newsfirstkannada.com

ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಸಮರಕ್ಕಿಳಿದ ಬಿಜೆಪಿ.. ಮೌನ ಪ್ರತಿಭಟನೆ ಮಾಡಿ ಕೌಂಟರ್ ಕೊಟ್ಟ ಕಾಂಗ್ರೆಸ್..!

Share :

Published July 13, 2023 at 6:22am

  ಸಿದ್ದು ಸರ್ಕಾರದ ವಿರುದ್ಧ ಕಮಲ ಕಲಿಗಳ ಆಕ್ರೋಶ

  ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ- ಬಿಜೆಪಿ

  ಕೇಸರಿ ಕಲಿಗಳಿಂದ ‘ರಾಜಭವನ ಚಲೋ’ ಕಹಳೆ

ಬೆಂಗಳೂರು: ಕರುನಾಡು.. ಹೆಸರೇ ಹೇಳುವಂತೆ ಕರುಣೆ, ಪ್ರೀತಿಗೆ ಹೆಸರಾದ ಸರ್ವಜನಾಂಗದ ಶಾಂತಿಯ ತೋಟ. ಆದ್ರೀಗ ಈ ರಾಜ್ಯದಲ್ಲಿ ಏನಾಗಿದೆ. ಇದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗೋಯ್ತಾ ಎಂಬ ಪ್ರಶ್ನೆ ಹುಟ್ಟಿಸಿದೆ. ಇದೇ ವಿಚಾರಕ್ಕೆ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಬೀದಿಗಿಳಿದು ಪ್ರತಿಭಟಿಸಿದ್ದಾರೆ. ಇತ್ತ ಕಮಲ ಪಾಳಯದ ವಿರುದ್ಧ ಕಾಂಗ್ರೆಸ್ ಕಲಿಗಳು ಮೌನ ಮರು ಅಸ್ತ್ರ ಪ್ರಯೋಗಿಸಿದ್ದಾರೆ.

ವೇಣುಗೋಪಾಲ್, ಜೈನಮುನಿ ಹತ್ಯೆ ತನಿಖೆಗೆ ಬಿಜೆಪಿ ಆಗ್ರಹ

ಶಾಂತಿ, ಅಹಿಂಸೆಯ ಸಂದೇಶ ಸಾರಿದ್ದ ಚಿಕ್ಕೋಡಿಯ ಜೈನಮುನಿ ಕಾಮಕುಮಾರ ನಂದಿಮಹಾರಾಜರ ಹತ್ಯೆ ಜೈನ ಸಮುದಾಯವನ್ನ ಆಘಾತಕ್ಕೆ ತಳ್ಳಿದೆ. ಇದೇ ಜೈನ ಮುನಿಶ್ರೀ ಹತ್ಯೆ ಪ್ರಕರಣ ರಾಜಕೀಯ ಹೋರಾಟಕ್ಕೂ ಕಾರಣವಾಗಿದೆ. ಜೊತೆಗೆ ಟಿ.ನರಸೀಪುರದಲ್ಲಿ ಹನುಮ ಜಯಂತಿ ವೇಳೆ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಕೊಲೆ ಪ್ರಕರಣ. ಈ ಎರಡೂ ಪ್ರಕರಣಗಳ ತನಿಖೆಗೆ ಆಗ್ರಹಿಸಿ ಬಿಜೆಪಿ ಹೋರಾಟದ ಹಾದಿ ತುಳಿದಿತ್ತು. ರಾಜ್ಯದಲ್ಲಿ ಬ್ಯಾಕ್ ಬ್ಯಾಕ್ ನಡೀತಿರೋ ಕೊಲೆ ಪ್ರಕರಣಗಳನ್ನ ಖಂಡಿಸಿ ಬಿಜೆಪಿ ನಾಯಕರು ಭಾರೀ ಪ್ರತಿಭಟನೆಯನ್ನ ನಡೆಸಿದ್ರು.

ಯುವಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಹತ್ಯೆ ಕೇಸ್ ಮತ್ತು ಚಿಕ್ಕೋಡಿಯ ಜೈನ ಮುನಿಯ ತನಿಖೆಯನ್ನ ಸಿಬಿಐಗೆ ನೀಡಬೇಕು ಎಂದು ಬಿಜೆಪಿ ನಾಯಕರು ರಾಜಭವನ ಚಲೋ ಹೋರಾಟ ನಡೆಸಿದ್ರು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿದ್ರು. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಅಂತಾ ಬಿಜೆಪಿ ನಾಯಕರೆಲ್ಲಾ ಒಂದಾಗಿ ಧಿಕ್ಕಾರ ಕೂಗಿದ್ರು. ಕಾಂಗ್ರೆಸ್ ಸರ್ಕಾರ. ಕೊಲೆಗಡುಕ ಸರ್ಕಾರ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ರು.

ಇದೇ ವೇಳೆ ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ, ಮುನಿಗಳನ್ನು ಕೊಲೆ ಮಾಡಿರುವ ವ್ಯಕ್ತಿಗಳನ್ನ ಸರ್ಕಾರ ರಕ್ಷಣೆ ಮಾಡ್ತಿದೆ ಅಂತಾ ಗುಡುಗಿದ್ರು. ಮಾಜಿ ಸಚಿವ ಆರ್. ಅಶೋಕ್ ಕೂಡಾ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ರು..
ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆಯ ಬಳಿಕ ಬಿಜೆಪಿ ನಾಯಕರು ರಾಜ್ಯಪಾಲರ ಭೇಟಿಗೆ ತೆರಳಿದ್ರು.

ವಿಧಾನಸೌಧದಿಂದ ರಾಜಭವನದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ್ರು. ಈ ವೇಳೆ ಎಲ್ಲೆಲ್ಲೂ ಸರ್ಕಾರದ ವಿರುದ್ಧದ ಭಿತ್ತಿ ಪತ್ರಗಳ ಪ್ರದರ್ಶನವಾಗಿತ್ತು. ಚಲೋ ಚಲೋ ರಾಜಭವನ ಚಲೋ ಎಂದು ಘೋಷಣೆ ಕೂಗುತ್ತಾ ಬಿಜೆಪಿ ನಾಯಕರು ಹೆಜ್ಜೆ ಹಾಕಿದ್ರು. ಕೊಲೆಗಡುಕ ಸರ್ಕಾರಕ್ಕೆ ಧಿಕ್ಕಾರ, ಧಿಕ್ಕಾರ ಎಂದು ಘೋಷಣೆ ಕೂಗುತ್ತಾ ರಾಜ್ಯಪಾಲರನ್ನ ಭೇಟಿಯಾಗಿ ರಾಜ್ಯದ ಪರಿಸ್ಥಿತಿಯ ಬಗ್ಗೆ ಮನವಿ ಸಲ್ಲಿಸಿದ್ರು..

ರಾಹುಲ್‌ ಗಾಂಧಿ ವಿರುದ್ಧ ‘ಬಿಜೆಪಿ ಷಡ್ಯಂತ್ರ’ ಆರೋಪ

ಅತ್ತ ಬಿಜೆಪಿ ನಾಯಕರ ಘೋಷವಾಕ್ಯಗಳ ಸದ್ದು ಮೊಳಗುತ್ತಿದ್ರೆ, ಇತ್ತ ಕಾಂಗ್ರೆಸ್ ನಾಯಕರ ಮೌನ ಪ್ರತಿಭಟನೆ ಮೇಳೈಸಿತ್ತು. ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಷಡ್ಯಂತ್ರ ನಡೆಸ್ತಿದೆ ಅಂತಾ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರೆಲ್ಲಾ ಕಣ್ಣು, ಮತ್ತು ಬಾಯಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕೇಂದ್ರ ಸರ್ಕಾರದ ವಿರುದ್ಧ ಮೌನ ಪ್ರತಿಭಟನೆ ನಡೆಸಿದ್ರು.

ಅದರಲ್ಲೂ ಕಾಂಗ್ರೆಸ್ ಮಹಿಳಾ ಮುಖಂಡರೊಬ್ಬರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೈಯ್ಯಲ್ಲಿ ತಕ್ಕಡಿ ಹಿಡಿದು ಕೂತಿದ್ದು ಹೈಲೆಟ್‌ ಆಗಿತ್ತು. ಸತ್ಯದ ಮಾತಿಗೆ ಸಾವಿಲ್ಲ. ಹಿಟ್ಲರ್ ಸರ್ಕಾರ ಉಳಿಯಲ್ಲ ಎಂಬ ಭಿತ್ತಿ ಪತ್ರಹಿಡಿದ ಮೌನದಲ್ಲೇ ಆಕ್ರೋಶ ಹೊರ ಹಾಕಿದ್ರು. ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಬಿಜೆಪಿಗರ ಕುತಂತ್ರದಿಂದ ರಾಹುಲ್ ಗಾಂಧಿ ಸಂಸದ ಸ್ಥಾನ ಅನರ್ಹವಾಯ್ತು ಅಂತಾ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದ್ರು.

ಒಟ್ಟಾರೆ, ರಾಜ್ಯದಲ್ಲಿ ಬಿಜೆಪಿ-ಕಾಂಗ್ರೆಸ್ ಪ್ರತಿಭಟನೆಯ ಸದ್ದು ಜೋರಾಗಿತ್ತು. ಸರ್ಕಾರದ ವಿರುದ್ಧ ಬಿಜೆಪಿ ಬೀದಿಗಿಳಿದು ಪ್ರತಿಭಟಿಸಿದ್ರೆ, ಕಾಂಗ್ರೆಸ್ ಮೌನದಲ್ಲೇ ಕೇಂದ್ರದ ವಿರುದ್ಧ ಕಿಡಿಕಾರಿತು. ಅದೇನೆ ಇರಲಿ, ರಾಜ್ಯದಲ್ಲಿ ನಡೆಯುತ್ತಿರುವ ಹತ್ಯೆಗಳ ಬಗ್ಗೆ ಸರ್ಕಾರ ಯಾವ ರೀತಿ ಕ್ರಮಕೈಗೊಳ್ಳುತ್ತೆ ಅನ್ನೋದೆ ಸದ್ಯದ ಪ್ರಶ್ನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಸಮರಕ್ಕಿಳಿದ ಬಿಜೆಪಿ.. ಮೌನ ಪ್ರತಿಭಟನೆ ಮಾಡಿ ಕೌಂಟರ್ ಕೊಟ್ಟ ಕಾಂಗ್ರೆಸ್..!

https://newsfirstlive.com/wp-content/uploads/2023/07/SIDDU-36.jpg

Load More