Advertisment

FIR ದಾಖಲಾಗ್ತಿದ್ದಂತೆ ಆಂಧ್ರಕ್ಕೆ ತೆರಳುತ್ತಿದ್ದ ಬಿಜೆಪಿ ಶಾಸಕ ಮುನಿರತ್ನ.. ಅರೆಸ್ಟ್ ಆಗಿದ್ದು ಹೇಗೆ?

author-image
Bheemappa
Updated On
ಕೋಟಿ ಕೋಟಿ ದುಡ್ಡಿನ ಒಡೆಯ MLA ಮುನಿರತ್ನ.. ಕೇವಲ 20 ಲಕ್ಷ ರೂಪಾಯಿ ಲಂಚಕ್ಕೆ ಕೈ ಚಾಚಿದ್ರಾ?
Advertisment
  • ಜೀವಬೆದರಿಕೆ, ಜಾತಿ ನಿಂದನೆ ಕೇಸ್​ನಲ್ಲಿ ಮುನಿರತ್ನ ಅರೆಸ್ಟ್
  • ಶಾಸಕ ಮುನಿರತ್ನ ಮೇಲೆ ಸದ್ಯ ಎರಡು ಪ್ರಕರಣಗಳು ದಾಖಲು
  • ಮುಳಬಾಗಿಲಿನ ಹೊರವಲಯದಲ್ಲಿ ಶಾಸಕ ಮುನಿರತ್ನ ಬಂಧನ

ಬೆಂಗಳೂರು: ಜೀವ ಬೆದರಿಕೆ, ಜಾತಿ ನಿಂದನೆ ಆರೋಪದಲ್ಲಿ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆಂಧ್ರ ಪ್ರದೇಶದ ಚಿತ್ತೂರಿಗೆ ತೆರಳುವಾಗ ಮಾರ್ಗ ಮಧ್ಯೆ ಶಾಸಕ ಮುನಿರತ್ನ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Advertisment

ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರ ಮೇಲೆ FIR ದಾಖಲಾಗಿತ್ತು. ಕೇಸ್ ದಾಖಲಾಗುತ್ತಿದ್ದಂತೆ ಮುನಿರತ್ನ ಅವರು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಗೆ ತೆರಳುತ್ತಿದ್ದರು. ಈ ವೇಳೆ ಮುಳಬಾಗಿಲು ತಾಲೂಕಿನ ಹೊರವಲಯದ ನಂಗಲಿ ಎನ್ನುವ ಪ್ರದೇಶದ ಬಳಿ ಪೊಲೀಸರು ಬಂಧಿಸಿದ್ದಾರೆ. ಸದ್ಯ ಬೆಂಗಳೂರಿನ ಕಡೆಗೆ ಮುನಿರತ್ನ ಅವರನ್ನು ಕರೆತರುತ್ತಿದ್ದಾರೆ.

ಇದನ್ನೂ ಓದಿ:BREAKING: ಬಿಜೆಪಿ ಶಾಸಕ ಮುನಿರತ್ನ ಬಂಧನ; ಕಾರಣವೇನು?

publive-image

ಈ ಸಂಬಂಧ ಶಾಸಕ ಮುನಿರತ್ನ ವಿರುದ್ಧ ವೈಯ್ಯಾಲಿಕಾವಲ್ ಠಾಣೆಯಲ್ಲಿ ಎಫ್​ಐಆರ್ ದಾಖಲು ಮಾಡಲಾಗಿತ್ತು. ಗುತ್ತಿಗೆದಾರ ಚೆಲುವರಾಜು ದೂರಿನ ಆಧಾರದ ಮೇಲೆ ಎಫ್​ಐಆರ್ ದಾಖಲು ಮಾಡಲಾಗಿತ್ತು. ಇದು ಅಲ್ಲದೇ ವೇಲು ನಾಯ್ಕರ್​ರಿಂದ ಜಾತಿ ನಿಂದನೆ ಆರೋಪವಿದ್ದು ಮತ್ತೊಂದು ಕೇಸ್ ಅನ್ನು ಕೂಡ ದಾಖಲು ಮಾಡಲಾಗಿದೆ. ಈ ಮೂಲಕ 2 ಪ್ರಕರಣಗಳು ಶಾಸಕರ ಮೇಲೆ ಇವೆ.

ಜೀವ ಬೆದರಿಕೆ ಕೇಸ್​ನಲ್ಲಿ ಒಟ್ಟು ನಾಲ್ವರ ವಿರುದ್ಧ ಕೇಸ್ ದಾಖಲಿಸಲಾಗಿದೆ

  • ಎ1- ಮುನಿರತ್ನ, ಶಾಸಕ
  • ಎ2- ವಿ.ಜಿ ಕುಮಾರ್, ಆಪ್ತ ಸಹಾಯಕ
  • ಎ3- ಅಭಿಷೇಕ್, ಸೆಕ್ಯೂರಿಟಿ
  • ಎ4- ವಸಂತ್ ಕುಮಾರ್
Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment