newsfirstkannada.com

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಕುವೆಂಪು ಘೋಷ ವಾಕ್ಯ ಬದಲಾವಣೆ ಮಾಡಲಾಗಿದ್ಯಾ? ಏನಿದು ವಿವಾದ?

Share :

Published February 19, 2024 at 2:00pm

Update February 19, 2024 at 2:07pm

    ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಅನ್ನೋ ಘೋಷ ವಾಕ್ಯ

    ರಾಷ್ಟ್ರಕವಿ ಕುವೆಂಪು ಅವರ ಘೋಷ ವಾಕ್ಯ ಬದಲಾವಣೆ ಆಗಿದ್ಯಾ?

    ಸದನದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರಿಂದ ಉಗ್ರ ಹೋರಾಟ

ಬೆಂಗಳೂರು: ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ.. ರಾಷ್ಟ್ರಕವಿ ಕುವೆಂಪು ಅವರ ಈ ಘೋಷ ವಾಕ್ಯವನ್ನು ಇಷ್ಟು ದಿನ ರಾಜ್ಯದ ಶಾಲೆಗಳಲ್ಲಿ ಹಾಕಲಾಗಿತ್ತು. ಆದರೆ ಈಗ ರಾಜ್ಯ ಸರ್ಕಾರ ಬದಲಾವಣೆ ಮಾಡಿದೆ ಎನ್ನಲಾಗಿದೆ. ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಅನ್ನೋ ಕಡೆ ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ ಅನ್ನೋ ಬೋರ್ಡ್‌ ಹಾಕಿರೋದು ದೊಡ್ಡ ಸಂಚಲನ ಸೃಷ್ಟಿಸಿದೆ.

ಮೊರಾರ್ಜಿ ದೇಸಾಯಿ ವಸತಿ ಶಾಲೆ, ಸರ್ಕಾರಿ ಶಾಲೆಗಳಲ್ಲಿ ಧ್ಯೇಯ ವಾಕ್ಯ ಬದಲಾವಣೆ ಮಾಡಿರೋದಕ್ಕೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಕೆಂಡಕಾರಿದ್ದಾರೆ. ವಿಧಾನಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಿರುವ ಬಿಜೆಪಿ ಸದಸ್ಯರು, ಕಾಂಗ್ರೆಸ್​​ ಹಿಂದೂ ವಿರೋಧಿ ಮನಸ್ಥಿತಿಯನ್ನ ತೋರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲಾಪದ ಶೂನ್ಯವೇಳೆಯಲ್ಲಿ ಬಿಜೆಪಿ ಶಾಸಕ ವಿಜಯೇಂದ್ರ ಅವರು ವಸತಿ ಶಾಲೆಗಳಲ್ಲಿನ ಘೋಷವಾಕ್ಯ ಬದಲಾಯಿಸಿರುವ ವಿಚಾರವನ್ನು ಪ್ರಸ್ತಾಪ ಮಾಡಿದರು. ಕುವೆಂಪು ಅವರಿಗೆ ಅವಮಾನ ಮಾಡೋ ರೀತಿಯಲ್ಲಿ ಸಮಾಜ ಕಲ್ಯಾಣ ಕಾರ್ಯದರ್ಶಿ ನಡೆದುಕೊಂಡಿದ್ದಾರೆ. ರಾಜ್ಯ ಸರ್ಕಾರದಲ್ಲಿ ಏನು ಆಗ್ತಿದೆ ಎಂಬುದನ್ನು ತಿಳಿಸಬೇಕು. ಸರ್ಕಾರ ಮತ್ತೊಂದು ಮತಿಗೇಡಿತನಕ್ಕೆ ಕೈಹಾಕಿ ವಿಕೃತಿ ಮೆರೆದಿದೆ. ವಿದ್ಯಾರ್ಥಿಗಳನ್ನು ಶಿಕ್ಷಕರ ವಿರುದ್ಧ ಎತ್ತಿಕಟ್ಟಲು ಇದು ಪ್ರಚೋದನೆ ನೀಡುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯೇಂದ್ರ ಅವರ ಮಾತಿನ ಮಧ್ಯೆ ಮಾಜಿ ಸಚಿವ ಅಶ್ವತ್ಥ್ ನಾರಾಯಣ ಅವರು ಧ್ಯೇಯ ವಾಕ್ಯವನ್ನು ಬದಲಾವಣೆ ಮಾಡಿರೋದು ಯಾಕೆ ಎಂದು ಪ್ರಶ್ನಿಸಿದರು. ಆಗ ಸಚಿವ ಕೃಷ್ಣ ಭೈರೇಗೌಡ ಹಾಗೂ ಪ್ರತಿಪಕ್ಷ ನಾಯಕರ ಮಧ್ಯೆ ವಾಕ್ಸಮರ ನಡೆಯಿತು.

ರಾಜ್ಯ ಸರ್ಕಾರದ ಸ್ಪಷ್ಟನೆ ಏನು?
ಶಾಲೆಯ ಘೋಷ ವಾಕ್ಯ ಬದಲಿಸಿದ್ದಕ್ಕೆ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸ್ಪಷ್ಟನೆ ನೀಡಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಕುವೆಂಪು ಆಚಾರ, ವಿಚಾರ ನಾವು ಪ್ರಚಾರ ಮಾಡುತ್ತಿದ್ದೇವೆ ಎಂದಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ. ಮಹದೇವಪ್ಪ ಕುವೆಂಪು ಸಾಹಿತ್ಯ ನಾವೇಕೆ ಬದಲಿಸೋಣ ಎಂದಿದ್ದಾರೆ.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಈ ಕುರಿತು ಮಾತನಾಡಿದ್ದು, ವಸತಿ ಶಾಲೆಯಲ್ಲಿ ಘೋಷ ವಾಕ್ಯ ಬದಲಾವಣೆಯ ಕಾರಣ ಗೊತ್ತಿಲ್ಲ. ಯಾವ ನಿಟ್ಟಿನಲ್ಲಿ ಈ ರೀತಿಯಾಗಿ ವಿಷಯ ಬದಲಾವಣೆ ಮಾಡಿದ್ದಾರೆ ಅಂತ ಗೊತ್ತಿಲ್ಲ. ವಿದ್ಯೆ ಅಂದರೆ ಸರಸ್ವತಿ. ಕೈ ಮುಗಿಯುವುದು ನಮ್ಮ ಸಂಪ್ರದಾಯ. ಅದು ಭಿಕ್ಷೆ ಬೇಡುವುದು ಅಲ್ಲ ಅನ್ನೋದು ನನ್ನ ಅಭಿಪ್ರಾಯ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಕುವೆಂಪು ಘೋಷ ವಾಕ್ಯ ಬದಲಾವಣೆ ಮಾಡಲಾಗಿದ್ಯಾ? ಏನಿದು ವಿವಾದ?

https://newsfirstlive.com/wp-content/uploads/2024/02/Kuvempu-Govt-School.jpg

Load More