/newsfirstlive-kannada/media/post_attachments/wp-content/uploads/2024/12/BDR-SACHIN-PANCHAL.jpg)
ಬೀದರ್ ಜಿಲ್ಲೆಯ ಯುವ ಗುತ್ತಿಗೆದಾರ ಸಚಿನ್ ಪಂಚಾಳ ಪ್ರಕರಣ ದಿನದಿಂದ ಕಾವೇರುತ್ತಿದ್ದು, ರಾಜಕೀಯ ಕೆಸರರೆಚಾಟಕ್ಕೆ ವೇದಿಕೆ ಆದಂತೆ ಕಾಣುತ್ತಿದೆ. ಸಚಿನ್ ಮೃತನಾದ ಮೂರು ದಿನಗಳ ಬಳಿಕ ರಾಜಕೀಯ ನಾಯಕರು ತಂಡೋಪಾದಿಯಲ್ಲಿ ಗುತ್ತಿಗೆದಾರ ಸಚಿನ್ ಮನೆಗೆ ಬಂದು ಸಾಂತ್ವನ ಹೇಳುತ್ತಿದ್ದಾರೆ. ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯಾಗಿರೋ ಆತ್ಮಹತ್ಯೆ ವಿಚಾರ ಇಟ್ಟುಕೊಂಡು ಪರಸ್ಪರ ವಾಗ್ದಾಳಿ ನಡೆಸುತ್ತಿದ್ದಾರೆ.
ಗುತ್ತಿಗೆದಾರ ಸಚಿನ್​ ನಿವಾಸಕ್ಕೆ ಬಿಜೆಪಿ ನಿಯೋಗ ಭೇಟಿ, ಸ್ವಾಂತನ
ಬೀದರ್​ನ ಯುವ ಗುತ್ತಿಗೆದಾರ ಸಚಿನ್​ ಪಂಚಾಳ ಆತ್ಮಹತ್ಯೆ ವಿವಾದ ದಿನದಿಂದ ದಿನದಕ್ಕೆ ತಾರಕಕ್ಕೇರಿತ್ತಿದೆ. ಸಚಿವ ಪ್ರಿಯಾಂಕ್​ ಖರ್ಗೆ ಆಪ್ತನ ಬೆದರಿಕೆಯಿಂದ ಡೆತ್​ನೋಟ್​ ಹರಿಬಿಟ್ಟು, ಸಚಿನ್​ ರೈಲಿಗೆ ತಲೆಕೊಟ್ಟಿದ್ದ.. ಗುತ್ತಿಗೆದಾರನ ಆತ್ಮಹತ್ಯೆ ಹಿಂದೆ ಸಚಿವರ ಹೆಸರು ಕೇಳಿ ಬರ್ತಿದ್ದಂತೆ, ಇದನ್ನೇ ಅಸ್ತ್ರ ಮಾಡಿಕೊಂಡ ಬಿಜೆಪಿ ಸಚಿವ ಪ್ರಿಯಾಂಕ್​ ಖರ್ಗೆ ರಾಜೀನಾಮೆಗೆ ಪಟ್ಟು ಹಿಡಿದೆ. ಇತ್ತ ಸರ್ಕಾರ ಸಿಐಡಿ ತನಿಖೆಗೆ ಒಪ್ಪಿಸಿ ಸೈಲೆಂಟ್​ ಆಗಿದೆ. ಇದರ ನಡುವೆ ಸಾವಿನ ಮನೆಯಲ್ಲೂ ಕಾಂಗ್ರೆಸ್​ ಮತ್ತು ಬಿಜೆಪಿ ರಾಜಕೀಯ ಕೆಸರೆರಚಾಟ ಮುಂದುವರಿದಿದೆ.
ಇದನ್ನೂ ಓದಿ:ಅದೊಂದು ಪತ್ರದಿಂದ ಕಲಬುರಗಿ ಕಮಲ ಪಡೆಯಲ್ಲಿ ಭಯ.. ದೂರು ನೀಡಲು ಹೋದ್ರೆ ಠಾಣೆಯಲ್ಲಿ ಹೈಡ್ರಾಮಾ
ಸಚಿವ ಪ್ರಿಯಾಂಕ್​ ಖರ್ಗೆ ಆಪ್ತ ರಾಜು ಕಪನೂರ ಬೆದರಿಕೆಯಿಂದ ಗುತ್ತಿಗೆದಾರ ಸಚಿನ್​ ಆತ್ಮಹತ್ಯೆ ಮಾಡಿಕೊಂಡು 3 ದಿನಗಳ ಬಳಿಕ ರಾಜಕೀಯ ಮೇಲಾಟಗಳಿಗೆ ವೇದಿಕೆ ಆಗಿದೆ. ದಿನಕ್ಕೊಂದು ತಂಡದಂತೆ ಬಿಜೆಪಿ ನಾಯಕರು ಸಚಿನ್​ ಮನೆಗೆ ತೆರಳಿ ಸಾಂತ್ವನ ಹೇಳ್ತಿದ್ದಾರೆ. ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದ ನಿಯೋಗ ಸಚಿನ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದೆ. ಈ ವೇಳೆ ಬಿಜೆಪಿ ನಿಯೋಗ ಸಚಿನ್​ ಕುಟುಂಬಕ್ಕೆ ಪರಿಹಾರವಾಗಿ 5 ಲಕ್ಷಣವನ್ನು ನೀಡಲು ಮುಂದಾಯ್ತು.. ಆದ್ರೆ ಇದನ್ನು ಸ್ವೀಕರಿಸದ ಕುಟುಂಬಸ್ಥರು.. ನಮಗೆ ಹಣ, ಸಚಿನ್​ ಸಾವಿಗೆ ನ್ಯಾಯಕೊಡಿಸುವಂತೆ ಬಿಜೆಪಿ ನಾಯಕರ ಮುಂದೆ ಅಂಗಲಾಚಿ ಹವಲೊತ್ತುಕೊಂಡಿದೆ.
ಪ್ರಿಯಾಂಕ್​ ಖರ್ಗೆ ರಾಜೀನಾಮೆ ನೀಡೋವರೆಗೂ ಹೋರಾಟ
ಗುತ್ತಿಗೆದಾರ ಸಚಿನ್​ ಕುಟುಂಬಕ್ಕೆ ಸಾಂತ್ವನ ಹೇಳಿದ ಬಿ.ವೈ.ವಿಜಯೇಂದ್ರ, ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ರು. ಇಂಥ ಕುಟುಂಬಕ್ಕೆ ಅನ್ಯಾಯ ಆಗೋದಕ್ಕೆ ಬಿಡಬಾರದು.. ನಾವೂ ಕೂಡ ಬಿಡಲ್ಲ.. ಈ ಕೇಸ್​ ಅನ್ನು ಸಿಬಿಐಗೆ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದ್ರು. ಹಾಗೂ ಸಚಿವ ಪ್ರಿಯಾಂಕ್​ ಖರ್ಗೆ ರಾಜೀನಾಮೆ ನೀಡೋವರೆಗೂ ಬಿಜೆಪಿ ಹೋರಾಟ ನಿಲ್ಲಲ್ಲ ಎಂದು ಕಿಡಿಕಾರಿದ್ರು.
ಇದನ್ನೂ ಓದಿ: ಯುವ ಗುತ್ತಿಗೆದಾರ ಸಚಿನ್ ಪ್ರಕರಣಕ್ಕೆ ರಾಜಕೀಯ ಟಚ್; ಸಚಿವರ ತಲೆದಂಡಕ್ಕೆ ಬಿಜೆಪಿ ಪಟ್ಟು..!
ಗುತ್ತಿಗೆದಾರ ಸಚಿನ್​ ಆತ್ಮಹತ್ಯೆ ಪ್ರಕರಣವನ್ನು ಬಿಜೆಪಿ ಅಸ್ತ್ರ ಮಾಡಿಕೊಳ್ಳಲು ಮುಂದಾಗ್ತಿದ್ದಂತೆ ಎಚ್ಚೆತ್ತ ಸರ್ಕಾರ, ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದೆ. ವಿಜಯೇಂದ್ರ ಭೇಟಿ ಮೊದ್ಲೇ ಸಚಿನ್​ ನಿವಾಸಕ್ಕೆ ತೆರಳಿದ ಸಚಿವ ಈಶ್ವರ್​ ಖಂಡ್ರೆ, ಕುಟುಂಬಕ್ಕೆ ಸಾಂತ್ವನ ಹೇಳಿದ್ರು. ಈ ವೇಳೆ, ಪೊಲೀಸ್ರ ವಿರುದ್ಧ ಸಚಿನ್​ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ರು. ಎಸ್​​ಪಿ ಸೇರಿ ಎಲ್ಲರನ್ನೂ ಹೊರಗೆ ಕಳಿಸುವಂತೆ ಅಸಮಾಧಾನ ತೋಡ್ಕೊಂಡ್ರು. ಬಳಿಕ ಕುಟುಂಬಕ್ಕೆ ಧೈರ್ಯ ತುಂಬಿದ ಈಶ್ವರ್​ ಖಂಡ್ರೆ ನ್ಯಾಯದ ಭರಸವೆ ನೀಡಿ, ಬಿಜೆಪಿ ಪ್ರತಿ ವಿಷ್ಯದಲ್ಲೂ ರಾಜಕೀಯ ಮಾಡ್ತಿದೆ ಎಂದು ಕಿಡಿಕಾರಿದ್ರು.
ಸಚಿನ್ ಆತ್ಮಹತ್ಯೆ ಪ್ರಕರಣ ರಾಜ್ಯಾದ್ಯಂತ ಸಂಚಲನ ಮೂಡಿಸುತ್ತಿದ್ದು, ಇದರ ಜೊತೆಗ ಕಾಂಗ್ರೆಸ್, ಬಿಜೆಪಿ ನಡುವಿನ ರಾಜಕೀಯ ವಾಕ್ಸಮರಕ್ಕೂ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಇದು ಯಾವ ರೂಪ ಪಡೆದುಕೊಳ್ಳುತ್ತೆ ಅನ್ನೋದನ್ನ ಕಾದು ನೋಡಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us