/newsfirstlive-kannada/media/post_attachments/wp-content/uploads/2024/08/HDK.jpg)
ರಾಜ್ಯ ಬಿಜೆಪಿಯಲ್ಲಿ ಜನಾಕ್ರೋಶ ಯಾತ್ರೆ ಜೋರಾಗಿ ಆರಂಭವಾಗಿದೆ. ಆದ್ರೆ ಬಿಜೆಪಿ ನಾಯಕರು ಒಂಟಿ ಯಾತ್ರೆ ಬಗ್ಗೆ ಮೈತ್ರಿ ನಾಯಕರಲ್ಲೇ ಒಳಗೊಳಗೆ ಅಸಮಾಧಾನ ಎದುರಾಗಿದೆ. ಗ್ರೇಟರ್ ಬೆಂಗಳೂರು, ಅಹೋರಾತ್ರಿ ಧರಣಿ, ಜನಾಕ್ರೋಶ ಯಾತ್ರೆ, ಇದೀಗ ಸಾಕಪ್ಪ ಸಾಕು ಸರ್ಕಾರ ಹೋರಾಟ ಮೈತ್ರಿಯಲ್ಲಿ ಆರಂಭವಾಗಿದೆ. ಅಜೆಂಡಾ ಒಂದೇ ಆದರೂ, ಜೆಡಿಎಸ್ ಹಾಗೂ ಬಿಜೆಪಿ ಏಕಾಂಗಿ ಹೋರಾಟಕ್ಕೆ ಮುಂದಾಗಿದೆ.
ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ತೀರ್ಮಾನದ ವಿರುದ್ಧ ಬಿಜೆಪಿ ಹೋರಾಟ ಆರಂಭಿಸಿದೆ. ಇತ್ತ ಪ್ರತಿಭಟನೆಯಿಂದ ಅಂತರ ಕಾಯ್ದುಕೊಂಡಿದ್ದ ಜೆಡಿಎಸ್ ಸಹ ಹೋರಾಟಕ್ಕೆ ಮುಂದಾಗಿದೆ. ಆದರೆ ಅಚ್ಚರಿ, ಕುತೂಹಲ ಏನಂದರೆ ಸರ್ಕಾರದ ವಿರುದ್ಧ ಒಂದೇ ಅಜೆಂಡಾ ಇಟ್ಕೊಂಡಿದ್ರು ಜೆಡಿಎಸ್ ಹಾಗೂ ಬಿಜೆಪಿ ಬೇರೆ ಬೇರೆಯಾಗಿ ಹೋರಾಟ ಮಾಡುತ್ತಿದೆ. ಇತ್ತ ಬಿಜೆಪಿ ನಿರ್ಧಾರಕ್ಕೆ ಜೆಡಿಎಸ್ ನಾಯಕರು ಒಳಗೊಳಗೆ ಅಸಮಾಧಾನಗೊಂಡಿದ್ರೆ ಇತ್ತ ಜೆಡಿಎಸ್ ಜೊತೆಗೆ ಇಲ್ಲದೇನೇ ಅದ್ಧೂರಿಯಾಗಿ ಜನಾಕ್ರೋಶ ಯಾತ್ರೆ ಬಿಜೆಪಿ ಕೈಗೊಂಡಿದೆ. ಇದೇ ಜನಾಕ್ರೋಶ ಯಾತ್ರೆಯಲ್ಲಿ ಜೆಡಿಎಸ್‌ಗೆ ಯಾಕೆ ಆಹ್ವಾನ ಮಾಡಿಲ್ಲ ಎಂಬುದು ಬಿಜೆಪಿ ಹೈಕಮಾಂಡ್ ನಾಯಕರಿಗೆ ಟೆನ್ಶನ್ ಆಗಿದೆ.
ಗ್ರೇಟರ್ ಬೆಂಗಳೂರು ಪ್ರತಿಭಟನೆಗೆ ನಮ್ಮನ್ನು ಬಿಟ್ಟು ಹೋಗಿದ್ದೇ ಜೆಡಿಎಸ್!
ಕಳೆದ ಅಧಿವೇಶನದಲ್ಲಿ ಕಾಂಗ್ರೆಸ್ ಗ್ರೇಟರ್ ಬೆಂಗಳೂರು ವಿಧೇಯಕ ಮಂಡಿಸಲು ಮುಂದಾಗಿತ್ತು. ಆದರೆ ಇದಕ್ಕೆ ಬಿಜೆಪಿ ಜೆಡಿಎಸ್ ಬಹಿರಂಗವಾಗಿಯೇ ಅಧಿವೇಶನದ ಒಳಗಡೆ ಹಾಗೂ ಹೊರಗಡೆ ವಿರೋಧ ಮಾಡಿದ್ರು. ಒಂದು ಹಂತಕ್ಕೆ ಮುಂದೆ ಹೋದ ಜೆಡಿಎಸ್ ನಾಯಕರು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿ, ರಾಜ್ಯಪಾಲರಿಗೂ ದೂರು ನೀಡಿದ್ರು. ಆದರೆ ಎಲ್ಲಿಯೂ ಸಹ ಬಿಜೆಪಿ ನಾಯಕರು ಭಾಗವಹಿಸಿರಲ್ಲಿಲ್ಲ. ಮಾಹಿತಿ ಪ್ರಕಾರ ಬಿಜೆಪಿ ನಾಯಕರಿಗೆ ಆಹ್ವಾನ ಇರಲಿಲ್ಲ ಎಂಬುದು ಮೈತ್ರಿ ವಲಯದಲ್ಲಿ ಚರ್ಚೆ ಆಗ್ತಿದೆ.
ಅಹೋರಾತ್ರಿಯಲ್ಲಿ ಅಂತರ.. ಜನಾಕ್ರೋಶದಿಂದ ದೂರ
ಮೈತ್ರಿಯಲ್ಲಿ ಪ್ರತಿಭಟನೆಯನ್ನು ಪ್ರತಿಷ್ಟೆಯಾಗಿ ತೆಗೆದುಕೊಂಡ ಬಿಜೆಪಿ, ಸರ್ಕಾರದ ವಿರುದ್ಧ ಅಹೋರಾತ್ರಿ ಹೋರಾಟ ನಡೆಸಿತು. ಆದರೆ ಜೆಡಿಎಸ್ ನಾಯಕರಿಗೆ ಆಹ್ವಾನ ನೀಡಿಲ್ಲ. ಇದಕ್ಕೆ ಸ್ವತಃ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಅವರೇ ಅಸಮಾಧಾನ ವ್ಯಕ್ತಪಡಿಸಿದ್ರು. ಅಲ್ಲಿಗೆ ಮೈತ್ರಿ ನಾಯಕರ ವಲಯದಲ್ಲಿ ಸ್ವಲ್ಪ ಮಟ್ಟಿಗೆ ಅಸಮಾಧಾನದ ಹೊಗೆ ಮತ್ತೆ ಎದ್ದಿದೆ ಎನ್ನುವುದು ಸ್ಪಷ್ಟವಾಗಿದೆ. ಆದರೆ ಇದಕ್ಕೆ ಬಿಜೆಪಿ ಉತ್ತರವೇ ಬೇರೆ ಆಗಿತ್ತು. ನಮ್ಮ ಹೋರಾಟ ನಮ್ದು, ಅವರ ಹೋರಾಟ ಅವರದು ಎಂಬುದು. ಈ ಒಂದು ಅಹ್ರೋರಾತ್ರಿ ಬಿಜೆಪಿ ಹೈಕಮಾಂಡ್ ನಾಯಕರು ನಿದ್ದೆಗೆಡಿಸಿತ್ತು.
ಇದನ್ನೂ ಓದಿ: ಬೆಂಗಳೂರಿಗರಿಗೆ ಬಿಗ್ ಶಾಕ್ ಕೊಟ್ಟ BWSSB.. ಎಷ್ಟು ಲೀಟರ್ ನೀರಿಗೆ ಎಷ್ಟು ರೂಪಾಯಿ ಹೆಚ್ಚಾಗುತ್ತೆ?
ಹೈಕಮಾಂಡ್ ನಾಯಕರು ನಿದ್ದೆಗೆಡಿಸಿದ ರಾಜ್ಯ ಬಿಜೆಪಿ ಹೋರಾಟ
ಪ್ರತಿಭಟನೆಯಲ್ಲಿ ಜೆಡಿಎಸ್ ಬಿಟ್ಟು ಹೋಗಿದ್ದಕ್ಕೆ ವರದಿ ಕೇಳಿದ ವರಿಷ್ಠರು
ರಾಜ್ಯ ಬಿಜೆಪಿಯ ಹೋರಾಟದ ಬಗ್ಗೆ ಬಿಜೆಪಿ ವರಿಷ್ಠರ ಗಮನಕ್ಕೆ ಮಾಜಿ ಸಿಎಂ ಹಾಗು ಕೇಂದ್ರ ಸಚಿವ ಕುಮಾರಸ್ವಾಮಿ ತಂದಿದ್ದಾರೆ ಎಂಬುದು ಚರ್ಚೆಯಾಗಿದೆ. ಹೀಗಾಗಿ ಬಿಜೆಪಿ ನಾಯಕರಲ್ಲಿ ವರಿಷ್ಠರು ಜೆಡಿಎಸ್ ಬಿಟ್ಟು ಪ್ರತಿಭಟನೆ ಮಾಡಿದಕ್ಕೆ ವರದಿ ಕೇಳಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿ ನಾಯಕರು ಸಹ ಹೈಕಮಾಂಡ್‌ಗೆ ವರದಿ ಕೊಡಲು ಸನ್ನದ್ಧರಾಗಿದ್ದಾರೆ.
ಅಷ್ಟಕ್ಕೂ ರಾಜ್ಯ ಬಿಜೆಪಿ ನಾಯಕರ ಉತ್ತರವೇನಿರುತ್ತೆ..?
1. ಈಗಾಗಲೇ ಹಳೆ ಮೈಸೂರು ಭಾಗದಲ್ಲಿ ರಾಜ್ಯ ಬಿಜೆಪಿ ಸಂಘಟನೆ ಬಲಪಡಿಸಬೇಕು
2. ಮುಡಾ ಹೋರಾಟದ ವೇಳೆ ಸಂಪೂರ್ಣ ಡೈವರ್ಟ್ ಮಾಡಿದ್ರು
3. ಕುಮಾರಸ್ವಾಮಿ ಹಾಗೂ ಜೆಡಿಎಸ್ ನಾಯಕರ ಒಳಜಗಳ ಮುಡಾ ಹೋರಾಟಕ್ಕೆ ಗೊಂದಲ ಉಂಟಾಗಿತ್ತು
4. ವಿಜಯೇಂದ್ರ ರಾಜ್ಯಾಧ್ಯಕ್ಷನಾಗಿ ಮಾಡಿದ ಜಂಟಿ ಹೋರಾಟಕ್ಕೆ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಮೈಲೇಜ್ ಪಡೆಯುವಲ್ಲಿ ವಿಫಲವಾಯಿತು
5. ಗ್ರೇಟರ್ ಬೆಂಗಳೂರು ಪ್ರತಿಭಟನೆಗೆ ಜೆಡಿಎಸ್ ನಮ್ಮನ್ನು ದೂರ ಇಟ್ಟಿದ್ರು
ಮೈತ್ರಿಯಲ್ಲಿ ಪ್ರತ್ಯೇಕ ಹೋರಾಟಕ್ಕೆ ಸಣ್ಣದಾದ ಅಸಮಾಧಾನ ಹೊರ ಬಿದ್ದಿದೆ. ಮುಂದಿನ ದಿನಗಳಲ್ಲಿ ಹೈಕಮಾಂಡ್ ಎಚ್ಚರಿಕೆ ನೀಡ್ತಾರಾ. ವರದಿ ಪಡೆದು ಸುಮ್ಮನಾಗ್ತಾರಾ ಎಂಬುದು ಕಾದು ನೋಡಬೇಕಾಗಿದೆ.
ವರದಿ: ಗಣಪತಿ ಹರಿಕಾಂತ್, ಪೊಲಿಟಿಕಲ್ ಬ್ಯುರೋ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ