newsfirstkannada.com

ರಾಮಮಂದಿರದ ಬಳಿಕ ದೇಶದಲ್ಲಿ ಮತದಾರನ ಒಲವು ಬದಲಾಯ್ತಾ? NDAಗೆ ಎಷ್ಟು? I.N.D.I.A ಗೆಲ್ಲೋದೆಷ್ಟು?

Share :

Published February 8, 2024 at 11:49am

Update February 8, 2024 at 11:54am

    ಉತ್ತರ ಪ್ರದೇಶದಲ್ಲಿ ಹೆಚ್ಚು ಸ್ಥಾನ ಗೆದ್ದು ಬಿಜೆಪಿ ಕಮಾಲ್ ಮಾಡುತ್ತಾ?​

    ಉತ್ತರ ಭಾರತದಲ್ಲಿ ಮತ್ತೆ ಸಿಎಂ ಯೋಗಿ- ಪಿಎಂ ಮೋದಿ ಜೋಡಿ ಮ್ಯಾಜಿಕ್

    ರಾಮಮಂದಿರ ಲೋಕಾರ್ಪಣೆ ಬಳಿಕ ಮತದಾರನ ಮನದಾಳವೇನು?

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲುವಿನ ಮಾಲೆ ಯಾವ ಪಕ್ಷದ ಪಾಲಾಗಲಿದೆ. ಎನ್​​ಡಿಎ ಕೂಟ ಹ್ಯಾಟ್ರಿಕ್​ ಜಯಭೇರಿ ಬಾರಿಸುತ್ತಾ, ಇಲ್ಲವಾದರೆ I.N.D.I.A ಮೈತ್ರಿಕೂಟ ಬಿಜೆಪಿಗೆ ಎದೆಯೊಡ್ಡಿ ನಿಲ್ಲುತ್ತಾ?. ಲೋಕ ಸಮರದಲ್ಲಿ ಬಿಜೆಪಿ ದಾಖಲೆ ಗೆಲುವು ಪಡೆದು ಹೊರ ಹೊಮ್ಮುತ್ತಾ. ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಬಳಿಕ ಮತದಾರನ ಮನದಾಳ ಅರಿಯಲು ಟೈಮ್ಸ್​ ನೌ ಮೆಗಾ ಸರ್ವೆ ಮಾಡಿದ್ದು ಮಂದಿರ ಉದ್ಘಾಟನೆ ಬಳಿಕ ‘ಲೋಕ’ ಲೆಕ್ಕಾಚಾರ ಬದಲಾಗಿದೆ ಎಂಬುವ ಪ್ರಶ್ನೆ ಹುಟ್ಟಿಕೊಂಡಿದೆ.

ಟೈಮ್ಸ್​ ನೌ ಮೆಗಾ ಸರ್ವೆ ಪ್ರಕಾರ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ವಿಜಯ ಪತಾಕೆ ಹಾರಿಸಲಿದೆ. ಪ್ರಧಾನಿ ಮೋದಿ ನಾಯಕತ್ವಕ್ಕೆ ಮತದಾರನ ಫುಲ್ ಮಾರ್ಕ್ಸ್​ ಕೊಡುತ್ತಾನೆಂದು ಹೇಳಿದ್ದು ಚುನಾವಣೆಯಲ್ಲಿ 366 ಸ್ಥಾನಗಳಲ್ಲಿ ಎನ್​ಡಿಎ ಕೂಟ ಗೆಲುವು ಪಡೆಯಲಿದೆ. ಬಿಜೆಪಿ ಒಂದೇ ಏಕಾಂಗಿಯಾಗಿ 323 ಸ್ಥಾನಗಳಲ್ಲಿ ಗೆಲ್ಲಬಹುದೆಂದು ಹೇಳಿದೆ. ಇದರಲ್ಲಿ I.N.D.I.A ಕೂಟಕ್ಕೆ ಭಾರೀ ಹಿನ್ನಡೆಯಾಗಿದ್ದು 104 ಸ್ಥಾನಗಳಿಗೆ ಮಾತ್ರ ತೃಪ್ತಿಪಟ್ಟುಕೊಳ್ಳಲಿದೆ ಎಂದು ಟೈಮ್ಸ್​ ನೌ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಭವಿಷ್ಯ ನುಡಿದಿದೆ.

UPಯಲ್ಲಿ ಹೇಗಿದೆ ಮೋದಿ-ಯೋಗಿ ತಂತ್ರ

ಉತ್ತರ ಪ್ರದೇಶದಲ್ಲೂ ಬಿಜೆಪಿ ಅತಿ ಹೆಚ್ಚು ಸ್ಥಾನಗಳಲ್ಲಿ ಕಮಾಲ್ ಮಾಡಲಿದೆ. ಯುಪಿಯ 80 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 77ರಲ್ಲಿ ಗೆಲುವು ಪಡೆಯಲಿದೆ. ರಾಮಮಂದಿರ ಲೋಕಾರ್ಪಣೆ ಬಳಿಕ ಮತದಾರರು ಬಿಜೆಪಿ ಪರ ಒಲವು ತೋರಿದ್ದಾರೆ ಎನ್ನಲಾಗಿದೆ. ಕಳೆದ ಬಾರಿ 62 ಸ್ಥಾನಗಳಲ್ಲಿ ಗೆದ್ದಿದ್ದ ಬಿಜೆಪಿ ಈ ಬಾರಿ ಬಿಜೆಪಿ ಸ್ಥಾನಗಳಿಕೆಯಲ್ಲಿ ಗಣನೀಯ ಏರಿಕೆ ಕಾಣಲಿದೆ. ಉತ್ತರ ಪ್ರದೇಶದಲ್ಲಿ I.N.D.I.A ಕೂಟಕ್ಕೆ ಭಾರೀ ಮುಖಭಂಗವಾಗಲಿದ್ದು 3 ಸ್ಥಾನಗಳನ್ನ ಮಾತ್ರ ಪಡೆಯಲಿದೆ. ಟೈಮ್ಸ್​ ನೌ ಸಮೀಕ್ಷೆ ವಿಪಕ್ಷಗಳ ಕೂಟಕ್ಕೆ ಹಿನ್ನಡೆ ಸೂಚನೆ ನೀಡಿದೆ.

ಉತ್ತರ ಪ್ರದೇಶದಲ್ಲಿ ಯೋಗಿ-ಮೋದಿ ಮ್ಯಾಜಿಕ್​

  • NDA- 77
  • I.N.D.I.A- 03
  • OTH- 00

ಟೈಮ್ಸ್​ ನೌ ಸರ್ವೆಯಲ್ಲಿ ಎನ್​ಡಿಎಗೆ ಹ್ಯಾಟ್ರಿಕ್ ಗೆಲುವು​​

ದೇಶದಲ್ಲಿ ಲೋಕಸಭಾ ಕ್ಷೇತ್ರಗಳು ಒಟ್ಟು 543 ಇವೆ. ಇದರಲ್ಲಿ ಎನ್​ಡಿಎ ಅಂದರೆ ಬಿಜೆಪಿಯ ಆಪ್ತ ಪಕ್ಷಗಳು 366 ಕ್ಷೇತ್ರಗಳಲ್ಲಿ ವಿಜಯಿ ಆಗಲಿವೆ. ಆದರೆ ಕಾಂಗ್ರೆಸ್​ನ ಇಂಡಿಯಾ ಒಕ್ಕೂಟ 104 ಸ್ಥಾನಗಳಲ್ಲಿ ಮಾತ್ರ ಗೆಲ್ಲಲಿದೆ. ಇನ್ನು ಇತರೆ ಪಕ್ಷಗಳು ಅಂದರೆ 73 ಸ್ಥಾನಗಳನ್ನು ಪಡೆದುಕೊಳ್ಳಲ್ಲಿವೆ ಎಂದು ಸರ್ವೆ ಹೇಳಿದೆ.

ದೇಶದಲ್ಲಿನ ಒಟ್ಟು- 543 ಕ್ಷೇತ್ರಗಳು

  • NDA- 366
  • I.N.D.I.A- 104
  • OTH- 73

ಪ್ರಧಾನಿ ಅಭ್ಯರ್ಥಿಗಳಲ್ಲಿ ಯಾರು ಬೆಸ್ಟ್ ಎನ್ನುವ ಸಮೀಕ್ಷೆ​?

  • ನರೇಂದ್ರ ಮೋದಿ – ಶೇ.61.4
  • ರಾಹುಲ್ ಗಾಂಧಿ – ಶೇ.31.8
  • ಕೇಜ್ರಿವಾಲ್​​​ – ಶೇ.3.7

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮಮಂದಿರದ ಬಳಿಕ ದೇಶದಲ್ಲಿ ಮತದಾರನ ಒಲವು ಬದಲಾಯ್ತಾ? NDAಗೆ ಎಷ್ಟು? I.N.D.I.A ಗೆಲ್ಲೋದೆಷ್ಟು?

https://newsfirstlive.com/wp-content/uploads/2024/02/MODI_KAMALA_1.jpg

Load More