newsfirstkannada.com

JDS​​ ಜತೆ ಮೈತ್ರಿಗೆ ಬಿಜೆಪಿಯಲ್ಲೇ ವಿರೋಧ.. ಹೆಚ್​​​ಡಿಕೆಗೆ ಶಾಕ್​ ಮೇಲೆ ಶಾಕ್​​!

Share :

Published February 4, 2024 at 8:23pm

  ಮುಗಿದಿಲ್ಲ ದಳ-ಕಮಲ‘ ಲೋಕ’ ಸೀಟು ಹಂಚಿಕೆ!

  ಜೆಡಿಎಸ್ ಉಪವರಿಷ್ಠರ ‘ಲೋಕ’ ಕೆಮಿಸ್ಟ್ರಿ ಚೇಂಜ್

  ಕೇವಲ ಮೂರು ಕ್ಷೇತ್ರಕ್ಕೆ ಸೀಮಿತವಾಗಿದ್ದೇಕೆ ದಳಪತಿ?

ಬೆಂಗಳೂರು:  ಕಮಲ-ತೆನೆ ದೋಸ್ತಿಯಲ್ಲಿ ಮಹತ್ವದ ಬೆಳವಣಿಗೆ ಆಗ್ತಿದೆ.. 5 ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದ ದಳಪತಿಗಳು ತಮ್ಮ ಬೇಡಿಕೆ 3ಕ್ಕೆ ಸೀಮಿತಗೊಳಿಸಿದ್ದಾರೆ ಅಂತ ಗೊತ್ತಾಗಿದೆ.. ಮಂಡ್ಯ, ಹಾಸನ ಮತ್ತು ಕೋಲಾರದಲ್ಲಿ ಜೆಡಿಎಸ್‌ ಅಭ್ಯರ್ಥಿ ಕಣಕ್ಕಿಳಿಸಲು ತೀರ್ಮಾನಿಸಿದ್ದಾರೆ.. ಆದ್ರೆ, ಇದೇ ಮಂಡ್ಯ, ಹಾಸನದ ಮೇಲೆ ಮಾಜಿ ಶಾಸಕ ಪ್ರೀತಂ ಗೌಡ, ಮಂಡಿಸಿದ ವಾದ, ದಳಪತಿಗಳ ಮಂಡೆ ಬಿಸಿ ಮಾಡಿದೆ.

ಲೋಕಸಭೆ ಎಲೆಕ್ಷನ್​​​ಗೆ ಬಿಜೆಪಿ-ಜೆಡಿಎಸ್ ಮೈತ್ರಿಗೆ ಅಧಿಕೃತ ಮುದ್ರೆ ಬಿದ್ದಿದೆ.. ಆದ್ರೆ ಎಲೆಕ್ಷನ್​​​​ನಲ್ಲಿ ಕಮಲ ತೆನೆ ದೋಸ್ತಿಯಲ್ಲಿ ಸೀಟು ಹಂಚಿಕೆ ಇನ್ನೂ ನಿಗದಿಯಾಗಿಲ್ಲ.. ಕೊಡು-ಕೊಳ್ಳುವಿಕೆ ಇನ್ನಷ್ಟೇ ವ್ಯವಹಾರ ಕುದುರಬೇಕಿದೆ.. ಹಾಸನ, ಮಂಡ್ಯ, ತುಮಕೂರು, ಕೋಲಾರ ಕ್ಷೇತ್ರಗಳಿಗೆ ದಳ ಬೇಡಿಕೆ ಇಡಬಹುದು ಎಂಬ ಲೆಕ್ಕಾಚಾರ ಇದೆ.. ಆದ್ರೆ, ಇದೇ ಫೆಬ್ರವರಿ 10ರ ನಂತರ ಸೀಟು ಹಂಚಿಕೆ ಮಾತುಕತೆ ಮುನ್ನೆಲೆಗೆ ಬರುವ ನಿರೀಕ್ಷೆ ಇದೆ.

ಜೆಡಿಎಸ್​​​ ಉಪ ವರಿಷ್ಠ ಹೆಚ್​​ಡಿಕೆ, ಲೋಕಸಭೆ ರಣತಂತ್ರ
ಐದು ಕ್ಷೇತ್ರ ಬದಲು ಮೂರೇ ಕ್ಷೇತ್ರದಲ್ಲಿ ಸ್ಪರ್ಧೆ ನಿರ್ಧಾರ!?

ರಾಜಕಾರಣ ಕೇವಲ ಗಣಿತ ಮಾತ್ರವಲ್ಲ, ಇಲ್ಲಿ ರಸಾಯನ ವಿಜ್ಞಾನವೂ ಇದೆ.. ಆದ್ರೆ, ಮೈತ್ರಿ ಕಾರಣಕ್ಕೆ ಆರಂಭದಲ್ಲಿದ್ದ ಜೆಡಿಎಸ್​​ನ ಜೋಷ್​​ ಕುಸಿಯುತ್ತಿದೆ.. 5-6 ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು ಅಂತ ಚಿಂತಿಸಿದ್ದ ಜೆಡಿಎಸ್​, ಈಗ ಹಿಮ್ಮುಖವಾಗಿ ಚಲಿಸುತ್ತಿದೆ.. ಹಳೇ ಮೈಸೂರು ಭಾಗದಲ್ಲಿ ತನ್ನ ಪ್ರಾಬಲ್ಯ ಮರು ಸ್ಥಾಪಿಸಲು ಹವಣಿಸ್ತಿದ್ದ ದಳಪತಿ, ಈಗ ತನ್ನ ಟಾರ್ಗೆಟ್​​ ಅನ್ನ ಚಿಕ್ಕದಾಗಿಸಿದೆ.

ಹೌದು, ಐದು ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಚಿಂತಿಸಿದ್ದ ಜೆಡಿಎಸ್​​, ತನ್ನ ಪ್ಲಾನ್​​ನಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿದೆ.. ಐದು ಕ್ಷೇತ್ರಗಳಲ್ಲಿ ಸ್ಪರ್ಧೆ ಬದಲು ಮೂರು ಕ್ಷೇತ್ರಗಳ ಮೇಲಷ್ಟೇ ದಳಪತಿ ದೃಷ್ಟಿ ನೆಟ್ಟಿದ್ದಾರೆ.. ಅಷ್ಟಕ್ಕೂ ಮೂರು ಕ್ಷೇತ್ರಗಳಲ್ಲಷ್ಟೇ ಸ್ಪರ್ಧೆ ಯಾಕೆ? ಈ ತಿರ್ಮಾನದ ಹಿಂದಿನ ಪ್ರಬಲ ಲೆಕ್ಕಾಚಾರ ಏನು? ಹಾಗಾದ್ರೆ, ಜೆಡಿಎಸ್​​​ ಆಯ್ದುಕೊಂಡಿರುವ ಆ ಮೂರು ಕ್ಷೇತ್ರಗಳಾದ್ರು ಯಾವುವು? ಈ ಸ್ಟೋರಿ ಓದಿ!

ಮೂರು ಕ್ಷೇತ್ರ.. ನೂರರಷ್ಟು ಫಲಿತಾಂಶ!

ಲೋಕಸಭೆ ಎಲೆಕ್ಷನ್​​​ಗೆ 5 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಈ ಹಿಂದೆ ದಳ ಪ್ಲಾನ್ ಮಾಡಿತ್ತು.. ಆದರೆ, ಐದರ ಬದಲಿಗೆ 3 ಕ್ಷೇತ್ರಗಳಲ್ಲಿ ಮಾತ್ರವೇ ಸ್ಪರ್ಧಿಸಲು ಚಿಂತನೆ ನಡೆಸಿದೆ.. ತನ್ನ ಭದ್ರಕೋಟೆಯ 3 ಸ್ಥಳಗಳಲ್ಲಿ ಮಾತ್ರ ಸ್ಪರ್ಧೆ ಮಾಡೋಕೆ ದಳ ಲೆಕ್ಕಾಚಾರ ಹೆಣೆದಿದೆ ಎಂದು ಗೊತ್ತಾಗಿದೆ.. ಹಾಸನ, ಮಂಡ್ಯ, ಕೋಲಾರದಲ್ಲಿ ಸ್ಪರ್ಧೆಗೆ ದಳಪತಿ ತೀರ್ಮಾನ ಕೈಗೊಂಡಿದ್ದಾರೆ.. 5 ರಿಂದ 3ಕ್ಕೆ ಸೀಮಿತ ಆಗಲು ಕಾರಣ ಲೋಕಸಭೆ ಗೆಲ್ಲೋದಕ್ಕೆ ಸೂಕ್ತ ಅಭ್ಯರ್ಥಿಗಳ ಕೊರತೆ ಕಾಡ್ತಿದೆ ಅನ್ನೋ ಮಾತು ಕೇಳಿ ಬರ್ತಿದೆ.. ತಾವು ಸ್ಪರ್ಧಿಸಿದ ಕ್ಷೇತ್ರಗಳಲ್ಲಿ ಶೇ.100ರಷ್ಟು ರಿಸಲ್ಟ್​​​ ಪಡೆಯಬೇಕು ಅನ್ನೋ ಕಾರಣಕ್ಕೆ ದಳಪತಿಗಳು ಈ ನಿರ್ಧಾರ ತಳೆದಿದ್ದಾರೆ ಅಂತ ಹೇಳಲಾಗಿದೆ.

ಹಳೇ ಮೈಸೂರು ಭಾಗದ ತಮಗೆ ಬಲ ಇರುವ, ಗೆಲ್ಲುವ ವಾತಾವರಣವಿರುವ 3 ಕ್ಷೇತ್ರದಲ್ಲಿ ಸ್ಪರ್ಧೆಗೆ ಪ್ಲಾನ್​ ರೂಪಿಸಲಾಗಿದೆ.. ಬಿಜೆಪಿ ಜೊತೆ ಜೆಡಿಎಸ್ ದೋಸ್ತಿ ನಿಕ್ಕಿ ಆಗಿದ್ರೂ ಸೀಟು ಹಂಚಿಕೆ ಮಾತುಕತೆ ಆಗದ ಕಾರಣ ಕಾರ್ಯಕರ್ತರನ್ನ ಗೊಂದಲಕ್ಕೆ ಕೆಡವಿದೆ.. ಅಚ್ಚರಿ ಎಂದ್ರೆ ಮಂಡ್ಯ-ಹಾಸನದ ಮೇಲೆ ಬಿಜೆಪಿ ನಾಯಕ ಪ್ರೀತಂಗೌಡ ಹೊಸ ದಾವೆ ಹೂಡಿ, ದಳಪತಿಗೆ ಶಾಕ್​​​ ನೀಡಿದ್ದಾರೆ..

ಹಾಸನ, ಮಂಡ್ಯ ಮೇಲೆ ಹಕ್ಕು.. ಬಿಜೆಪಿ ಹೊಸ ವಾದ

ಮಂಡ್ಯದ ಪಾಂಡವಪುರದಲ್ಲಿ ಪ್ರೀತಂಗೌಡ ಸ್ಪೋಟಕ ಹೇಳಿಕೆ ನೀಡಿದ್ದಾರೆ.. ಎನ್‌ಡಿಎ ಕೂಟಕ್ಕೆ ಜೆಡಿಎಸ್‌ ಸೇರಿದೆ ಅಷ್ಟೇ.. ಯಾವ ಕ್ಷೇತ್ರ ಯಾವ ಪಕ್ಷಕ್ಕೆ ಎಂದು ನಿರ್ಧಾರವಾಗಿಲ್ಲ.. ಹಾಸನ, ಮಂಡ್ಯ ಎರಡು ಕ್ಷೇತ್ರಗಳು ಬಿಜೆಪಿಗೆ ಸಿಗಲಿದೆ ಅಂತ ಹೇಳೋ ಮೂಲಕ ಸ್ನೇಹಕೂಟದಲ್ಲಿ ಹುಳಿ ಹಿಂಡಿದ್ದಾರೆ.. ಅಲ್ಲದೆ, ಒಂದು ವೇಳೆ ಜೆಡಿಎಸ್‌ಗೆ ಕ್ಷೇತ್ರ ಬಿಟ್ಟು ಕೊಟ್ಟರೆ ಅಭ್ಯರ್ಥಿ ಆಯ್ಕೆಯನ್ನ ನಮ್ಮ ಕಾರ್ಯಕರ್ತರ ಒಪ್ಪಿಗೆ ತೆಗೆದುಕೊಳ್ಳಬೇಕು ಅಂತ ಡಿಮ್ಯಾಂಡ್​​ ಇಟ್ಟಿದ್ದಾರೆ.

ಒಟ್ಟಾರೆ, ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಮೈತ್ರಿ ಆರಂಭದಲ್ಲೇ ಅಪಸ್ವರಕ್ಕೆ ತುತ್ತಾಗ್ತಿದೆ.. ಗೌಡರ ಕುಟುಂಬದ ವಿರುದ್ಧವೇ ರಾಜಕಾರಣ ಈಜಿದ ಹಲವು ನಾಯಕರಿಗೆ ಈ ಮೈತ್ರಿ ಸಂಕಟಕ್ಕೆ ದೂಡಿದೆ.. ಆದ್ರೆ, ವರಿಷ್ಠರ ಸೀಟು ಹಂಚಿಕೆ ಆದೇಶದ ಬಳಿಕ ಮೈತ್ರಿ ಅಭ್ಯರ್ಥಿಯನ್ನ ಅಪಸ್ವರಗಳು ಏಕಸ್ವರದಲ್ಲಿ ಗಾಯನ ಪ್ರಸ್ತುತ ಪಡಿಸ್ತಾವಾ ಇಲ್ವಾ ಅನ್ನೋದು ಕಾಲವೇ ಉತ್ತರ ಹೇಳಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

JDS​​ ಜತೆ ಮೈತ್ರಿಗೆ ಬಿಜೆಪಿಯಲ್ಲೇ ವಿರೋಧ.. ಹೆಚ್​​​ಡಿಕೆಗೆ ಶಾಕ್​ ಮೇಲೆ ಶಾಕ್​​!

https://newsfirstlive.com/wp-content/uploads/2023/07/HDD_HDK.jpg

Load More