/newsfirstlive-kannada/media/post_attachments/wp-content/uploads/2024/07/SIDDU_R_ASHOK.jpg)
ಸೋಮವಾರ ಅಂದರೆ ಜುಲೈ 15ರಂದು ಮುಂಗಾರು ಅಧಿವೇಶನ ನಡೆಯಲಿದೆ. ಮುಡಾ ಹಾಗೂ ವಾಲ್ಮೀಕಿ ನಿಗಮದ ಹಗರಣ ಈ ಡಬಲ್ ಶಾಕ್ನಲ್ಲಿರುವ ಕೈಪಡೆ ಮೇಲೆ ಸವಾರಿ ಮಾಡಲು ಬಿಜೆಪಿ- ಜೆಡಿಎಸ್ ಮುಂದಾಗಿವೆ. ನಿನ್ನೆ ನಡೆದ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
ಗ್ಯಾರಂಟಿ ಅಲೆಯಲ್ಲಿ ತೇಲ್ತಿದ್ದ ಕಾಂಗ್ರೆಸ್ಗೆ ಲೋಕಸಭೆ ಎಲೆಕ್ಷನ್ ಮಾಯದ ಗಾಯ ಮಾಡಿದೆ. ಆ ಗಾಯದ ಮೇಲೆ ಬರೆ ಎನ್ನುವಂತೆ ಸರ್ಕಾರದ 2 ದೊಡ್ಡ ಹಗರಣಗಳು ಕೋಲಾಹಲ ಎಬ್ಬಿಸಿವೆ. ಸೋಮವಾರ ಮುಂಗಾರು ಅಧಿವೇಶನ ಆರಂಭವಾಗ್ತಿದ್ದು, ವಿಪಕ್ಷಗಳಿಗೆ ಭರ್ಜರಿ ಭೋಜನ ಸಿಕ್ಕಿದೆ.
ಅಧಿವೇಶನದಲ್ಲಿ ದೋಸ್ತಿಗೆ ಸಿಕ್ತು ಡಬಲ್ ಅಸ್ತ್ರ!
ಸೋಮವಾರದಿಂದ ಮಾನ್ಸೂನ್ ಸೆಷನ್ ಆರಂಭ ಆಗ್ತಿದೆ. ಸರ್ಕಾರವನ್ನ ಹಣ್ಣುಗಾಯಿ ಮಾಡ್ತಿರುವ ಭ್ರಷ್ಟಾಚಾರದ ಹಗರಣಗಳು, ವಿಪಕ್ಷಗಳ ಬತ್ತಳಿಕೆಗೆ ಬ್ರಹ್ಮಾಸ್ತ್ರವೇ ಸಿಕ್ಕಂತಾಗಿದೆ. ಈ ಬಾರಿ ಸರ್ಕಾರದ ಮೇಲೆ ಬಿಜೆಪಿ ಜೆಡಿಎಸ್ ಮೈತ್ರಿ ಪಡೆ ಜಂಟಿ ದಾಳಿಗೆ ಸನ್ನದ್ಧ ಆಗ್ತಿವೆ. ನಿನ್ನೆ ಉಭಯ ಪಕ್ಷಗಳ ಪ್ರಮುಖರ ಸಮನ್ವಯ ಸಮಿತಿ ಸಭೆ ನಡೆದಿದ್ದು, ಹೋರಾಟದ ರೂಪುರೇಷೆ ಸಿದ್ಧವಾಗಿದೆ.
ಕುಸ್ತಿಗೆ ಸಜ್ಜಾದ ದೋಸ್ತಿ!
- ಸಂತಾಪ ಸೂಚನೆ ಬಳಿಕ ಮೊದಲ ದಿನವೇ ಹೋರಾಟಕ್ಕೆ ರೆಡಿ
- ವಾಲ್ಮೀಕಿ ನಿಗಮದ ಭ್ರಷ್ಟಾಚಾರ ಚರ್ಚೆಗೆ ನಿಲುವಳಿ ಸೂಚನೆ
- ಸ್ಪೀಕರ್ ಚರ್ಚೆಗೆ ಅವಕಾಶ ನೀಡದೆ ಇದ್ದರೆ ಧರಣಿಗೆ ನಿರ್ಧಾರ
- ವಾಲ್ಮೀಕಿ ನಿಗಮದ ಚರ್ಚೆ ಬಳಿಕ ಮುಡಾ ಹಗರಣ ಬಗ್ಗೆ ಚರ್ಚೆ
- ಮುಡಾ ಭ್ರಷ್ಟಾಚಾರದ ಮೇಲೂ ನಿಲುವಳಿ ಸೂಚನೆ ಮಂಡನೆ
- 1 ವಾರ ಸದನ ವಿಸ್ತರಣೆ ಮಾಡಲು ಮೈತ್ರಿ ನಾಯಕರ ಮನವಿ
- ಗ್ಯಾರಂಟಿ ಯೋಜನೆ ಸಾಧಕ-ಬಾಧಕ, ಅಭಿವೃದ್ಧಿ ಹಿನ್ನಡೆ ಚರ್ಚೆ
‘ಒಟ್ಟಾಗಿ ಕೆಲಸ ಮಾಡುವ ನಿರ್ಧಾರ’
2 ಸದನದಲ್ಲಿ ಪರಿಣಾಮಕಾರಿಯಾಗಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ, ರಾಜ್ಯದ ಅಭಿವೃದ್ಧಿ 10 ವರ್ಷಗಳ ಹಿಂದಕ್ಕೆ ಹೋಗುತ್ತಿದೆ. ಈ ಎಲ್ಲದರ ಬಗ್ಗೆ ಧ್ವನಿಯಾಗಿ ಕೆಲಸ ಮಾಡುವಂತ ನಿರ್ಧಾರ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
ಹೆಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ MUDA ಜತೆ ವಾಲ್ಮೀಕಿ ಹಗರಣದ ಸಂಕಷ್ಟ.. ಪ್ರಕರಣದ ಅಸಲಿ ರಹಸ್ಯಗಳೇನು?
‘ಒಟ್ಟಿಗೆ ಹೋರಾಟ ಮಾಡ್ತೇವೆ’
ಸ್ವತಃ ಸಿಎಂ ಸಿದ್ದರಾಮಯ್ಯನವರೇ ಇದರಲ್ಲಿ ಇನ್ವಾಲ್ ಆಗಿದ್ದಾರೆ. ಇದು ರಾಜ್ಯದ ವಿಚಾರವಾಗಿ ಉಳಿದಿಲ್ಲ. ದೇಶದ ವಿಚಾರವಾಗಿ ಉಳಿದಿದೆ. ಅದಕ್ಕೆ ಈ ವಿಚಾರಗಳನ್ನ ವಿಧಾನಸಭೆಯಲ್ಲಿ ಸರಿಯಾಗಿ ಪ್ರತಿಪಾದನೆ ಮಾಡಬೇಕು. ಇವುಗಳನ್ನ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುಬೇಕು.
ಆರ್.ಅಶೋಕ್, ವಿಪಕ್ಷ ನಾಯಕ
ಇದನ್ನೂ ಓದಿ:ಅನಂತ್ ಅಂಬಾನಿ-ರಾಧಿಕಾ ವಿವಾಹ ಸಂಭ್ರಮ.. ಮದುವೆಯಲ್ಲಿ ಗಣ್ಯರು ಭಾಗಿ.. ಯಶ್ ಸೇರಿ ಯಾರೆಲ್ಲ ಇದ್ದಾರೆ..?
ವಾಲ್ಮೀಕಿ ನಿಗಮ ಮತ್ತು ಮುಡಾ ಸೈಟ್ ಹಗರಣ ಸದನದಲ್ಲಿ ಪ್ರತಿಧ್ವನಿಸಲಿದೆ.. ಹೀಗಾಗಿ ಮುಂಗಾರು ಅಧಿವೇಶನದಲ್ಲಿ ಹಂಗಾಮ ಸೃಷ್ಟಿ ಆಗೋದು ಪಕ್ಕಾ ಆಗಿದೆ.. ಇದಕ್ಕೆ ಸರ್ಕಾರ ಹೇಗೆ ತಕ್ಕ ಪ್ರತ್ಯುತ್ತರ ನೀಡಲಿದೆ ಅನ್ನೋದು ಕಾದು ನೋಡಬೇಕಿದೆ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ