/newsfirstlive-kannada/media/post_attachments/wp-content/uploads/2024/03/nisha-yogesh.jpg)
ಬೆಂಗಳೂರು: ಬಿಜೆಪಿ ನಾಯಕ, ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ವಿರುದ್ಧ ಪುತ್ರಿ ನಿಶಾ ಯೋಗೇಶ್ವರ್ ಸಿಡಿದೆದ್ದಿದ್ದಾರೆ. ಸೋಷಿಯಲ್ ಮೀಡಿಯಾದ ಕಮೆಂಟ್ಗೆ ನಿಶಾ ಪ್ರತ್ಯುತ್ತರ ನೀಡಿದ್ದು, ಕಣ್ಣೀರಿಡುತ್ತಲೇ ತಂದೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ನಿಶಾ ಅವರಿಗೆ ನೀವು ನಿಮ್ಮ ತಂದೆಯ ಹೆಸರು ತೆಗೆದು ಕೆಲಸ ಮಾಡಿ ಎಂದು ಕಮೆಂಟ್ ಮಾಡಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಲು ವಿಡಿಯೋ ಮಾಡಿರುವ ನಿಶಾ ಅವರು, ನನಗೆ 10 ವರ್ಷ ಇದ್ದಾಗಲೇ ನನ್ನ ತಂದೆ ನನ್ನಿಂದ ದೂರ ಹೋದರು. ಚುನಾವಣೆ ಸಮಯದಲ್ಲಿ ನನ್ನನ್ನು ಕರೆಯುತ್ತಾ ಇದ್ದರು. ಆಗ ನಮ್ಮ ತಂದೆ ಪರ ಪ್ರಚಾರಕ್ಕೆ ಹೋಗುತ್ತಿದೆ ಎಂದು ನಿಶಾ ಹೇಳಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ಸೇರ್ತೇನೆ ಎಂದಿದ್ದ ಸಿಪಿ ಯೋಗೇಶ್ವರ್ ಪುತ್ರಿ ನಿಶಾ ಯೂಟರ್ನ್.. ಅಸಲಿಗೆ ಆಗಿದ್ದೇನು?
ಇನ್ನು ವಿಡಿಯೋದಲ್ಲಿ ತಂದೆ ದೂರವಾದ 24 ವರ್ಷದ ಬಳಿಕ ನಾನು ಅವರನ್ನ ನೋಡುತ್ತಿದ್ದೇನೆ. ಚುನಾವಣೆ ಟೈಮ್ನಲ್ಲಿ ಮನೆ ಮನೆಗೆ ತೆರಳಿ ತಂದೆ ಅವರ ಗೆಲುವಿಗೆ ಪ್ರಾರ್ಥನೆ ಮಾಡುತ್ತಿದ್ದೆ. ಆಗ ನಾನು ಸಿ.ಪಿ. ಯೋಗೇಶ್ವರ್ ಅವರಿಗೆ ಆದರ್ಶ ಮಗಳಾಗಿ ಇದ್ದೆ.
ಈಗ ನಾನು ನನ್ನ ಬಗ್ಗೆ ಯೋಚನೆ ಮಾಡುತ್ತಿದ್ದೇನೆ. ಈಗ ನಾನು ಅವ್ರಿಗೆ ಆದರ್ಶ ಮಗಳಲ್ಲ. ತಂದೆ ಹೆಸರು ತೆಗಿದು ಬಿಡಿ ಎಂದು ಕಮೆಂಟ್ ಮಾಡಿರೋರು ಯಾರು ಅನ್ನೋದು ನನಗೆ ಗೊತ್ತು. ಕಮೆಂಟ್ ಮಾಡಿರೋರೆಲ್ಲ ತಂದೆ ಹೆಸರು ಹೇಗೆ ತೆಗೆಯೋದು ಅಂತ ಹೇಳಿ. ಆಧಾರ್ ಕಾರ್ಡ್, ಪಾಸ್ ಪೋರ್ಟ್ನಲ್ಲಿ ಹೆಸರು ಬದಲಿಸಬೇಕು.
View this post on Instagram
ಹೆಸರು ತೆಗೆದ ಮಾತ್ರಕ್ಕೆ ಸಿ.ಪಿ ಯೋಗೇಶ್ವರ್ ನನ್ನ ತಂದೆ ಅಲ್ಲ ಅನ್ನೋಕೆ ಆಗುತ್ತಾ. ಭಗವಂತನ ಇಚ್ಚೆಯಿಂದ ನಾನು ಯೋಗೇಶ್ವರ್ ಮಗಳಾಗಿ ಹುಟ್ಟಿದ್ದೇನೆ. ಕೆಲವರಿಗೆ ನನ್ನ ಹೆಸರೊಂದಿಗೆ ಅವರ ಹೆಸರು ಇರೋದು ಆಗುತ್ತಿಲ್ಲ. ನಿಮ್ಮ ತಂದೆ ತಾಯಿ ಅವ್ರನ್ನ ಅರ್ಥ ಮಾಡಿಕೊಳ್ಳೋಕೆ ಆಗುತ್ತಿಲ್ಲ ಅಂತೀರಾ. ಕಳೆದ 20 ವರ್ಷದಿಂದ ಚಿಕ್ಕಮ್ಮನ ಮಗಳು ನಮ್ಮ ತಂದೆ ಜೊತೆ ಇದ್ದಾಳೆ. ಆದ್ರೆ ಸ್ವಂತ ಮಗಳಾದ ನಾನು ನಮ್ಮ ತಂದೆ ಜೊತೆ ಇರೋಕೆ ಆಗಿಲ್ಲ. ನಮ್ಮ ತಂದೆ, ತಾಯಿ ನನಗೆ ಮಾಡುತ್ತಿರೋದು ಸರಿನಾ ಎಂದು ನಿಶಾ ಯೋಗೇಶ್ವರ್ ಕಮೆಂಟ್ ಮಾಡೋರನ್ನ ಪ್ರಶ್ನೆ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ