/newsfirstlive-kannada/media/post_attachments/wp-content/uploads/2024/03/yadu-sri-1.jpg)
ಬೆಂಗಳೂರು: ಇಡೀ ದೇಶಾದ್ಯಂತ 2024ರ ಲೋಕಸಭಾ ಚುನಾವಣೆ ಕಾವು ಜೋರಾಗಿದೆ. ಅದರಲ್ಲೂ ಕರ್ನಾಟಕದಲ್ಲಂತೂ ಕಾಂಗ್ರೆಸ್ ಸೋಲಿಸಲು ಈ ಬಾರಿ ಜೆಡಿಎಸ್, ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಬಿಜೆಪಿ ಹೈಕಮಾಂಡ್ ಕೊನೆಗೂ ಅಳೆದು ತೂಗಿ ತನ್ನ 2ನೇ ಪಟ್ಟಿ ರಿಲೀಸ್ ಮಾಡಿದೆ.
ಕರ್ನಾಟಕದ 20 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಅನೌನ್ಸ್ ಮಾಡಿದೆ. ಮೈಸೂರಿನಿಂದ ಯದುವೀರ್ ಒಡೆಯರ್ಗೆ ಮಣೆ ಹಾಕಿದ್ದು, ಬೆಂಗಳೂರು ಗ್ರಾಮಾಂತರದಿಂದ ಡಾ. ಸಿಎನ್ ಮಂಜುನಾಥ್ ಅವರನ್ನು ಕಣಕ್ಕಿಳಿಸಲಾಗುತ್ತಿದೆ. ನಿರೀಕ್ಷೆಯಂತೆ ಸಂಸದ ಪ್ರತಾಪ್ ಸಿಂಹಗೆ ಈ ಬಾರಿ ಟಿಕೆಟ್ ಮಿಸ್ ಮಾಡಲಾಗಿದೆ.
ಬಿಜೆಪಿ ಟಿಕೆಟ್ ಲಿಸ್ಟ್ ಹೀಗಿದೆ!
ಚಿಕ್ಕೋಡಿ - ಅಣ್ಣಾಸಾಹೇಬ್ ಶಂಕರ್ ಜೊಲ್ಲೆ
ಬಾಗಲಕೋಟೆ - ಪಿ.ಸಿ ಗದ್ದಿಗೌಡರ್
ವಿಜಯಪುರ - ರಮೇಶ್ ಜಿಗಜಿಣಗಿ
ಬೀದರ್ - ಭಗವಂತ್ ಖೂಬ
ಕೊಪ್ಪಳ - ಡಾ. ಬಸವರಾಜ್
ಬಳ್ಳಾರಿ - ಶ್ರೀರಾಮುಲು
ಹಾವೇರಿ - ಬಸವರಾಜ ಬೊಮ್ಮಾಯಿ
ಧಾರವಾಡ - ಪ್ರಹ್ಲಾದ್ ಜೋಷಿ
ದಾವಣಗೆರೆ - ಗಾಯತ್ರಿ ಸಿದ್ದೇಶ್ವರ್
ಶಿವಮೊಗ್ಗ - ಬಿ.ವೈ ರಾಘವೇಂದ್ರ
ಉಡುಪಿ ಚಿಕ್ಕಮಗಳೂರು - ಕೋಟಾ ಶ್ರೀನಿವಾಸ್ ಪೂಜಾರಿ
ದಕ್ಷಿಣ ಕನ್ನಡ - ಬ್ರಿಜೇಶ್ ಚೌಟ
ತುಮಕೂರು - ವಿ. ಸೋಮಣ್ಣ
ಮೈಸೂರು - ಯದುವೀರ್ ಕೃಷ್ಣದತ್ತ ಒಡೆಯರ್
ಚಾಮರಾಜನಗರ - ಎಸ್. ಬಾಲರಾಜ್
ಬೆೆಂಗಳೂರು ಗ್ರಾಮಾಂತರ - ಡಾ.ಸಿ.ಎನ್ ಮಂಜುನಾಥ್
ಬೆಂಗಳೂರು ಉತ್ತರ - ಶೋಭಾ ಕರಂದ್ಲಾಜೆ
ಬೆಂಗಳೂರು ಕೇಂದ್ರ - ಪಿ.ಸಿ ಮೋಹನ್
ಬೆಂಗಳೂರು ದಕ್ಷಿಣ - ತೇಜಸ್ವಿ ಸೂರ್ಯ
ಕಲಬುರಗಿ - ಉಮೇಶ್ ಯಾದವ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ