Saugat-e-Modi: ದೇಶದ 32 ಲಕ್ಷ ಬಡ ಮುಸ್ಲಿಮರ ಕುಟುಂಬಗಳಿಗೆ ಮೋದಿ ರಂಜಾನ್ ಕಿಟ್..!

author-image
Ganesh
Updated On
Saugat-e-Modi: ದೇಶದ 32 ಲಕ್ಷ ಬಡ ಮುಸ್ಲಿಮರ ಕುಟುಂಬಗಳಿಗೆ ಮೋದಿ ರಂಜಾನ್ ಕಿಟ್..!
Advertisment
  • ಜೆಪಿ ನಡ್ಡಾ ನೇತೃತ್ವದಲ್ಲಿ ಕಾರ್ಯಕ್ರಮಕ್ಕೆ ಚಾಲನೆ
  • ಈ ಅಭಿಯಾನಕ್ಕೆ Saugat-e-Modi ಅಂತಾ ನಾಮಕರಣ
  • ಇದು ತುಷ್ಠೀಕರಣವಲ್ಲವೆ ಎಂದು ಪ್ರಶ್ನಿಸಿದ ಗುಂಡೂರಾವ್

ದೇಶಾದ್ಯಂತ 32 ಲಕ್ಷ ಬಡ ಮುಸ್ಲಿಮರ ಕುಟುಂಬಗಳಿಗೆ ಬಿಜೆಪಿ ‘ರಂಜಾನ್ ಕಿಟ್’ ನೀಡಲು ಆರಂಭಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮಾರ್ಗದರ್ಶನದಲ್ಲಿ ದೆಹಲಿಯಲ್ಲಿ ಕಿಟ್ ವಿತರಣೆ ಕಾರ್ಯಕ್ರಮ ಆರಂಭವಾಗಿದೆ.

‘ಸೌಗತ್-ಇ-ಮೋದಿ’ (Saugat E Modi) ಅಂತಾ ಈ ಅಭಿಯಾನಕ್ಕೆ ಹೆಸರಿಡಲಾಗಿದೆ. ದೇಶದಲ್ಲಿರುವ 32 ಲಕ್ಷ ಹಿಂದುಳಿದ ಮುಸ್ಲಿಮರಿಗೆ ಇದರ ಪ್ರಯೋಜನ ಸಿಗಲಿದೆ. ಇದರ ಅಂಗವಾಗಿ ಅವರಿಗೆ ಈದ್ ಆಚರಿಸಲು ವಿಶೇಷ ಕಿಟ್ ನೀಡಲಾಗುತ್ತಿದೆ. ಅದರಲ್ಲಿ ಆಹಾರ ಪದಾರ್ಥಗಳ ಜೊತೆಗೆ ಬಟ್ಟೆ, ಶಾವಿಗೆ, ಖರ್ಜೂರ, ಒಣ ಹಣ್ಣಗುಳು ಮತ್ತು ಸಕ್ಕರೆ ಇದೆ. ಇನ್ನು ಮಹಿಳೆಯರಿಗೆ ಸೀರೆ, ಸಲ್ವಾರ್ ಕಮೀಜ್, ಪುರುಷರಿಗೆ ಕುರ್ತಾ-ಪೈಜಾಮುಗಳನ್ನು ನೀಡಲಾಗುತ್ತದೆ ಎನ್ನಲಾಗಿದೆ. ಇನ್ನು ಪ್ರತಿ ಕಿಟ್ ಬೆಲೆ 500 ರಿಂದ 600 ರೂಪಾಯಿ ಆಗಿದೆ ಎನ್ನಲಾಗಿದೆ.

publive-image

ಗೇಲಿ ಮಾಡಿದ ಕಾಂಗ್ರೆಸ್​..!

ಬಿಜೆಪಿ ಈ ಅಭಿಯಾನದ ಬಗ್ಗೆ ಟ್ವೀಟ್ ಮಾಡಿರುವ ಸಚಿವ ದಿನೇಶ್ ಗುಂಡೂರಾವ್, BJP ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, 32 ಲಕ್ಷ ಮುಸ್ಲಿಂ ಕುಟುಂಬಗಳಿಗೆ ಮೋದಿ ಹೆಸರಲ್ಲಿ ಈದ್ ಕಿಟ್ ನೀಡಿದ್ದಾರೆ. ಪವಿತ್ರ ರಂಜಾನ್ ಸಮಯದಲ್ಲಿ ಮುಸ್ಲಿಂರಿಗೆ ಈದ್ ಕಿಟ್ ಕೊಡಲಿ. ಇದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಇದೇ ಕಾರ್ಯಕ್ರಮವನ್ನು ಕಾಂಗ್ರೆಸ್‌ನವರು ಮಾಡಿದ್ದರೆ ಪರಿಸ್ಥಿತಿ ಹೇಗಿರುತಿತ್ತು.? ಎಂಬುದನ್ನು ಒಮ್ಮೆ ಊಹಿಸಿಕೊಳ್ಳಿ.
ಕಾಂಗ್ರೆಸ್‌ನವರು ಈದ್ ಕಿಟ್ ಕೊಟ್ಟರೆ ಬಿಜೆಪಿಯ ಪುಡಿ ನಾಯಕರು ಇಷ್ಟೊತ್ತಿಗಾಗಲೇ ಬೀದಿಗಿಳಿಯುತ್ತಿದ್ದರು. ಕಾಂಗ್ರೆಸ್ ಮುಸ್ಲಿಮರ ತುಷ್ಠೀಕರಣ ಮಾಡುತ್ತಿದೆ, ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಬೊಂಬಡ ಬಜಾಯಿಸುತ್ತಿದ್ದರು. ಆದರೆ ಈಗ ಸೌಗತ್-ಎ-ಮೋದಿ ಹೆಸರಲ್ಲಿ ಬಿಜೆಪಿಯ ವರಿಷ್ಠ ನಾಯಕರೆ ಮುಸ್ಲಿಂರಿಗೆ ಈದ್ ಕಿಟ್ ಕೊಡುತ್ತಿದ್ದಾರೆ. ಇದು ತುಷ್ಠೀಕರಣವಲ್ಲವೆ.? ಇದು ಓಲೈಕೆ ರಾಜಕಾರಣವಲ್ಲವೆ.? ಎಂದು ದಿನೇಶ್ ಗುಂಡೂರಾವ್ ಪ್ರಶ್ನೆ ಮಾಡಿದ್ದಾರೆ.

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment