ಜೀವಬೆದರಿಕೆ, ಜಾತಿ ನಿಂದನೆ ಕೇಸ್ನಲ್ಲಿ ಮುನಿರತ್ನ ಅರೆಸ್ಟ್
ಶಾಸಕ ಮುನಿರತ್ನ ಮೇಲೆ ಸದ್ಯ ಎರಡು ಪ್ರಕರಣಗಳು ದಾಖಲು
ಮುಳಬಾಗಿಲಿನ ಹೊರವಲಯದಲ್ಲಿ ಶಾಸಕ ಮುನಿರತ್ನ ಬಂಧನ
ಬೆಂಗಳೂರು: ಜೀವ ಬೆದರಿಕೆ, ಜಾತಿ ನಿಂದನೆ ಆರೋಪದಲ್ಲಿ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆಂಧ್ರ ಪ್ರದೇಶದ ಚಿತ್ತೂರಿಗೆ ತೆರಳುವಾಗ ಮಾರ್ಗ ಮಧ್ಯೆ ಶಾಸಕ ಮುನಿರತ್ನ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರ ಮೇಲೆ FIR ದಾಖಲಾಗಿತ್ತು. ಕೇಸ್ ದಾಖಲಾಗುತ್ತಿದ್ದಂತೆ ಮುನಿರತ್ನ ಅವರು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಗೆ ತೆರಳುತ್ತಿದ್ದರು. ಈ ವೇಳೆ ಮುಳಬಾಗಿಲು ತಾಲೂಕಿನ ಹೊರವಲಯದ ನಂಗಲಿ ಎನ್ನುವ ಪ್ರದೇಶದ ಬಳಿ ಪೊಲೀಸರು ಬಂಧಿಸಿದ್ದಾರೆ. ಸದ್ಯ ಬೆಂಗಳೂರಿನ ಕಡೆಗೆ ಮುನಿರತ್ನ ಅವರನ್ನು ಕರೆತರುತ್ತಿದ್ದಾರೆ.
ಇದನ್ನೂ ಓದಿ: BREAKING: ಬಿಜೆಪಿ ಶಾಸಕ ಮುನಿರತ್ನ ಬಂಧನ; ಕಾರಣವೇನು?
ಈ ಸಂಬಂಧ ಶಾಸಕ ಮುನಿರತ್ನ ವಿರುದ್ಧ ವೈಯ್ಯಾಲಿಕಾವಲ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿತ್ತು. ಗುತ್ತಿಗೆದಾರ ಚೆಲುವರಾಜು ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲು ಮಾಡಲಾಗಿತ್ತು. ಇದು ಅಲ್ಲದೇ ವೇಲು ನಾಯ್ಕರ್ರಿಂದ ಜಾತಿ ನಿಂದನೆ ಆರೋಪವಿದ್ದು ಮತ್ತೊಂದು ಕೇಸ್ ಅನ್ನು ಕೂಡ ದಾಖಲು ಮಾಡಲಾಗಿದೆ. ಈ ಮೂಲಕ 2 ಪ್ರಕರಣಗಳು ಶಾಸಕರ ಮೇಲೆ ಇವೆ.
ಜೀವ ಬೆದರಿಕೆ ಕೇಸ್ನಲ್ಲಿ ಒಟ್ಟು ನಾಲ್ವರ ವಿರುದ್ಧ ಕೇಸ್ ದಾಖಲಿಸಲಾಗಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ