ಹೋಟೆಲ್​ನಲ್ಲಿ ಹಣ ಹಂಚುವಾಗ ಸಿಕ್ಕಿಬಿದ್ದ BJP ನಾಯಕರು.. ಪ್ರತಿಪಕ್ಷಗಳ ಆರೋಪ ಏನು?

author-image
Bheemappa
Updated On
ಹೋಟೆಲ್​ನಲ್ಲಿ ಹಣ ಹಂಚುವಾಗ ಸಿಕ್ಕಿಬಿದ್ದ BJP ನಾಯಕರು.. ಪ್ರತಿಪಕ್ಷಗಳ ಆರೋಪ ಏನು?
Advertisment
  • ಹೋಟೆಲ್​ಗೆ ನುಗ್ಗಿದ ಪ್ರತಿಪಕ್ಷದ ನಾಯಕರು, ಬೆಂಬಲಿಗರು
  • ಹಣ ಹಂಚುತ್ತಿರುವುದನ್ನ ಡೈರಿಯಲ್ಲಿ ಬರೆದುಕೊಳ್ಳುತ್ತಿದ್ದಾರಾ?
  • ಬಿಜೆಪಿ ವಿರುದ್ಧ ಮುಗಿಬಿದ್ದ ಪ್ರತಿಪಕ್ಷಗಳು, ಕಾಂಗ್ರೆಸ್ ಏನಂತು?

ಮುಂಬೈ: ಮಹಾರಾಷ್ಟ್ರದ್ಯಾಂತ ಇಂದು ಸಂಭ್ರಮದಿಂದ ಮತದಾನ ನಡೆಯುತ್ತಿದೆ. ಆದರೆ ನಿನ್ನೆ ಪಾಲ್ಘರ್ ಜಿಲ್ಲೆಯ ವಿರಾರ್‌ನಲ್ಲಿರುವ ಹೋಟೆಲ್‌ ಒಂದರಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಮಾಜಿ ಸಚಿವ ವಿನೋದ್ ತಾವ್ಡೆ ಸೇರಿದಂತೆ ಬಿಜೆಪಿ ನಾಯಕರು 5 ಕೋಟಿ ಹಣ ಹಂಚುತ್ತಿದ್ದರು ಎಂದು ಪ್ರಾದೇಶಿಕ ಪಕ್ಷವೊಂದು ಆರೋಪಿಸಿದೆ.

ಸ್ಥಳದಲ್ಲಿ ನಗದು ಮತ್ತು ಬಾಕ್ಸ್​​ಗಳಲ್ಲಿನ 5 ಕೋಟಿ ರೂಪಾಯಿಯನ್ನು ಮತದಾರರಿಗೆ ಹಂಚಲಾಗಿದೆ. ಅಲ್ಲದೇ ವಿನೋದ್ ತಾವ್ಡೆ ಅವರು ಹಣದ ಮೊತ್ತವನ್ನೆಲ್ಲ ಡೈರಿಯಲ್ಲಿ ಬರೆದುಕೊಳ್ಳುತ್ತಿದ್ದರು. ಈ ಸಂಬಂಧದ ಡೈರಿ ಕೂಡ ಇದೆ ಎಂದು ಆರೋಪ ಇದೆ. ಬಹುಜನ ವಿಕಾಸ್ ಅಘಾಡಿ ಬೆಂಬಲಿಗರು ನೋಟುಗಳನ್ನು ತಾವ್ಡೆ ಅವರ ಮುಂದೆ ಎಸೆಯುತ್ತಿರುವ ದೃಶ್ಯಗಳನ್ನ ವಿಡಿಯೋ ಮಾಡಲಾಗಿದ್ದು ಸದ್ಯ ಈ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ವಿನೋದ್ ತಾವ್ಡೆ ವಿರುದ್ಧ ಪೊಲೀಸರು ಎಫ್​ಐಆರ್ ದಾಖಲು ಮಾಡಿದ್ದಾರೆ.

ನಲಸೋಪರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜನ್ ನಾಯ್ಕ್ ಅವರು ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರ ಸಮ್ಮುಖದಲ್ಲಿ ಮತದಾರರಿಗೆ ಹಣ ಹಂಚುತ್ತಿದ್ದರು ಎಂದು ಬಹುಜನ ವಿಕಾಸ್ ಅಘಾಡಿ ಆರೋಪಿಸಿದೆ. ಹಾಲಿ ಬಹುಜನ ವಿಕಾಸ್ ಅಘಾಡಿ ಶಾಸಕರಾದ ಕ್ಷಿತಿಜ್ ಠಾಕೂರ್ ಅವರು ತಮ್ಮ ಬೆಂಬಲಿಗರೊಂದಿಗೆ ಹೋಟೆಲ್‌ಗೆ ಹೋಗಿ ಹಣ ಹಂಚುವುದನ್ನು ತಡೆದಾಗ ಅಲ್ಲಿ ದೊಡ್ಡ ಹೈಡ್ರಾಮಾವೇ ನಡೆದು ಹೋಗಿದೆ. ತಾವ್ಡೆಗೆ ಘೇರಾವ್ ಹಾಕಿ ಘೋಷಣೆ ಕೂಗಿದ್ದಾರೆ.


">November 19, 2024

ಈ ವಿಡಿಯೋಗಳನ್ನು ಪ್ರತಿಪಕ್ಷಗಳು ತಮ್ಮ ಎಕ್ಸ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಕಾಂಗ್ರೆಸ್​ ಎಕ್ಸ್​​ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿ, ಚುನಾವಣೆಯಲ್ಲಿ ಪ್ರಭಾವ ಬೀರಲು ಬಿಜೆಪಿ ಹಣದ ಬಲವನ್ನು ಬಳಸಲು ಪ್ರಯತ್ನಿಸಿದೆ ಎಂದು ಆರೋಪಿಸಿದೆ. ಉನ್ನತ ನಾಯಕರು ಕೂಡ ಇದರಲ್ಲಿ ಇದ್ದಾರೆ. ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ತಿಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment