newsfirstkannada.com

×

ಬಿಜೆಪಿ ಶಾಸಕ ಮುನಿರತ್ನಗಿಲ್ಲ ರಿಲೀಫ್.. ಜಾಮೀನು ಸಿಕ್ಕರೂ ಮತ್ತೆ ವಶಕ್ಕೆ ಪಡೆಯಲು ಪೊಲೀಸರು ಸಿದ್ಧತೆ

Share :

Published September 20, 2024 at 7:57am

Update September 20, 2024 at 8:19am

    ವಶಕ್ಕೆ ಪಡೆಯಲು ಕಗ್ಗಲೀಪುರ ಪೊಲೀಸರ ಸಿದ್ಧತೆ

    ಇಂದು ಬೆಳಗ್ಗೆ 10 ಗಂಟೆಯ ನಂತರ ವಶಕ್ಕೆ ಪಡೆಯುವ ಸಾಧ್ಯತೆ

    ಬೇಲ್‌ ಮೇಲೆ ಜೈಲಿನಿಂದ ಹೊರಬರುತ್ತಿದ್ದಂತೆ ವಶಕ್ಕೆ ಸಾಧ್ಯತೆ

ಜಾತಿ ನಿಂದನೆ ಕೇಸ್‌ನಲ್ಲಿ ಲಾಕ್​ ಆಗಿರುವ ಶಾಸಕ ಮುನಿರತ್ನಗೆ ಸಿಹಿ ಸುದ್ದಿಯ ಜೊತೆಗೆ ಕಹಿ ಸುದ್ದಿ ಕೂಡ ಸಿಕ್ಕಿದೆ. ನಿನ್ನೆ ಮಾಜಿ ಸಚಿವನ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಜಾಮೀನು ಕೊಟ್ಟಿದೆ. ಈ ಖುಷಿ ಸುದ್ದಿಯ ನಡುವೆಯೇ ಶಾಸಕರಿಗೆ ಶಾಕಿಂಗ್ ನ್ಯೂಸ್ ಸಿಗುವ ಎಲ್ಲಾ ಸಾಧ್ಯತೆಗಳಿವೆ. ಇವತ್ತು ಮುನಿರತ್ನ ಮತ್ತೆ ಅರೆಸ್ಟ್ ಆಗುವ ಸಾಧ್ಯತೆ ಇದೆ.

ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಕೇಸ್​ನಲ್ಲಿ ಶಾಸಕ ಮುನಿರತ್ನಗೆ ಕೋರ್ಟ್​ ಜಾಮೀನು ನೀಡಿದೆ. ಆದರೆ ಅತ್ಯಾಚಾರ ಕೇಸ್​ನಲ್ಲಿ ಬಿಜೆಪಿ ಶಾಸಕ ಮತ್ತೆ ಲಾಕ್ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: Tirupati laddu: ತಿರುಪತಿ ಲಡ್ಡುಗಳಿಗೆ ನಂದಿನಿ ತುಪ್ಪ ಬೇಡ ಎನ್ನಲು ಈ ಕೊಬ್ಬಿನ ಮಾಫಿಯಾ ಕಾರಣವಾಗಿತ್ತಾ..?

ಬಿಜೆಪಿ ಶಾಸಕ ಮುನಿರತ್ನಗೆ ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಕೇಸ್​ನಲ್ಲಿ ಜಾಮೀನು ಮಂಜೂರಾಗಿದೆ. 82ನೇ ಸಿಸಿಹೆಚ್ ಕೋರ್ಟ್​ ಜಾಮೀನು ನೀಡಿ ಆದೇಶಿಸಿದೆ. 2 ಲಕ್ಷ ಬಾಂಡ್ & ಇಬ್ಬರ ಶ್ಯೂರಿಟಿ ಒಳಗೊಂಡ ಷರತ್ತುಬದ್ಧ ಜಾಮೀನು ಸಿಕ್ಕಿದೆ. ಇದೀಗ ಪರಪ್ಪನ ಅಗ್ರಹಾರ ಸೇರಿದ್ದ ಮಾಜಿ ಸಚಿವನಿಗೆ ಅತ್ಯಾಚಾರ ಕೇಸ್‌ನಲ್ಲಿ ಬಂಧನದ ಭೀತಿ ಶುರುವಾಗಿದೆ.

ಮುನಿರತ್ನಗೆ ಮತ್ತೆ ಸಂಕಷ್ಟ?

ಜಾಮೀನು ಸಿಕ್ಕರೂ ಮಾಜಿ ಸಚಿವ ಮುನಿರತ್ನಗೆ ರಿಲೀಫ್ ಇಲ್ಲ ಎನ್ನಲಾಗ್ತಿದೆ. ಮುನಿರತ್ನನ ವಶಕ್ಕೆ ಪಡೆಯಲು ಕಗ್ಗಲೀಪುರ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಜಾಮೀನು ಆದೇಶ ಬರ್ತಿದ್ದಂತೆ ನಿನ್ನೆ ಪರಪ್ಪನ ಅಗ್ರಹಾರ ಜೈಲಿಗೆ ಕಗ್ಗಲೀಪುರ ಠಾಣೆ ಪೊಲೀಸರು ಎಂಟ್ರಿಕೊಟ್ಟಿದ್ರು. ಆದ್ರೆ, ಬೇಲ್ ಪ್ರಕ್ರಿಯೆ ಮುಗಿಯದೇ ವಾಪಸ್ ಆಗಿದ್ರು. ಇಂದು ಬೆಳಗ್ಗೆ 10 ಗಂಟೆಯ ನಂತರ ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಬೇಲ್‌ ಮೇಲೆ ಜೈಲಿನಿಂದ ಹೊರಬರುತ್ತಿದ್ದಂತೆ ವಶಕ್ಕೆ ಪಡೆಯೋದು ಖಚಿತ ಎನ್ನಲಾಗ್ತಿದೆ.

ಇದನ್ನೂ ಓದಿ: ಲಾಸ್ ಎಂಜಲೀಸ್​ನಲ್ಲಿ ಭಾರೀ ಆತಂಕದ ವಾತಾವರಣ; ಆಗ್ತಿರುವ ಅನಾಹುತಕ್ಕೆ ಬೆಚ್ಚಿಬಿದ್ದ ಜನ

ಇನ್ನು ಅತ್ಯಾಚಾರ ಆರೋಪ ಮಾಡಿರೋ ಮಹಿಳೆಯನ್ನ ಕರೆತಂದು ಪೊಲೀಸರು ಸ್ಥಳ ಮಹಜರು ಮಾಡಿಸಿದ್ದಾರೆ. ಬೆಂಗಳೂರಿನ ಜೆಪಿ ಪಾರ್ಕ್‌ ಬಳಿ ಇರೋ ಶೆಡ್‌ನಲ್ಲಿ ಕಗ್ಗಲೀಪುರ ಪೊಲೀಸರು ಸ್ಫಾಟ್ ವೆರಿಫಿಕೇಶನ್ ಮಾಡಿದ್ರು. ಗೋಡೌನ್‌ನ ಬೀಗ ಹೊಡೆದು ಒಳಗೆ ಎಂಟ್ರಿ ಕೊಟ್ಟು ಮಹಜರು ನಡೆಸಿದ್ರು.

ಒಟ್ಟಾರೆ, ಮುನಿರತ್ನಗೆ ಜಾತಿನಿಂದನೆ ಕೇಸ್‌ನಿಂದ ರಿಲೀಫ್ ಸಿಕ್ಕಿದೆ. ಇದೀಗ ಅತ್ಯಾಚಾರ ಕೇಸ್ ಹೆಗಲೇರೋದು ಫಿಕ್ಸ್ ಆದಂತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿ ಶಾಸಕ ಮುನಿರತ್ನಗಿಲ್ಲ ರಿಲೀಫ್.. ಜಾಮೀನು ಸಿಕ್ಕರೂ ಮತ್ತೆ ವಶಕ್ಕೆ ಪಡೆಯಲು ಪೊಲೀಸರು ಸಿದ್ಧತೆ

https://newsfirstlive.com/wp-content/uploads/2024/09/BJP-MLA-Munirathana.jpg

Load More