Advertisment

ಪ್ರಜ್ವಲ್ ರೇವಣ್ಣನನ್ನು ಮೀರಿಸಿದ BJP ನಾಯಕಿ ಮಗ; 130+ ವಿಡಿಯೋಗಳು ಫುಲ್ ವೈರಲ್!

author-image
admin
Updated On
ಪ್ರಜ್ವಲ್ ರೇವಣ್ಣನನ್ನು ಮೀರಿಸಿದ BJP ನಾಯಕಿ ಮಗ; 130+ ವಿಡಿಯೋಗಳು ಫುಲ್ ವೈರಲ್!
Advertisment
  • ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಗನ ವಿಡಿಯೋ ವೈರಲ್‌
  • ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್​​ ಯಾದವ್ ಟ್ವೀಟ್‌!
  • ಹೊಟೇಲ್, ರೆಸ್ಟೋರೆಂಟ್​ಗಳಲ್ಲಿ ರಹಸ್ಯ ವಿಡಿಯೋಗಳು ರೆಕಾರ್ಡ್‌

ಉತ್ತರ ಪ್ರದೇಶದಲ್ಲೂ ಇದೀಗ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಹೆಸರು ಮಾರ್ದನಿಸುತ್ತಿದೆ. ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್​​ ಯಾದವ್ ತಮ್ಮ ರಾಜ್ಯದಲ್ಲಿನ ಬಿಜೆಪಿ ನಾಯಕಿ ಮಗ ಪ್ರಜ್ವಲ್ ರೇವಣ್ಣರನ್ನ ಮೀರಿಸಿದ್ದಾನೆ ಅನ್ನೋ ಸಂಗತಿಯನ್ನು ತಮ್ಮ ಎಕ್ಸ್​ ಖಾತೆಯಲ್ಲಿ ದಾಖಲಿಸಿದ್ದಾರೆ.

Advertisment


">May 30, 2025

ಶುಭಂ ಗುಪ್ತನ 130+ ವಿಡಿಯೋ ರಹಸ್ಯ
ಉತ್ತರ ಪ್ರದೇಶದ ಮೈನ್​ಪುರಿಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸೀಮಾ ಗುಪ್ತಾ ಮಗ ಶುಭಂ ಗುಪ್ತಾಗೆ ಸಂಬಂಧಿಸಿದ 130ಕ್ಕೂ ಅಧಿಕ ಅಶ್ಲೀಲ ವಿಡಿಯೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಘಟನೆ ಯುಪಿ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸುತ್ತಿದೆ.

publive-image

ಖುಲ್ಲಂಖುಲ್ಲಾ ಗುಪ್ತ್ ವಿಡಿಯೋ ಬಿರುಗಾಳಿ
ಮೈನ್​ಪುರಿಯ ಪ್ರಮುಖ ಹೊಟೇಲ್, ರೆಸ್ಟೋರೆಂಟ್​ಗಳಲ್ಲಿ ಖುದ್ದು ಶುಭಂ ಗುಪ್ತಾ ತೆಗೆದುಕೊಂಡಿರೋ ವಿಡಿಯೋಗಳು ಅವನ ಅಸಲಿ ಮುಖವನ್ನು ಬಿಚ್ಚಿಟ್ಟಿವೆ. ಹಲವು ಮಹಿಳೆಯರೊಂದಿಗೆ ಅತ್ಯಂತ ಅಸಹ್ಯಕರ ಸ್ಥಿತಿಯಲ್ಲಿ ಕಾಣಿಸಿಕೊಂಡಿರೋ ಶುಭಂ ವಿಡಿಯೋಗಳು ಯುಪಿ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿವೆ.

Advertisment

ಇದನ್ನೂ ಓದಿ: ಸ್ಯಾಂಡಲ್‌ವುಡ್‌ ಕಿಸ್​ ಬೆಡಗಿಗೆ ಫಿಕ್ಸ್​ ಆಯ್ತಾ ಮದುವೆ? ಶ್ರೀಲೀಲಾ ಫೋಟೋ ನೋಡಿ ಫ್ಯಾನ್ಸ್ ಶಾಕ್‌! 

publive-image

ಪತ್ನಿಗೂ ಸಿಗರೇಟ್​​ನಿಂದ ಸುಡುತ್ತಿದ್ದ ಶುಭಂ
ಶುಭಂ ಗುಪ್ತಾ, ಪತ್ನಿ ಶೀತಲ್ ಜೊತೆ ಗಲಾಟೆ ಮಾಡಿಕೊಂಡಿದ್ದ. ಇತ್ತೀಚೆಗೆ ತನ್ನ ಗಂಡ ಸ್ಯಾಡಿಸ್ಟ್​ ಅಂತ ಶೀತಲ್ ಹೇಳಿದ್ದಳು. ಆತ ತನ್ನೊಂದಿಗೆ ಅಸಹಜ ಲೈಂಗಿಕ ಶೃಂಗಾರ ಬಯಸುತ್ತಿದ್ದ. ಸಿಗರೇಟ್​​ನಿಂದ ಸುಡುತ್ತಿದ್ದ ಅಂತ ಬಹಿರಂಗವಾಗಿಯೇ ಆರೋಪಿಸಿದ್ದರು. ಈ ಬಗ್ಗೆ ಪತಿಯ ಮೇಲೆ ಶೀತಲ್ ಪೊಲೀಸ್​​ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದಳು. ಹೀಗೆ ದೂರು ದಾಖಲಾದ ಮೇಲೆಯೇ ಈ ವಿಡಿಯೋಗಳು ಲೀಕ್ ಆಗಿದ್ದು, ವೈರಲ್ ಆಗುತ್ತಿವೆ.

publive-image

ಯುಪಿಯಲ್ಲೂ ಪ್ರಜ್ವಲಿಸಿದ ಶುಭಂ ಗುಪ್ತ್ ವಿಡಿಯೋ
ಖುದ್ದು ಶೀತಲ್ ಹೇಳೋ ಪ್ರಕಾರ ಇಂಥಾ ವಿಡಿಯೋಗಳನ್ನೂ ಸಹ ಶುಭಂ ಗುಪ್ತ ತನ್ನ ಪತ್ನಿಗೆ ಬಲವಂತವಾಗಿ ತೋರಿಸುತ್ತಿದ್ದನಂತೆ. ಅಷ್ಟೇ ಅಲ್ಲ, ಆಕೆಯ ವಿಡಿಯೋಗಳನ್ನೂ ಸಹ ಚಿತ್ರೀಕರಿಸುತ್ತಿದ್ದನಂತೆ.. ನಾಲ್ಕು ವರ್ಷ ಕಾಲ ಮಾನಸಿಕವಾಗಿ, ದೈಹಿಕವಾಗಿ ಹಿಂಸಿಸಿದ್ದ ಅಂತಲೂ ಶೀತಲ್ ದೂರಿದ್ದಾರೆ. ಆದರೇ, ಈ 130 ವಿಡಿಯೋಗಳು ಹೇಗೆ ಲೀಕ್ ಆದ್ವು ಅನ್ನೋ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಶುಭಂ ಗುಪ್ತಾ ಪತ್ನಿಯೇ ಇವುಗಳನ್ನ ಲೀಕ್ ಮಾಡಿರಬಹುದು ಅಂತ ಅಂದಾಜಿಸಲಾಗುತ್ತಿದೆ. ಇದೇ ವಿಡಿಯೋಗಳ ಮಾಹಿತಿಯನ್ನು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿರೋ ಅಖಿಲೇಶ್​​ ಯಾದವ್, ಕರ್ನಾಟಕದಲ್ಲಿನ ಪ್ರಜ್ವಲ್ ರೇವಣ್ಣ ಅವರನ್ನೂ ಶುಭಂ ಗುಪ್ತಾ ಹಿಂದಿಕ್ಕಿದ್ದಾರೆ ಅಂತ ಬರೆದುಕೊಂಡಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment