪೋರ್ಟ್!​​

https://newsfirstlive.com/wp-content/uploads/2024/01/Sumalatha_NarayanaGowda.jpg

Load More