newsfirstkannada.com

ಲೋಕಸಭಾ ಚುನಾವಣೆಗೆ ‘ಕೇಸರಿ’ ಸಮರ.. ಇಂದು ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ

Share :

Published January 27, 2024 at 7:22am

    ಲೋಕಸಭಾ ಸಮರಕ್ಕೆ ‘ಕೇಸರಿ’ ನಾಯಕರ ಶಸ್ತ್ರಾಭ್ಯಾಸ!

    ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಕಾರ್ಯಕಾರಿಣಿ

    ಇಂದಿನ ಕಾರ್ಯಕಾರಿಣಿ ಸಭೆಯಲ್ಲಿ ಶೆಟ್ಟರ್‌ ಭಾಗಿಯಾಗಲಿದ್ದಾರೆ

ಲೋಕಸಭಾ ಸಮರ ಗೆಲ್ಲಲು ಬಿಜೆಪಿ ಮತ್ತೆ ಕಾರ್ಯಸನ್ನದ್ಧವಾಗಿದೆ. ವಿಧಾನಸಬಾ ಚುನಾವಣೆಯ ಸೋಲಿನ ಸೇಡನ್ನ ತೀರಿಸಿಕೊಳ್ಳಲು ಉತ್ಸುಕವಾಗಿದೆ. ಪಕ್ಷ ತೊರೆದ ನಾಯಕರನ್ನ ಮತ್ತೆ ಘರ್‌ವಾಪ್ಸಿ ಮಾಡಿಕೊಂಡು ಪಕ್ಷ ಸಂಘಟನೆಗೆ ಮಾಡುತ್ತಿದೆ. ಇದೀಗ ಲೋಕಸಭಾ ಚುನಾವಣೆ ನಿಟ್ಟಿನಲ್ಲಿ ಕೇಸರಿ ಪಾಳಯ ಇವತ್ತು ಕಾರ್ಯಕಾರಿಣಿ ಸಭೆ ನಡೆಸುತ್ತಿದೆ.

ಲೋಕಸಭಾ ಸಮರದಲ್ಲಿ ಮೈತ್ರಿ ಮೂಲಕ ರಣಕಹಳೆ ಮೊಳಗಿಸಿರೋ ಕಮಲ ಪಡೆ ಗೆಲುವಿನ ಸೋಪಾನ ಕಟ್ಟಲು ಸಜ್ಜಾಗಿದೆ. ಕಾಂಗ್ರೆಸ್ ಪಾಳಯದ ಮೇಲೆ ಸವಾರಿ ಮಾಡಲು ಕೆಳಮನೆ ಚುನಾವಣೆಯನ್ನ ಟಾರ್ಗೆಟ್ ಮಾಡಿದೆ. ಈ ಬಾರಿ ಕೈ ಪಡೆಗೆ ಟಕ್ಕರ್ ಕೊಡಲು ಯಂಗ್ ಅಂಡ್ ಎನರ್ಜಿಟಿಕ್ ನಾಯಕ ಬಿ.ವೈ. ವಿಜಯೇಂದ್ರ ಕಾರ್ಯಪ್ರವೃತ್ತರಾಗಿದ್ದಾರೆ. ಈ ನಿಟ್ಟಿನಲ್ಲಿ ಮಹತ್ವದ ಸಭೆ ನಡೆಸುತ್ತಾ ಗೆಲುವಿನ ಲಯಕ್ಕೆ ಮರಳಲು ಕಾರ್ಯತಂತ್ರ ರೂಪಿಸ್ತಿದ್ದಾರೆ.

ಇಂದು ಮಹತ್ವದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ!

ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಪಟ್ಟಾಭಿಷೇಕವಾದ ಮೇಲೆ ಮೊದಲ ಸಮರಕ್ಕೆ ಸಜ್ಜಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಇವತ್ತು ಬಹು ನಿರೀಕ್ಷಿತ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಸುತ್ತಿದ್ದಾರೆ. ಅಲ್ಲದೇ ಕೇಸರಿ ಸಾರಥಿಯಾದ ಬಳಿಕ ಇದೇ ಮೊದಲ ಬಾರಿ ಕಾರ್ಯಕಾರಿಣಿಯನ್ನ ನಡೆಸ್ತಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಪದಾಧಿಕಾರಿಗಳ ನೇಮಕವಾಗಿದ್ದು, ಶಾಸಕರುಗಳು, ಎಲ್ಲಾ ಮೋರ್ಚಾಗಳ ಅಧ್ಯಕ್ಷರುಗಳು, ಶಾಸಕರುಗಳು ಸೇರಿದಂತೆ ಇಡೀ ಸಂಘಟನೆಯಲ್ಲಿನ ಪದಾಧಿಕಾರಿಗಳನ್ನು ಒಂದೆಡೆ ಸೇರಿಸಿ ಮಹತ್ವದ ಚರ್ಚೆ ನಡೆಸಲು ಮುಂದಾಗಿದ್ದಾರೆ.

ಶೆಟ್ಟರ್‌, ಬಿ.ವೈ.ವಿಜಯೇಂದ್ರ ಸಭೆಯ ಸೆಂಟರ್‌ ಆಪ್ ಅಟ್ರ್ಯಾಕ್ಷನ್

ಬೆಂಗಳೂರಿನಲ್ಲಿ ಇವತ್ತು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಲಿದೆ. ಬೆಂಗಳೂರಿನ ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ಈ ಸಭೆ ಆಯೋಜನೆ ಮಾಡಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಕಾರ್ಯಕಾರಿಣಿ ಸಬೆ ನಡೆಯಲಿದೆ. ಇನ್ನೂ ಮೊನ್ನೆಯಷ್ಟೇ ಬಿಜೆಪಿ ಸೇರಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೂಡಾ ಇಂದಿನ ಕಾರ್ಯಕಾರಿಣಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಶೆಟ್ಟರ್‌, ಬಿ.ವೈ.ವಿಜಯೇಂದ್ರ ಕಾರ್ಯಕಾರಿಣಿ ಸಭೆಯ ಸೆಂಟರ್‌ ಆಪ್ ಅಟ್ರ್ಯಾಕ್ಷನ್ ಆಗಲಿದ್ದಾರೆ. ಇನ್ನೂ ಕಾರ್ಯಕಾರಿಣಿ ಸಬೆಯಲ್ಲಿ ಬಿಜೆಪಿ ರಾಜ್ಯ ಘಟಕದ ಎಲ್ಲಾ ಮೋರ್ಚಾಗಳ ಅಧ್ಯಕ್ಷರು, ಉಪಾಧ್ಯಕ್ಷರು, ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಶಾಸಕರು, ಕೋರ್ ಕಮಿಟಿ ಸದಸ್ಯರು, ಸಂಸದರು, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿ‌ಂಗ್, ಹಿರಿಯ ನಾಯಕ ಭೂಪೇಂದ್ರ ಯಾದವ್ ಕಾರ್ಯಕಾರಿಣಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಇನ್ನೂ ಕಾರ್ಯಕಾರಿಣಿ ಸಭೆಗೆ ನಡೀತಿರೋ ಸಿದ್ಧತೆಗಳನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪರಿಶೀಲನೆ ನಡೆಸಿದ್ರು. ಕಾರ್ಯಕಾರಿಣಿ ಸಭೆಯ ಬಗ್ಗೆ ಮಾಹಿತಿಯನ್ನೂ ನೀಡಿದ್ರು.

ಕಾರ್ಯಕಾರಿಣಿಯಲ್ಲಿ ಚರ್ಚೆಯೇನು?

ಈ ಬಾರಿ ಲೋಕಸಭಾ ಚುನಾವಣೆಯನ್ನು ಹೇಗೆ ಎದುರಿಸಬೇಕು? ಅಂತ ಕಾರ್ಯಕಾರಿಣಿ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ.. ಜೊತೆಗೆ ಅಭ್ಯರ್ಥಿಗಳು ಬದಲಾದ ಕ್ಷೇತ್ರಗಳ ಮೇಲೆ ಹಿಡಿತ ಸಾಧಿಸುವುದು ಹೇಗೆ? ಈ ಬಾರಿ ಮೈತ್ರಿ ಮಾಡಿಕೊಂಡಿರು ಜೆಡಿಎಸ್‌ನ ತಳಮಟ್ಟದ‌‌ ಮುಖಂಡರ ಜೊತೆ ಹೊಂದಾಣಿಕೆ ಹೇಗೆ? ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪಕ್ಷದ ವರಿಷ್ಠರು ಎಲ್ಲೆಲ್ಲಿ ಪ್ರಚಾರ ಮಾಡಬೇಕು? ರಾಮಮಂದಿರ ನಿರ್ಮಾಣ ವಿಚಾರವನ್ನ ಜನರಿಗೆ ತಲುಪಿಸೋದೇಗೆ? ಕಾಂಗ್ರೆಸ್ ಸರ್ಕಾರದ ಗ್ಯಾರಂಟಿನ ಫೀಲ್ಡ್‌ನಲ್ಲಿ ಎದುರಿಸುವುದು ಹೇಗೆ? ಸಿಎಂ, ಡಿಸಿಎಂ ನಡುವಿನ ಬಣ ರಾಜಕೀಯ ಬಳಸಿಕೊಳ್ಳುವುದೇಗೆ? ಶೆಟ್ಟರ್ ಪಕ್ಷ ಸೇರ್ಪಡೆಯಿಂದ ಆಗುವ ಲಾಭದ ಲೆಕ್ಕಚಾರಗಳೇನು? ಹೀಗೆ ಹಲವು ವಿಚಾರಗಳ ಬಗ್ಗೆ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಒಟ್ಟಾರೆ, ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಕೆ 28 ಕ್ಷೇತ್ರವನ್ನು ಗೆಲ್ಲುವುದೊಂದೇ ಬಿಜೆಪಿಯ ಗುರಿಯಾಗಿದೆ.. ಈ ನಿಟ್ಟಿನಲ್ಲಿ ವಿಜಯಪತಾಕೆ ಹಾಕಿಸೋದೆ ಕಾರ್ಯಕಾರಿಣಿ ಸಭೆಯ ಪ್ರಮುಖ ಅಜೆಂಡಾ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕಸಭಾ ಚುನಾವಣೆಗೆ ‘ಕೇಸರಿ’ ಸಮರ.. ಇಂದು ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ

https://newsfirstlive.com/wp-content/uploads/2024/01/Vijayendra.webp

Load More