newsfirstkannada.com

ಈಶ್ವರಪ್ಪಗೆ ಶಾಕ್, ಹಾವೇರಿಗೆ ಬೊಮ್ಮಾಯಿ ಲಾಕ್? ಮಾಜಿ ರಾಜ್ಯಾಧ್ಯಕ್ಷರಿಗೂ ಇಲ್ಲ ಟಿಕೆಟ್..?

Share :

Published March 12, 2024 at 7:18am

Update March 12, 2024 at 7:33am

    ಗೆಲ್ಲುವ ಸಿಂಹ ‘ಶಕ್ತಿ’ಗಿಂತ, ರಾಜ‘ಭಕ್ತಿ’ಗೆ ಬಿಜೆಪಿ ಮಣೆ..?

    ಚಿಕ್ಕೋಡಿಯಲ್ಲಿ ‘ಕತ್ತಿ’ವರಸೆ ಮುಂದೆ ಜೊಲ್ಲೆಗೆ ಶಾಕ್..?

    ಮತ್ತೊಮ್ಮೆ ಡಿಕೆಶಿ-ಗೌಡರ ಫ್ಯಾಮಿಲಿ ನಡುವೆ ಕದನ ಕನ್ಫರ್ಮ್

ಕರುನಾಡಿನ ಟಿಕೆಟ್ ಚಕ್ರವ್ಯೂಹವನ್ನ ಬೇಧಿಸುವಲ್ಲಿ ಕೊನೆಗೂ ಬಿಜೆಪಿ ಹೈಕಮಾಂಡ್ ಸಕ್ಸಸ್ ಆಗಿದೆ. ದೆಹಲಿಯಲ್ಲಿ ಮೀಟಿಂಗ್ ನಡೆಸಿದ್ದು 22 ಕ್ಷೇತ್ರಗಳಿಗೆ ಟಿಕೆಟ್ ಫೈನಲ್ ಆಗಿದೆ. ಮೋಸ್ಟ್ ಇಂಪಾರ್ಟೆಂಟ್​ ಅಂದ್ರೆ ಸಿಂಹಗೆ ಶಾಕ್ ಎದುರಾಗಿದೆ.

195 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಕರ್ನಾಟಕದ ಕಮಲಕಲಿಗಳು ಹೆಸರು ಘೋಷಣೆ ಆಗಿರಲಿಲ್ಲ. ಈ ನಿಟ್ಟಿನಲ್ಲಿ ದೆಹಲಿಯಲ್ಲಿ ಪ್ರಧಾನಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 22 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಫೈನಲ್ ಆಗಿದೆ. 2 ಹಂತದಲ್ಲಿ ಪಟ್ಟಿ ರಿಲೀಸ್ ಆಗಲಿದೆ.

28ರ ಪೈಕಿ 22 ಲೋಕಸಭಾ ಕ್ಷೇತ್ರಗಳು ಫೈನಲ್​​
ಪ್ರತಾಪ್ ಸಿಂಹಗೆ ಟಿಕೆಟ್ ಸಿಗಲ್ಲ ಅನ್ನೋ ಚರ್ಚೆ ಸತ್ಯವಾಗಿದೆ. ಮೈಸೂರು-ಕೊಡಗು ಕ್ಷೇತ್ರದಿಂದ ಯದುವೀರ್ ಒಡೆಯರ್​ಗೆ ಟಿಕೆಟ್ ಕೊಡಲು ನಿರ್ಧರಿಸಲಾಗಿದೆ. ಗೆಲ್ಲುವ ಸಿಂಹ ‘ಶಕ್ತಿ’ಗಿಂತ, ರಾಜ‘ಭಕ್ತಿ’ಗೆ ಬಿಜೆಪಿ ಮಣೆ ಹಾಕಲಾಗ್ತಿದೆ.

ಚಿಕ್ಕಬಳ್ಳಾಪುರದಿಂದ ಡಾ.ಕೆ ಸುಧಾಕರ್​ ಫಿಕ್ಸ್?
ಈ ಬಾರಿ ಬಿಜೆಪಿ ಟೆನ್ಷನ್ ತಂದಿಟ್ಟಿದ್ದು, ಚಿಕ್ಕಬಳ್ಳಾಪುರ ಕ್ಷೇತ್ರ.. ಸುಧಾಕರ್ ಹಾಗೂ ವಿಶ್ವನಾಥ್ ಪುತ್ರನ ನಡುವೇ ರೇಸ್ ಏರ್ಪಟ್ಟಿತ್ತು. ಅಂತಿಮವಾಗಿ ಸುಧಾಕರ್​ಗೆ ಟಿಕೆಟ್ ನೀಡಲು ನಿರ್ಧರಿಸಲಾಗಿದೆ.

ವಿರೋಧದ ನಡುವೆ ತುಮಕೂರಿಗೆ ವಿ.ಸೋಮಣ್ಣ
ಮಾಧುಸ್ವಾಮಿ ಸೇರಿದಂತೆ ಸ್ಥಳೀಯ ನಾಯಕರು ವಿರೋಧ ವ್ಯಕ್ತಪಡಿಸ್ತಿರೋ ನಡುವೆಯೂ ತುಮಕೂರಿಗೆ ವಿ.ಸೋಮಣ್ಣಗೆ ಟಿಕೆಟ್ ಪಕ್ಕಾ ಆಗಿದೆ. ವಿಧಾನಸಭಾ ಚುನಾವಣೆಯಲ್ಲಾದ ಅನ್ಯಾಯವನ್ನ ಈ ಮೂಲಕ ಸರಿಪಡಿಸಿದಂತೆ ಕಾಣಿಸ್ತಿದೆ.

ಈಶ್ವರಪ್ಪಗೆ ಶಾಕ್.. ಹಾವೇರಿಗೆ ಬೊಮ್ಮಾಯಿ ಲಾಕ್!
ಹಾವೇರಿಯಲ್ಲಿ ಶಿವಕುಮಾರ್ ಉದಾಸಿ ನಿವೃತ್ತಿಯ ಕಾರಣ ಖಾಲಿ ಇದ್ದ ಸೀಟ್​ಗೆ ಈಶ್ವರಪ್ಪ ಪಟ್ಟು ಬಿಗಿಯಾಗಿತ್ತು. ಪುತ್ರ ಕಾಂತೇಶ್​ಗಾಗಿ ಅಭಿಮಾನಿಗಳು ಶಿವತಾಂಡವವನ್ನೇ ಮಾಡಿದ್ರು. ಆದ್ರೆ ಗೆಲ್ಲೋ ಅಭ್ಯರ್ಥಿಗೆ ಮಣೆ ಹಾಕಿದಂತೆ ಕಾಣ್ತಿರೋ ಹೈಕಮಾಂಡ್ ಬಸವರಾಜ್ ಬೊಮ್ಮಾಯಿ ಹೆಸರನ್ನ ಲಾಕ್ ಮಾಡ್ಕೊಂಡಿದೆ.

ಚಿಕ್ಕೋಡಿಯಲ್ಲಿ ‘ಕತ್ತಿ’ವರಸೆ ಮುಂದೆ ಜೊಲ್ಲೆಗೆ ಶಾಕ್
ಚಿಕ್ಕೋಡಿ ಟಿಕೆಟ್​ಗೋಸ್ಕರ ಸಕಲಾಸ್ತ್ರ ಪ್ರಯೋಗಿಸಿದ್ದ ರಮೇಶ್ ಕತ್ತಿಗೆ ಕೊನೆಗೂ ಟಿಕೆಟ್ ಸಿಕ್ಕೋದು ಕನ್ಫರ್ಮ್ ಆಗಿದೆ. ಒಂದು ಮಟ್ಟದಲ್ಲಿ ಪಕ್ಷ ಬಿಡೋಕೂ ಸಜ್ಜಾಗಿದ್ದ ‘ಕತ್ತಿ’ವರಸೆಗೆ ಬಿಜೆಪಿ ಮಣಿದಂತಿದೆ. ಸಂಸದ ಅಣ್ಣಾ ಸಾಹೇಬ್​ ಜೊಲ್ಲೆಗೆ ಅನಿರೀಕ್ಷಿತ ಶಾಕ್ ಎದುರಾಗಿದೆ. ಅದಲು ಬದಲಿನ ಆಟದಲ್ಲಿ ಡಾ.ಸಿಎನ್ ಮಂಜುನಾಥ್​ಗೆ ಬೆಂಗಳೂರು ಗ್ರಾಮಾಂತರ ಬಿಜೆಪಿ ಟಿಕೆಟ್ ಸಿಕ್ಕೋದು ಪಕ್ಕಾ ಆಗಿದೆ. ಡಿ.ಕೆ ಸುರೇಶ್ ವಿರುದ್ಧ ಡಾಕ್ಟ್ತು ಸ್ಪರ್ಧಿಸಲಿದ್ದು, ಮತ್ತೊಮ್ಮೆ ಡಿಕೆಶಿ-ಗೌಡರ ಫ್ಯಾಮಿಲಿ ನಡುವೆ ಕದನಕ್ಕೆ ರಾಜ್ಯ ಸಾಕ್ಷಿಯಾಗಲಿದೆ.
ಹಾಲಿ 7 ಸಂಸದರಿಗೆ ಟಿಕೆಟ್ ನೀಡದಿರಲು ನಿರ್ಧಿರಿಸಿರೋ ಬಿಜೆಪಿ ಹೈಕಮಾಂಡ್ ಪರ್ಯಾಯ ಅಭ್ಯರ್ಥಿಗಳಿಗೆ ಮಣೆ ಹಾಕಿದೆ. ಇನ್ನು, 6 ಹಾಲಿ ಎಂಪಿಗಳಿಗೆ ಮತ್ತೆ ಟಿಕೆಟ್ ಗ್ಯಾರಂಟಿಯಾಗಿದೆ.

ಬೆಳಗಾವಿಯಿಂದ ಹಾಲಿ ಸಂಸದೆ ಮಂಗಳಾ ಅಂಗಡಿಗೆ ಈ ಬಾರಿ ಟಿಕೆಟ್ ನೀಡದಿರಲು ಕಮಲಪಡೆ ನಿರ್ಧರಿಸಿದ್ದು, ನಿರೀಕ್ಷೆಯಂತೆ ಅಂಗಡಿ ಬೀಗರಿಗೆ ಜಗದೀಶ್ ಶೆಟ್ಟರ್​ಗೆ ಮಣೆ ಹಾಕಲಾಗ್ತಿದೆ. ವಿಜಯಪುರದಿಂದ ಹಾಲಿ ಸಂಸದ ರಮೇಶ್ ಜಿಗಜಿಣಗಿ ಬದಲು ಗೋವಿಂದ ಕಾರಜೋಳ ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಗೋ ಬ್ಯಾಕ್ ವಿರೋಧದ ನಡುವೆ ಉಡುಪಿ -ಚಿಕ್ಕಮಗಳೂರಿಂದ ಸಂಸದೆ ಶೋಭಾ ಕರಂದ್ಲಾಜೆಗೆ ಮತ್ತೆ ಅವಕಾಶ ಲಭಿಸಲಿದೆ. ಚಿತ್ರದುರ್ಗಕ್ಕೆ ಎ.ನಾರಾಯಣಸ್ವಾಮಿ ಕನ್ಫರ್ಮ್ ಆದ್ರೆ, ಶಿವಮೊಗ್ಗದಿಂದ ಬಿ.ವೈ ರಾಘವೇಂದ್ರ ಹಾಗೂ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಪಿ ಸಿ ಮೋಹನ್​ಗೆ ಮತ್ತೊಮ್ಮೆ ಟಿಕೆಟ್ ಒಲಿಯಲಿದೆ. ಬೆಂಗಳೂರು ದಕ್ಷಿಣದಿಂದ ಸಂಸದ ತೇಜಸ್ವಿ ಸೂರ್ಯಗೆ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ ಅಂತಾ ನ್ಯೂಸ್​ಫಸ್ಟ್​ಗೆ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಒಟ್ಟಾರೆ, ಮೊದಲ ಹಂತದಲ್ಲಿ 22 ಲೋಕಸಭಾ ಕ್ಷೇತ್ರಗಳಿಗೆ ಟಿಕೆಟ್ ಫೈನಲ್ ಮಾಡಲಾಗಿದೆ. ಇದಿಷ್ಟು ಸಭೆಯಲ್ಲಿ ಚರ್ಚೆಯಾಗಿ ಅಂತಿಮಗೊಳಿಸಿರೋ ಹೆಸರುಗಳು. ಆದ್ರೆ ಅಂತಿಮವಾಗಿ ಹೈಕಮಾಂಡ್ ರಿಲೀಸ್ ಮಾಡಲಿರೋ ಪಟ್ಟಿ ಇಂದು, ನಾಳೆ ಹೊರಬೀಳಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈಶ್ವರಪ್ಪಗೆ ಶಾಕ್, ಹಾವೇರಿಗೆ ಬೊಮ್ಮಾಯಿ ಲಾಕ್? ಮಾಜಿ ರಾಜ್ಯಾಧ್ಯಕ್ಷರಿಗೂ ಇಲ್ಲ ಟಿಕೆಟ್..?

https://newsfirstlive.com/wp-content/uploads/2024/03/Bommai.jpg

Load More