newsfirstkannada.com

ರಾಜಕೀಯ vs ಸಿನಿಮಾ; ಇಂಡಸ್ಟ್ರೀ ಬಿಟ್ಟು ಬಿಡ್ತಾರಾ ಕಂಗಾನಾ? ಏನಂದ್ರು?

Share :

Published May 7, 2024 at 1:16pm

Update May 7, 2024 at 2:21pm

    ಕಂಗನಾ ರನೌತ್​ ಕೈಯಲ್ಲಿದೆ ಸಾಲು ಸಾಲು ಸಿನಿಮಾ

    ಬಿಜೆಪಿಯಿಂದ ಸ್ಪರ್ಧಿಸುತ್ತಿರೋ ಕಂಗನಾ ಸಿನಿಮಾ ಇಂಡಸ್ಟ್ರೀ ತೊರೆದರೇ?

    ಕಾಂಗ್ರೆಸ್​ ಭದ್ರಕೋಟೆ ಮಂಡಿಯಿಂದ ಸ್ಪರ್ಧಿಸುತ್ತಿದ್ದಾರೆ ಈ ಬಾಲಿವುಡ್​ ಕ್ವೀನ್​

ಬಾಲಿವುಡ್​ ಬ್ಯೂಟಿ ಕಂಗನಾ ರನೌತ್​​ ರಾಜಕೀಯ ಪ್ರವೇಶ ಮಾಡಿರೋ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಬಿಜೆಪಿ ಪಕ್ಷ ಸೇರಿರುವ ‘ಕ್ವೀನ್’ ಈ ಬಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಮಂಡಿ ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿಯಾದ ಕಣಕ್ಕಿಳಿದ ಅವರು ಪೈಪೋಟಿ ನೀಡುತ್ತಿದ್ದಾರೆ. ಅದರ ಜೊತೆಗೀಗ ನಟಿ ಸಿನಿಮಾ ಇಂಡಸ್ಟ್ರೀ ಮತ್ತು ತಮ್ಮ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

ನಟಿ ಕಂಗನಾ ಸಿನಿಮಾ ಇಂಡಸ್ಟ್ರೀ ಬಿಡಲು ಹೋಗುವುದಿಲ್ಲ ಎಂದು ಹೇಳಿದ್ದಾರೆ. ನನ್ನ ಅನೇಕ ಸಿನಿಮಾಗಳು ಬಾಕಿ ಉಳಿಸಿಕೊಂಡಿರುವ ಕಾರಣ ನಾನು ಆ ಉದ್ಯೋಗ ತೊರೆಯುವುದಿಲ್ಲ ಎಂದಿದ್ದಾರೆ.

ಬಿಜೆಪಿ ಪಕ್ಷ ಲೋಕಸಭಾ ಚುನಾವಣೆಗೆ ಕಂಗನಾ ಅವರನ್ನು ಹಿಮಾಚಲ ಪ್ರದೇಶದ ಮಂಡಿಯಿಂದ ಕಣಕ್ಕಿಳಿಸಿದೆ. ಕಾಂಗ್ರೆಸ್​​ ಭದ್ರಕೋಟೆಯಾದ ಹಿಮಾಚಲ ಪ್ರದೇಶದ ಮಂಡಿಯಲ್ಲಿ ಈ ಬಾರಿ ಏನಾಗಲಿದೆ ಎಂದು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ.

ಕಂಗನಾ ‘ತೇಜಸ್’​ ಸಿನಿಮಾದ ಬಳಿಕ ಇಂದಿರಾ ಗಾಂಧಿ ಪಾತ್ರದಲ್ಲಿ ಎಮೆರ್ಜೆನ್ಸಿ ಸಿನಿಮಾ ಮಾಡುತ್ತಿದ್ದಾರೆ. ಇದರಲ್ಲಿ ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿಯವರಂತೆ ಕಾಣಿಸಿಕೊಳ್ಳಲ್ಲಿದ್ದಾರೆ. ಇದರ ಜೊತೆಗೆ ಸೈಕೊಲಾಜಿಕಲ್​ ಥ್ರಿಲ್ಲರ್​ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.

ಇದನ್ನೂ ಓದಿ: Iphone 16 ಬಿಡುಗಡೆಗೂ ಮುಂಚೆಯೇ ಲೀಕ್​ ಆಯ್ತು ‘ಐಫೋನ್​ 17 ಸ್ಲಿಮ್’​ ಫೀಚರ್ಸ್​.. ಹೇಗಿರಲಿದೆ?

ಆದರೆ ಸದ್ಯ ಲೋಕಸಭಾ ಚುನಾವಣೆಯಲ್ಲಿ ಬ್ಯುಸಿಯಾಗಿರುವ ಕಂಗನಾ ಇವೆಲ್ಲ ಮುಗಿದ ಬಳಿಕ ಶೂಟಿಂಗ್​ಗೆ ಹಾಜರಾಗಲಿದ್ದಾರೆ. ಸಿನಿಮಾದಲ್ಲಿ ಜಯಿಸಿದ ಅವರು ರಾಜಕೀಯಲ್ಲಿ ಸವಾಲು ಎದುರಿಸುತ್ತಾ ಗೆಲ್ಲುತ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜಕೀಯ vs ಸಿನಿಮಾ; ಇಂಡಸ್ಟ್ರೀ ಬಿಟ್ಟು ಬಿಡ್ತಾರಾ ಕಂಗಾನಾ? ಏನಂದ್ರು?

https://newsfirstlive.com/wp-content/uploads/2024/05/Kangana-2.jpg

Load More