newsfirstkannada.com

BJP-JDS​ ಮೈತ್ರಿ ಬಗ್ಗೆ ಸಿಎಂ ಸಿದ್ದರಾಮಯ್ಯ ಏನಂದ್ರು? ಒಳ್ಳೆಯದಾಗಲಿ, ಚೆನ್ನಾಗಿರಲಿ ಅಂದಿದ್ದೇಕೆ ಡಿ.ಕೆ ಶಿವಕುಮಾರ್​

Share :

Published September 8, 2023 at 1:40pm

Update September 8, 2023 at 1:44pm

    ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ವಿಚಾರ ಸಿಎಂ ರಿಯಾಕ್ಷನ್​

    ಹೆಚ್ಚಾಯ್ತು ಲೋಕಸಭಾ ಚುನಾವಣಾ ಕಾವು, ಬಿಜೆಪಿ ಪ್ಲಾನ್​ ಏನು?

    ರಾಜ್ಯದತ್ತ ಮುಖ ಮಾಡಿದ ಕೇಂದ್ರ ನಾಯಕರು, ಜೆಡಿಎಸ್​ ಮನವೊಲಿಸಿದ್ದು ಹೇಗೆ?

ಮುಂಬರುವ ಲೋಕಸಭೆ ಚುನಾವಣೆಗೆ ಹಿನ್ನೆಲೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ವಿಚಾರ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪನವರು ಮಾಹಿತಿ ಹಂಚಿಕೊಂಡಿದ್ದಾರೆ. ಇದೀಗ ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯನವರು, ‘ಮಾಡಿಕೊಳ್ಳಲಿ ಬಿಡ್ರಿ, ನಮಗೇನು?. ಯಾರು ಮೈತ್ರಿ ಮಾಡಿಕೊಳ್ಳುತ್ತಾರೊ, ಪ್ರತ್ಯೇಕವಾಗಿ ಸ್ಪರ್ಧಿಸುತ್ತಾರೊ ಅದರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಲ್ಲ. ನಾವು ಜನರ ಹತ್ತಿರ ಮತ ಕೇಳ್ತೀವಿ. ಜನರು ನಮ್ಮ ಪರವಾಗಿದ್ದಾರೆ. ನಮಗೆ ಮತ ಹಾಕ್ತಾರೆ’ ಎಂದು ಹೇಳಿದ್ದಾರೆ.

ಬಿಜೆಪಿ- ಜೆಡಿಎಸ್​​ಗೆ ​​ಒಳ್ಳೆಯದಾಗಲಿ

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಕೂಡ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ವಿಚಾರದ ಬಗ್ಗೆ ರಿಯಾಕ್ಷನ್​ ನೀಡಿದ್ದಾರೆ. ಬಿಜೆಪಿ- ಜೆಡಿಎಸ್​​ಗೆ ​​ಒಳ್ಳೆಯದಾಗಲಿ, ಚೆನ್ನಾಗಿರಲಿ. ಸಿದ್ಧಾಂತ ಹೇಗೆ ವರ್ಕೌಟ್ ಆಗುತ್ತೆ ನೋಡಬೇಕು. ನಮ್ಮ ಅಭ್ಯಂತರ ಇಲ್ಲ, ಇದು ಹೊಸದೇನೂ ಅಲ್ಲ ಎಂದು ಹೇಳಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಲೋಕಸಭಾ ಕಾವು ಹೆಚ್ಚಾಗಿದೆ. ಕೇಂದ್ರದಿಂದ ಹಲವು ನಾಯಕರು ಕರ್ನಾಟಕದತ್ತ ಮುಖ ಮಾಡುತ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬೀಗುವ ಸಲುವಾಗಿ ಯೋಜನೆಗಳನ್ನು ಹಾಕಿದ್ದಾರೆ. ಕೇಂದ್ರ ಗೃಹ ಮಂತ್ರಿ ಅಮಿತ್​ ಶಾ ಕೂಡ ರಾಜ್ಯಕ್ಕೆ ಆಗಮಿಸಿ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಜೆಡಿಎಸ್​ ಪಕ್ಷದ ಮುಂದಾಲೋಚನೆಯ ಬಗ್ಗೆ ಮಾತನಾಡಿದ್ದಾರೆ. ಜೆ ಪಿ ನಡ್ಡಾ ಕೂಡ ಇವರನ್ನು ಮನವೊಲಿಸಿದ್ದಾರೆ.

ಅದರಂತೆಯೇ ಜೆಡಿಎಸ್​ ಮತ್ತು ಬಿಜೆಪಿ ಮೈತ್ರಿಯಾಗಿದೆ. ಭಾರತೀಯ ಜನತಾ ಪಕ್ಷ 24 ಕ್ಷೇತ್ರದಲ್ಲಿ ತಮ್ಮ ಪಾರುಪತ್ಯ ಸಾಧಿಸಲು ಮುಂದಾದರೆ, ಜೆಡಿಎಸ್​​ 4 ಕ್ಷೇತ್ರದಲ್ಲಿ ಸ್ಪರ್ಧಿಸಲು ಮುಂದಾಗಿದೆ. ಅತ್ತ ಕಾಂಗ್ರೆಸ್​ ಮಾತ್ರ ಆಪರೇಷನ್​ ನಡೆಸುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BJP-JDS​ ಮೈತ್ರಿ ಬಗ್ಗೆ ಸಿಎಂ ಸಿದ್ದರಾಮಯ್ಯ ಏನಂದ್ರು? ಒಳ್ಳೆಯದಾಗಲಿ, ಚೆನ್ನಾಗಿರಲಿ ಅಂದಿದ್ದೇಕೆ ಡಿ.ಕೆ ಶಿವಕುಮಾರ್​

https://newsfirstlive.com/wp-content/uploads/2023/09/Siddramaiah.jpg

Load More