BJP ಮಾಜಿ ಶಾಸಕನಿಗೆ ಬಿಗ್ ಶಾಕ್​; 2ನೇ ಮದುವೆ, ಪಕ್ಷದಿಂದಲೇ ಸುರೇಶ್ ರಾಥೋಡ್ ಉಚ್ಚಾಟನೆ!

author-image
Bheemappa
Updated On
BJP ಮಾಜಿ ಶಾಸಕನಿಗೆ ಬಿಗ್ ಶಾಕ್​; 2ನೇ ಮದುವೆ, ಪಕ್ಷದಿಂದಲೇ ಸುರೇಶ್ ರಾಥೋಡ್ ಉಚ್ಚಾಟನೆ!
Advertisment
  • ಹೀರೋಯಿನ್​ ಅನ್ನೇ ಮದುವೆ ಆಗಿದ್ದರಾ ಸುರೇಶ್ ರಾಥೋಡ್?
  • ಶೋಕಾಸ್ ನೋಟಿಸ್ ನೀಡಿದ್ದರೂ ಸರಿಯಾದ ಉತ್ತರ ಬರಲಿಲ್ಲ
  • ಸುರೇಶ್ ರಾಥೋಡ್ ವಿರುದ್ಧ ಕ್ರಮ ಕೈಗೊಳ್ಳುವಂತೆ ‘ಕೈ’ ಒತ್ತಾಯ

ಡೆಹ್ರಾಡೂನ್: ಎರಡನೇ ಮದುವೆಯಾದ ಆರೋಪದ ಹಿನ್ನೆಲೆಯಲ್ಲಿ ಹರಿದ್ವಾರದ ಜ್ವಾಲಾಪುರದ ಮಾಜಿ ಶಾಸಕ ಸುರೇಶ್ ರಾಥೋಡ್ ಅವರನ್ನು ಬಿಜೆಪಿ ಪಕ್ಷದಿಂದಲೇ ಉಚ್ಚಾಟನೆ ಮಾಡಿದೆ. ಇದರಿಂದ ಆರು ವರ್ಷಗಳ ಕಾಲ ಮಾಜಿ ಶಾಸಕ ಸುರೇಶ್ ರಾಥೋಡ್ ಅವರು ಪಕ್ಷದಿಂದ ಹೊರಗುಳಿಯಲಿದ್ದಾರೆ.

publive-image

ಮಾಜಿ ಶಾಸಕ ಸುರೇಶ್ ರಾಥೋಡ್ ಅವರು ಉತ್ತರ ಪ್ರದೇಶದ ಸಹರಾನ್‌ಪುರ ಮೂಲದ ನಟಿ ಊರ್ಮಿಳಾ ಸನಾವರ್ ಜೊತೆಗಿನ ತಮ್ಮ ವೈವಾಹಿಕ ಸಂಬಂಧವನ್ನು ಬಹಿರಂಗಪಡಿಸಿದರು. ಇದರ ಆಧಾರದ ಮೇಲೆ ಬಿಜೆಪಿ ಅವರನ್ನು ಉಚ್ಚಾಟನೆ ಮಾಡಿದೆ. ಹೀಗಾಗಿ 6 ವರ್ಷದವರೆಗೆ ಸುರೇಶ್ ರಾಥೋಡ್ ಅವರು ಪಕ್ಷದ ಯಾವುದೇ ಕಾರ್ಯ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಇರುವುದಿಲ್ಲ.

ಇನ್ನು ಮಾಜಿ ಶಾಸಕ 2ನೇ ಮದುವೆ ಆಗಿರುವುದನ್ನ ಕಾಂಗ್ರೆಸ್ ತೀವ್ರವಾಗಿ ಟೀಕೆ ಮಾಡಿದೆ. ಇತ್ತೀಚೆಗೆ ಉತ್ತರಾಖಂಡ ಸರ್ಕಾರ ಯೂನಿಯನ್ ಫಾರ್ಮ್ ಸಿವಿಲ್ ಕೋಡ್ (ಯುಸಿಸಿ) ಜಾರಿಗೆ ತಂದಿದೆ. ಇದರಡಿ ರಾಥೋಡ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ. ಬಿಜೆಪಿ ತನ್ನದೇ ನಾಯಕ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಆದ್ರೆ ಇತರೆ ಪಕ್ಷದವರನ್ನು ಗುರಿಯಾಗಿಸುತ್ತಿದೆ. ಕಾನೂನು ಎಲ್ಲರಿಗೂ ಸಮಾನವಾಗಿದೆ. ರಾಥೋಡ್ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಾಂಗ್ರೆಸ್​ ಪ್ರಶ್ನಿಸಿದೆ.

ಇದನ್ನೂ ಓದಿ:ಸಹಕಾರಿ ಬ್ಯಾಂಕ್​​ ವಿರುದ್ಧ ವಂಚನೆ ಆರೋಪ.. ಹಣ ಕಳೆದುಕೊಂಡು ಕಣ್ಣೀರು ಹಾಕುತ್ತಿರುವ ಗ್ರಾಹಕರು!

publive-image

ಈ ಮೊದಲೇ ವಿವಾದ ಕೇಳಿ ಬಂದಾಗ ಸುರೇಶ್ ರಾಥೋಡ್ ಅವರಿಗೆ ಬಿಜೆಪಿ ಶೋಕಾಸ್ ನೋಟಿಸ್​ ನೀಡಿತ್ತು. ಇದರಲ್ಲಿ ನಿಮ್ಮಿಂದ ಅಶಿಸ್ತು ಮತ್ತು ಪಕ್ಷದ ಖ್ಯಾತಿಗೆ ಹಾನಿಯಾಗುತ್ತಿದೆ ಎಂಬುದನ್ನ ಉಲ್ಲೇಖಿಸಿ 7 ದಿನದೊಳಗೆ ಉತ್ತರಿಸುವಂತೆ ಕೇಳಿತ್ತು. ನಿಗದಿ ಮಾಡಿದ ದಿನಗಳ ಒಳಗೆ ಸರಿಯಾಗಿ ಉತ್ತರಿಸದಿದ್ದಕ್ಕೆ ಸುರೇಶ್ ರಾಥೋಡ್ ಅವರನ್ನ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment