newsfirstkannada.com

ಡಿ.ಕೆ ಸುರೇಶ್ ಸೋಲಿಸಲು BJP ಜೊತೆ JDS ಹೊಂದಾಣಿಕೆ?; ಸೇಡು ತೀರಿಸಿಕೊಳ್ಳಲು ಬೆಂಬಲ ನೀಡ್ತಾರಾ ಕುಮಾರಸ್ವಾಮಿ

Share :

27-06-2023

    ವಿಧಾನಸಭೆ ಎಲೆಕ್ಷನ್​ನಲ್ಲಿ ಗೆದ್ದವರ ವಿರುದ್ಧ ಸೋತವರ ರಣತಂತ್ರವೇನು?

    ಯೋಗೇಶ್ವರ್, ಅಶ್ವತ್ಥ್​ ನಾರಾಯಣ್ ಜೆಡಿಎಸ್ ಜೊತೆ ಮೈತ್ರಿಗೆ ಒಲವು

    ಡಿ.ಕೆ.ಸುರೇಶ್ ವಿರುದ್ಧ​​ ಅಭ್ಯರ್ಥಿ ಹಾಕದೆ ಬೆಂಬಲ ನೀಡ್ತಾರಾ ಹೆಚ್​ಡಿಕೆ?

ಬೆಂಗಳೂರು: ವಿಧಾನಸಭಾ ಚುನಾವಣೆ ಮುಗಿದ ಬಳಿಕ ರಾಜ್ಯದಲ್ಲಿ 2024ರ ಲೋಕಸಭಾ ಚುನಾವಣೆಗೆ ತಯಾರಿಗಳು ತೆರೆಮರೆಯಲ್ಲೇ ಶುರುವಾಗಿದೆ. ವಿಧಾನಸಭೆ ಎಲೆಕ್ಷನ್​ನಲ್ಲಿ ಗೆದ್ದವರ ವಿರುದ್ಧ ಸೋತವರ ರಣತಂತ್ರಗಳು ರೆಡಿಯಾಗ್ತಿವೆ. ಇದರಲ್ಲಿ ಪ್ರಮುಖವಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಸಹೋದರ ಡಿ.ಕೆ ಸುರೇಶ್ ಅವರಿಗೆ ಸೋಲಿನ ರುಚಿ ತೋರಿಸಲು ಜೆಡಿಎಸ್‌ ಜೊತೆ ಹೊಂದಾಣಿಕೆಗೆ ಬಿಜೆಪಿ ನಾಯಕರು ಒಲುವು ತೋರಿರೋದು ಅಚ್ಚರಿಗೆ ಕಾರಣವಾಗಿದೆ.

ಡಿ.ಕೆ ಸುರೇಶ್ ಅವರು ರಾಜ್ಯದ ಏಕೈಕ ಹಾಲಿ ಕಾಂಗ್ರೆಸ್ ಸಂಸದ, ಡಿಸಿಎಂ ಡಿಕೆ ಶಿವಕುಮಾರ್ ಅವರ ಸಹೋದರ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿಕೆ ಬ್ರದರ್ಸ್ ಅನ್ನು ಕಟ್ಟಿ ಹಾಕಲು BJP ಜೊತೆ JDS ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಈ ಜಿದ್ದಾಜಿದ್ದಿನ ಲೋಕಸಭಾ ಕ್ಷೇತ್ರದಲ್ಲಿ ಶತ್ರುವಿನ ಶತ್ರು ಮಿತ್ರನ ಆಟ ಶುರುವಾಗುತ್ತೆ ಎನ್ನಲಾಗ್ತಿದೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸಂಸದ ಡಿ.ಕೆ.ಸುರೇಶ್​​ಗೆ ಸೋಲಿನ ರುಚಿ ತೋರಿಸಲು ಆರೋಪ, ಪ್ರತ್ಯಾರೋಪ ಮಾಡ್ತಿದ್ದವರು ಕೈಜೋಡಿಸೋ ಸಾಧ್ಯತೆ ಇದೆ. ಮಾಜಿ ಶಾಸಕ ಸಿಪಿ ಯೋಗೇಶ್ವರ್‌, ಮಾಜಿ ಡಿಸಿಎಂ ಅಶ್ವತ್ಥ​ ನಾರಾಯಣ್ ಜೆಡಿಎಸ್ ಜೊತೆ ಮೈತ್ರಿಗೆ ಒಲವು ತೋರಿದ್ದಾರೆ ಅನ್ನೋ ಮಾತು ಕೇಳಿ ಬರ್ತಿದೆ.

ಡಿಕೆ ಬ್ರದರ್ಸ್ ಶತ್ರುವಿನ ಶತ್ರು ಮಿತ್ರ!
ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಂಸದ ಡಿಕೆ ಸುರೇಶ್ ಅವರನ್ನ ಶತಾಯಗತಾಯ ಕಟ್ಟಿ ಹಾಕಲು ಬಿಜೆಪಿ ನಾಯಕರಾದ ಸಿಪಿ ಯೋಗೇಶ್ವರ್‌, ಅಶ್ವತ್ಥ​ ನಾರಾಯಣ್ ಭರ್ಜರಿ ಪ್ಲಾನ್ ಮಾಡಿದ್ದಾರೆ. ಹೀಗಾಗಿ ಜೆಡಿಎಸ್ ಜೊತೆ ಹೊಂದಾಣಿಕೆಗೆ ಮುಂದಾಗಿದ್ದು, ಎಂಪಿ ಎಲೆಕ್ಷನ್​ನಲ್ಲಿ ಡಿ.ಕೆ.ಸುರೇಶ್ ಸೋಲಿಸಲು ಬಿಜೆಪಿ, ಜೆಡಿಎಸ್‌ ಒಂದಾಗುತ್ತಾರಾ ಅನ್ನೋ ಚರ್ಚೆ ಜೋರಾಗಿದೆ.

ಈ ಬಾರಿ ರಾಮನಗರ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಕೂಡ ಆಘಾತ ಎದುರಿಸಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರ ಸೋಲು ಹೆಚ್‌ಡಿಕೆ ಸಹಿಸಿಕೊಳ್ಳೋದು ಕಷ್ಟವಾಗಿದೆ. ರಾಮನಗರ ವಿಧಾನಸಭಾ ಸೋಲಿಗೆ ಸೇಡು ತೀರಿಸಿಕೊಳ್ತಾರಾ HDK ಅನ್ನೋದು ಇಲ್ಲಿ ಮುಖ್ಯವಾಗಿದೆ.

ಇದನ್ನೂ ಓದಿ: ‘ಚರಿತ್ರೆ ಗೊತ್ತಿಲ್ಲ ಅಂದ್ರೆ ಚರಿತ್ರೆ ಸೃಷ್ಟಿಸೋಕೆ ಸಾಧ್ಯವಿಲ್ಲ’ ಡಿಕೆಎಸ್​-ಅಶ್ವಥ್ ನಾರಾಯಣ್ ಮಧ್ಯೆ ಮತ್ತೆ ‘ಕೌಂಟರ್’ ವಾರ್​​..!

ಬೆಂಗಳೂರು ಗ್ರಾಮಾಂತರದಲ್ಲಿ ಅಭ್ಯರ್ಥಿ ಹಾಕದೇ ಬಿಜೆಪಿಗೆ ಬೆಂಬಲ ಪ್ರತಿಯಾಗಿ ಜೆಡಿಎಸ್ ಕೇಳಿದ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲ ನೀಡುವ ಸಾಧ್ಯತೆಯಿದೆ. ಡಿ.ಕೆ ಸುರೇಶ್ ಅವರನ್ನು ಸೋಲಿಸೋ ಬಗ್ಗೆ ಬಿಜೆಪಿ ನಾಯಕರು ಬಹಿರಂಗವಾಗಿಯೇ ಹೇಳಿಕೆ ಕೊಡುತ್ತಿದ್ದಾರೆ. ಅಭ್ಯರ್ಥಿ ಹಾಕದೆ ಬಿಜೆಪಿಗೆ ಬೆಂಬಲ ನೀಡ್ತಾರಾ ಹೆಚ್​ಡಿಕೆ? ವಿಧಾನಸಭೆ ಎಲೆಕ್ಷನ್​ನಲ್ಲಿ ಗೆದ್ದವರ ವಿರುದ್ಧ ಸೋತವರ ರಣತಂತ್ರ ಸಕ್ಸಸ್ ಆಗುತ್ತಾ ಅನ್ನೋದೇ ಕುತೂಹಲಕಾರಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಡಿ.ಕೆ ಸುರೇಶ್ ಸೋಲಿಸಲು BJP ಜೊತೆ JDS ಹೊಂದಾಣಿಕೆ?; ಸೇಡು ತೀರಿಸಿಕೊಳ್ಳಲು ಬೆಂಬಲ ನೀಡ್ತಾರಾ ಕುಮಾರಸ್ವಾಮಿ

https://newsfirstlive.com/wp-content/uploads/2023/06/Dk-Suresh-Election.jpg

Load More