newsfirstkannada.com

ಮಹಾರಾಷ್ಟ್ರದ ನಂತರ ಬಿಹಾರ ಟಾರ್ಗೆಟ್.. ಆಪರೇಷನ್​ ಕಮಲಕ್ಕೆ ಬಲಿಯಾಗುತ್ತಾ ಸಿಎಂ ನಿತೀಶ್ ಕುಮಾರ್‌​ ಸರ್ಕಾರ?

Share :

Published July 4, 2023 at 7:03am

  ಬಿಹಾರವನ್ನು ಛಿದ್ರ.. ಛಿದ್ರ ಮಾಡಲು ಬಿಜೆಪಿ ಚಾಣಕ್ಯ ಅಮಿತ್ ಶಾ ಪ್ಲಾನ್

  ಮಹಾಘಟಬಂಧನ್​ದ ಹಿರಿಯ ನಾಯಕರಿಂದ ಆಪರೇಷನ್‌ ಕಮಲ..!

  ಕೇಸರಿ ನಾಯಕರ ಸಂಪರ್ಕದಲ್ಲಿದ್ದಾರಾ ಬಿಹಾರದ ಜೆಡಿಯು ಶಾಸಕರು?

ಮಹಾರಾಷ್ಟ್ರದಲ್ಲಿ ರಾಜಕೀಯ ಮೇಲಾಟಕ್ಕೆ ಎನ್‌ಸಿಪಿ 2 ಹೋಳಾಗಿದೆ. ಪವರ್‌ಫುಲ್ ಆಗಿದ್ದ ಪಕ್ಷಕ್ಕೆ ಇದೀಗ ಶಿವಸೇನೆ ಗತಿ ಬಂದೊದಗಿದೆ. ಸಿಎಂ ಶಿಂಧೆ ಜೊತೆ ಕೈ ಜೋಡಿಸಿ ಅಜಿತ್ ಪವಾರ್, ಮಹಾ ಸಂಚಲನ ಸೃಷ್ಟಿಸಿದ್ದಾರೆ. ಇದೀಗ ಎನ್‌ಸಿಪಿ, ಶಿವಸೇನೆಗೆ ಹಾಕಿದ್ದ ಗಾಳವನ್ನ ಕೇಸರಿ ಪಡೆ ಮತ್ತೊಂದು ರಾಜ್ಯಕ್ಕೆ ಬೀಸಿದೆ. ಅಲ್ಲೂ ಮೈತ್ರಿ ಸರ್ಕಾರವನ್ನ ಮಕಾಡೆ ಮಲಗಿಸಲು ಸಜ್ಜಾಗಿದೆ. ಹಾಗಾದ್ರೆ ಬಿಜೆಪಿ ನೆಕ್ಸ್ಟ್‌ ಟಾರ್ಗೆಟ್ ರಾಜ್ಯ ಯಾವುದು?.

ಕ್ಷಿಪ್ರ ರಾಜಕೀಯ ಬೆಳವಣಿಗೆಗಳಿಂದ ಮಹಾರಾಷ್ಟ್ರ ಇಡೀ ದೇಶದ ಗಮನ ಸೆಳೆಯುತ್ತಿದೆ. ಎನ್‌ಸಿಪಿ ತೊರೆದು ಶಿಂಧೆ ಬಣ ಸೇರಿರುವ ಅಜಿತ್ ಪವಾರ್ ತಮ್ಮ ಜೊತೆ 40 ಶಾಸಕರ ಬೆಂಬಲ ಇರುವುದಾಗಿ ಘೋಷಿಸಿದ್ದಾರೆ. ಸಂಬಂಧಿಗಳ ವಿರುದ್ಧವೇ ಅಜಿತ್ ಪವಾರ್ ಬಂಡಾಯ ಸಾರಿ ಬಿಜೆಪಿ-ಶಿವಸೇನೆ ಶಿಂಧೆ ಬಣದ ಜೊತೆ ಕೈ ಜೋಡಿಸಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದು ರಾಜ್ಯದಲ್ಲಿ ಆಪರೇಷನ್ ಕಮಲದ ಹೊಗೆಯಾಡುತ್ತಿದೆ.

ಬಿಹಾರದಲ್ಲಿ ‘ಆಪರೇಷನ್‌ ಕಮಲ’ಕ್ಕೆ ಚಾಣಕ್ಯ ಪಡೆ ಸಜ್ಜು

ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‌ಸಿಪಿಯನ್ನ ಛಿದ್ರ.. ಛಿದ್ರಗೊಳಿಸಿರೋ ಕೇಸರಿ ಸೇನೆ ಇದೀಗ ಬಿಹಾರಕ್ಕೆ ಕಾಲಿಟ್ಟಿದೆಯಂತೆ. ಬಿಜೆಪಿ ಜೊತೆಗಿನ ಮೈತ್ರಿ ಮುರಿದು ಆರ್‌ಜೆಡಿ ಜೊತೆ ಕೈ ಜೋಡಿಸಿದ್ದ ಜೆಡಿಯು ಮೇಲೆ ಬಿಜೆಪಿ ಚಾಣಕ್ಯನ ಕಣ್ಣು ಬಿದ್ದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಮೂಲಕ ಮುಖ್ಯಮಂತ್ರಿ ನಿತೀಶ್ ಕುಮಾರ್‌ಗೆ ಟಕ್ಕರ್ ಕೊಡಲು ಬಿಜೆಪಿ ಸನ್ನದ್ಧವಾಗಿದೆ ಎಂಬ ಇನ್‌ಸೈಡ್ ಮಾಹಿತಿ ಸಿಕ್ಕಿದೆ. ಹೀಗಾಗಿ ಸಿಎಂ ನಿತೀಶ್ ಕುಮಾರ್‌ ಮತ್ತು ಡಿಸಿಎಂ ತೇಜಸ್ವಿ ಯಾದವ್‌ ತಲೆಮೇಲೆ ಆಪರೇಷನ್ ಕಮಲ ತೂಗುಗತ್ತಿ ನೇತಾಡುತ್ತಿರುವ ಸುಳಿವು ಸಿಕ್ಕಿದೆ. ಹೀಗಂತ ಬಿಜೆಪಿಯ ಮೇರು ನಾಯಕರೇ ಓಪನ್ ಆಗಿ ಹೇಳಿದ್ದಾರೆ.

‘ಬಿಜೆಪಿಗೆ ಜೆಡಿಯು ಶಾಸಕರು’

ಬಿಹಾರ ರಾಜ್ಯದಲ್ಲೂ ಮಹಾರಾಷ್ಟ್ರದಂತಹ ಪರಿಸ್ಥಿತಿ ಉದ್ಭವಿಸಬಹುದು. ಕೆಲವು ಜೆಡಿಯು ಶಾಸಕರು ನಿತೀಶ್ ಕುಮಾರ್ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಅವರು ಎನ್‌ಡಿಎ ಕೂಟವನ್ನ ಸೇರಬಹುದು.

– ರಾಮ್‌ದಾಸ್ ಅಠವಳೆ, ಕೇಂದ್ರ ಸಚಿವ

ಕೇಂದ್ರ ಸಚಿವ ರಾಮ್‌ ದಾಸ್ ಅಠವಳೆ ಆಪರೇಷನ್ ಕಮಲದ ಸುಳಿವು ಕೊಟ್ಟಿದ್ರೆ, ಇತ್ತ ಬಿಹಾರ ಮಾಜಿ ಸಿಎಂ ಸುಶೀಲ್ ಕುಮಾರ್ ಮೋದಿ ಕೂಡಾ ಇದೇ ಮಾತನ್ನ ಆಡಿದ್ದಾರೆ.

‘ಆಪರೇಷನ್ ಕಮಲ’ ಭೀತಿ

ಜೆಡಿಯುನಲ್ಲಿ ಬಂಡಾಯದ ವಾತಾವರಣ ನಿರ್ಮಾಣವಾಗಿದೆ. ಜೆಡಿಯು ಪಕ್ಷದ ಅನೇಕ ಸಂಸದರು, ಶಾಸಕರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರು ಯಾವಾಗ ಬೇಕಾದರೂ ಜೆಡಿಯು ತೊರೆಯಬಹುದು. ಈ ಶಂಕೆಯಿಂದಾಗಿ ಕಳೆದ 13 ವರ್ಷಗಳಲ್ಲಿ, ತಮ್ಮ ಪಕ್ಷದ ಶಾಸಕರೊಂದಿಗೆ ಒಮ್ಮೆಯು ಸಭೆ ನಡೆಸದ ನಿತೀಶ್ ಕುಮಾರ್. ಈಗ ಪ್ರತಿಯೊಬ್ಬ ಶಾಸಕರು, ಸಂಸದರನ್ನ ಪ್ರತ್ಯೇಕವಾಗಿ ಭೇಟಿ ಮಾಡುತ್ತಿದ್ದಾರೆ.

-ಸುಶೀಲ್ ಕುಮಾರ್ ಮೋದಿ, ಬಿಹಾರ ಮಾಜಿ ಸಿಎಂ

ಇದಿಷ್ಟು ಬಿಜೆಪಿ ನಾಯಕರೇ ಹೇಳ್ತಿರೋ ಮಾತುಗಳು. ಇದಲ್ಲದೇ ಜೆಡಿಯು ಮತ್ತು ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಬಿಜೆಪಿ, ಮಹಾಘಟಬಂಧನ್​ದ ಹಿರಿಯ ನಾಯಕನನ್ನೇ ಬಳಸಿಕೊಳ್ಳುತ್ತಿದೆಯಂತೆ. ಅಷ್ಟಕ್ಕೂ ಬಿಹಾರದಲ್ಲಿ ಆಪರೇಷನ್ ಕಮಲ ಅಷ್ಟು ಸುಲಭನಾ? ಮಹಾರಾಷ್ಟ್ರಕ್ಕೆ ಹೋಲಿಸಿಕೊಂಡ್ರು ಸಲೀಸಾ ಎಂದು ಪ್ರಶ್ನೆ ಕಾಡುತ್ತಿದೆ.

‘ಬಿಹಾರ’ ಟಾರ್ಗೆಟ್‌ ಸುಲಭವೇ?

 • ಬಿಹಾರದಲ್ಲಿ 19 ಶಾಸಕರನ್ನ ಹೊಂದಿರೋ ಕಾಂಗ್ರೆಸ್
 • ಕಾಂಗ್ರೆಸ್ ಪಕ್ಷದ ವಿಭಜನೆಗೆ 13 ಶಾಸಕರ ಅಗತ್ಯವಿದೆ
 • ಇತ್ತ ಜೆಡಿಯು ವಿಭಜನೆ ಮಾಡೋದು ಸ್ವಲ್ಪ ಕಷ್ಟಕರ
 • ಯಾಕಂದ್ರೆ, 45ರಲ್ಲಿ ಕನಿಷ್ಠ 30 ಶಾಸಕರ ಬೆಂಬಲ ಅಗತ್ಯ
 • ಆದ್ರೆ, ಮಹಾರಾಷ್ಟ್ರ NCP ಕತೆ ಜೆಡಿಯುಗೆ ಕರೆಗಂಟೆ

ಹೀಗಾಗಿ ಶಾಸಕರು, ಎಂಎಲ್‌ಸಿಗಳು ಮತ್ತು ಸಂಸದರೊಂದಿಗೆ ಸಿಎಂ ನಿತೀಶ್ ಒನ್‌ ಟು ಒನ್ ಸಭೆ ನಡೆಸ್ತಿದ್ದಾರೆ. ಅದೇನೆ ಇರಲಿ, ಮಹಾರಾಷ್ಟ್ರದಂತ ಪರಿಸ್ಥಿತಿ ಬಿಹಾರದಲ್ಲಿ ಬರುತ್ತಾ? ಬಂದ್ರೂ ಬಿಹಾರದ ಮೈತ್ರಿ ಸರ್ಕಾರ ನಿಜಕ್ಕೂ ಸಂಕಷ್ಟದಲ್ಲಿದ್ಯಾ? ಇದಕ್ಕೆಲ್ಲ ಕಾಲವೇ ಉತ್ತರ ಕೊಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಹಾರಾಷ್ಟ್ರದ ನಂತರ ಬಿಹಾರ ಟಾರ್ಗೆಟ್.. ಆಪರೇಷನ್​ ಕಮಲಕ್ಕೆ ಬಲಿಯಾಗುತ್ತಾ ಸಿಎಂ ನಿತೀಶ್ ಕುಮಾರ್‌​ ಸರ್ಕಾರ?

https://newsfirstlive.com/wp-content/uploads/2023/07/AMIT_SHAH_NITISH_KUMAR.jpg

Load More