ಅಣ್ಣಾಮಲೈ ಅವರನ್ನು ವಶಕ್ಕೆ ಪಡೆದ ತಮಿಳುನಾಡು ಪೊಲೀಸರು.. ಆಗಿದ್ದೇನು..?

author-image
Ganesh
Updated On
ಅಣ್ಣಾಮಲೈ ಅವರನ್ನು ವಶಕ್ಕೆ ಪಡೆದ ತಮಿಳುನಾಡು ಪೊಲೀಸರು.. ಆಗಿದ್ದೇನು..?
Advertisment
  • ತಮಿಳುನಾಡಿನಲ್ಲಿ ಡಿಎಂಕೆ ಮತ್ತು​ ಬಿಜೆಪಿ ಮಧ್ಯೆ ಜಟಾಪಟಿ
  • ಮೃತ ಎಸ್.ಎ.ಬಾಷಾ ವಿಚಾರವಾಗಿ ಅಣ್ಣಾಮಲೈ ಕಸ್ಟಡಿಗೆ
  • ಡಿಎಂಕೆ ಸರ್ಕಾರದ ವಿರುದ್ಧ ಅಣ್ಣಾಮಲೈ ಆಕ್ರೋಶ

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಕೊನೆಗೆ ರಿಲೀಸ್​​ ಮಾಡಲಾಗಿದ್ದು, ಪೊಲೀಸ್ ನಡೆ ಹಾಗೂ ಡಿಎಂಕೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ಯಪಡಿಸಿದ್ದಾರೆ.

ಆಗಿದ್ದೇನು..?

30 ವರ್ಷಗಳಿಂದ ಜೈಲಿನಲ್ಲಿದ್ದ ನಿಷೇಧಿತ ಅಲ್ ಉಮ್ಮಾ ಸಂಘಟನೆಯ ಮುಖ್ಯಸ್ಥನಾಗಿದ್ದ ಎಸ್.ಎ.ಬಾಷಾಗೆ ಮದ್ರಾಸ್ ಹೈಕೋರ್ಟ್ ಆದೇಶದ ಮೇರೆಗೆ ಜಾಮೀನು ನೀಡಲಾಗಿತ್ತು. ಆರೋಗ್ಯ ಹದಗೆಟ್ಟ ಕಾರಣ ಕೊಯಮತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ.

ಇದನ್ನೂ ಓದಿ:ಮಧ್ಯರಾತ್ರಿ ಗ್ರಾಮಗಳಿಗೆ ನುಗ್ಗಿದ ಗ್ಯಾಂಗ್.. 9 ಮನೆಯಲ್ಲಿ ಲಕ್ಷ ಲಕ್ಷ ಹಣ ಕಳ್ಳತನ; ಬೆಚ್ಚಿ ಬಿದ್ದ ಗ್ರಾಮಸ್ಥರು

ಆತನ ಅಂತ್ಯಕ್ರಿಯೆಗೆ ಪೊಲೀಸರು ಅನುಮತಿ ನೀಡಿದ್ದಕ್ಕೆ ತಮಿಳುನಾಡು ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಬಾಷಾ ಅಂತ್ಯಕ್ರಿಯೆಗೆ ಅನುಮತಿ ನೀಡಿದ ಪೊಲೀಸರ ವಿರುದ್ಧ ಕೊಯಮತ್ತೂರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಘೋಷಿಸಿದ್ದರು. ಅನುಮತಿಯಿಲ್ಲದೇ ಪ್ರತಿಭಟನೆ ನಡೆಸಿದ ಕಾರಣ ಅಣ್ಣಾಮಲೈ ಸೇರಿದಂತೆ ಹಲವರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.

ಅಣ್ಣಾಮಲೈ ಹೇಳಿದ್ದೇನು..?

ಶಾಂತಿಯುತನಗರ ಕೊಯಮತ್ತೂರಿನಲ್ಲಿ 1998ರಲ್ಲಿ 58 ಜನರು ಪ್ರಾಣವನ್ನು ಕಳೆದುಕೊಂಡರು. ಅದಕ್ಕೆ ಕಾರಣನಾಗಿದ್ದ ಉಗ್ರನ ವೈಭವೀಕರಣವನ್ನು ವಿರೋಧಿಸಿ ಬಿಜೆಪಿ ನಾಯಕರು, ಪಕ್ಷದ ಪದಾಧಿಕಾರಿಗಳು ಪ್ರತಿಭಟನೆ ಮಾಡ್ತಿದ್ದಾಗ ಬಂಧಿಸಲಾಗಿದೆ. ಡಿಎಂಕೆ ಸರ್ಕಾರ ಹೇಡಿತನ ಪ್ರದರ್ಶಿಸಿದೆ. ಬಿಜೆಪಿ ಕಾರ್ಯಕರ್ತರು ಸರ್ಕಾರದ ಇಂಥ ಕೃತ್ಯಕ್ಕೆಲ್ಲ ಹೆದರಲ್ಲ. ತಮಿಳುನಾಡಿನ ಜನರ ಪರವಾಗಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಅಣ್ಣಾಮಲೈ ಎಚ್ಚರಿಸಿದ್ದಾರೆ.

ಇದನ್ನೂ ಓದಿ:ಸಿಟಿ ರವಿ ರಿಲೀಸ್​; ಬಿಗ್ ರಿಲೀಫ್ ಸಿಗ್ತಿದ್ದಂತೆ ಅವರ ಪತ್ನಿ ಪಲ್ಲವಿ ಹೇಳಿದ್ದೇನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment