/newsfirstlive-kannada/media/post_attachments/wp-content/uploads/2025/07/PRABHU_CHAUHAN_SON.jpg)
ಬಿಜೆಪಿ ಶಾಸಕ ಪ್ರಭು ಚೌಹಾಣ್ ಪುತ್ರನ ನಿಶ್ಚಿತಾರ್ಥ ಪುರಾಣಕ್ಕೆ ಮತ್ತೆ ಟ್ವಿಸ್ಟ್ ಸಿಕ್ಕಿದೆ. ಅರೇಂಜ್ಡ್.. ದೈಹಿಕ ಸಂಪರ್ಕ.. ದೋಖಾ ಕಹಾನಿಗೆ ಸಂತ್ರಸ್ತೆ ದಾಖಲೆ ಸಹಿತ ತಿರುವು ಕೊಟ್ಟಿದ್ದಾಳೆ. ಮಾಜಿ ಸಚಿವನ ಪುತ್ರನ ಮೋಸದ ‘ಏಕಾಂತ’ ಕ್ಷಣದ ಕಂಪ್ಲೀಟ್ ಮಾಹಿತಿ ತೆರೆದಿಟ್ಟಿದ್ದಾಳೆ. ಆದ್ರೆ, ತಮ್ಮ ಕುಟುಂಬದ ಗೌರವ ಕಾಪಾಡಲು ಪ್ರಭು ಚೌಹಾಣ್ ಯುವತಿ ‘ನಡತೆ’ ಬಗ್ಗೆ ಪ್ರಶ್ನೆ ಹಾಕಿದ್ದಾರೆ.
ಮದುವೆ ಅನ್ನೋದು ಪವಿತ್ರ ಬಂಧ. ಮನಸು-ಮನಸು ಕೂಡಿದ್ರೆ ಮಾತ್ರ ಕಂಕಣಭಾಗ್ಯ. ಪವಿತ್ರ ಪ್ರೀತಿ ಬೆರೆತರೆ ಅಕ್ಷತೆಯ ಮಳೆ. ಸ್ವಲ್ಪ ಏರುಪೇರಾದರೆ ಬರೀ ರಗಳೆ. ಇದೀಗ ಮಾಜಿ ಸಚಿವ ಪ್ರಭು ಚೌಹಾಣ್ ಕುಟುಂಬದಲ್ಲಿ ಆಗಿರೋದು ಇದೆ. ನಿಶ್ಚಿತಾರ್ಥ ಬಳಿಕ ಮುರಿದು ಬಿದ್ದ ಸಂಬಂಧ ಈಗ ಆರೋಪ-ಪ್ರತ್ಯಾರೋಪದ ಗೋಜಲಿಗೆ ತಿರುಗಿದೆ.
ಸಂತ್ರಸ್ತೆ ಜೊತೆ ‘ಪ್ರತೀಕ್’ ಹೋಟೆಲ್ ವಾಸ್ತವ್ಯಕ್ಕೆ ದಾಖಲೆ ತಿರುವು!
ಮಾಜಿ ಸಚಿವ ಪ್ರಭು ಚೌಹಾಣ್ ಪುತ್ರ ಪ್ರತೀಕ್ ನಿಶ್ಚಿತಾರ್ಥ ನಡೆದ ಬಳಿಕ ಮದುವೆ ಮುರಿದು ಬಿದ್ದಿತ್ತು. ಯುವತಿ ಜೊತೆ ಎಂಗೇಜ್ ಆಗಿ ಆಕೆಯನ್ನ ಲೈಂಗಿಕವಾಗಿ ಬಳಸಿಕೊಂಡು ಬಳಿಕ ವಿವಾಹವಾಗದೇ ಕೈಕೊಟ್ಟಿರೋ ಆರೋಪ ಕೇಳಿ ಬಂದಿತ್ತು. ರಾಜ್ಯ ಮಹಿಳಾ ಆಯೋಗಕ್ಕೆ ಸಂತ್ರಸ್ತೆ ದೂರು ನೀಡಿದ್ದು ಆಯ್ತು. ಪ್ರತೀಕ್‌ನ ದೋಖಾ ದಾಖಲೆಗಳು ಬಯಲಾಗಿವೆ. ನಿಶ್ಚಿತಾರ್ಥಕ್ಕೂ ಮುನ್ನ, ನಿಶ್ಚಿತಾರ್ಥದ ನಂತರ ಹೋಟೆಲ್ ರೂಮ್‌ಗೆ ಕರೆದೊಯ್ದು ಲೈಂಗಿಕವಾಗಿ ಬಳಸಿಕೊಂಡಿರೋದಕ್ಕೆ ಸಂತ್ರಸ್ತೆ ದಾಖಲೆ ನೀಡಿದ್ದಾಳೆ.
‘ದೋಖಾ’ಕ್ಕೆ ದಾಖಲೆ!
- ಪ್ರತೀಕ್ ಜೊತೆ ವಾಸ್ತವ್ಯದ ಬಗ್ಗೆ ಸಂತ್ರಸ್ತೆಯಿಂದ ದಾಖಲೆ ರಿಲೀಸ್
- ಇಬ್ಬರೂ ಒಂದೇ ಹೋಟೆಲ್ನಲ್ಲಿ ಇದ್ದಿದ್ದಕ್ಕೆ ದಾಖಲೆ ಬಿಡುಗಡೆ
- ಎರಡು ಬಾರಿ ಒಟ್ಟಿಗೆ ಹೋಟೆಲ್ಗಳಲ್ಲಿ ಕಾಲ ಕಳೆದಿದ್ದಕ್ಕೆ ದಾಖಲೆ
- ಒಂದೇ ರೂಮ್‌ಗೆ ಲಾಗಿನ್ ಆಗಿರುವ ಹೋಟೆಲ್ನ ಬಿಲ್ಗಳು
- ನಿಶ್ಚಿತಾರ್ಥಕ್ಕೂ ಮೊದಲೇ ಜೊತೆಗಿದ್ದು ಸಮಯ ಕಳೆದಿದ್ದ ಇಬ್ಬರು
- 2023ರ ಅಕ್ಟೋಬರ್ನಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿದ್ರು
- ನಿಶ್ಚಿತಾರ್ಥದ ಬಳಿಕ 2024ರ ಮಾರ್ಚ್ನಲ್ಲಿ ಮಹಾರಾಷ್ಟ್ರದಲ್ಲಿದ್ದರು
- ಲಾತೂರ್ನ ಖಾಸಗಿ ಹೋಟೆಲ್ನಲ್ಲಿ ಜೊತೆಗಿದ್ದ ಪ್ರತೀಕ್, ಯುವತಿ
ಇದನ್ನೂ ಓದಿ:ಯಂಗ್ ಪ್ಲೇಯರ್ಗೆ ಟೀಮ್ ಇಂಡಿಯಾದಲ್ಲಿ ಚಾನ್ಸ್.. 24 ವರ್ಷದ ಯುವ ಆಟಗಾರನಿಗೆ ಒಲಿದ ಅವಕಾಶ
ಮಗ ತಪ್ಪು ಮಾಡಿಲ್ಲ ಅಂತ ಬಿಜೆಪಿ ಶಾಸಕ ಕೌಂಟರ್
ಪುತ್ರನ ವಿರುದ್ಧ ಕೇಳಿ ಬಂದಿರೋ ಆರೋಪವನ್ನ ತಂದೆಯಾದವ್ರು ಒಪ್ತಾರಾ? ಇಲ್ವೇ ಇಲ್ಲ. ಅದ್ರಂತೆ ಪ್ರತೀಕ್ ತಂದೆ ಪ್ರಭು ಚೌಹಾಣ್ ಸಂತ್ರಸ್ತೆ ಮಾಡ್ತಿರೋ ಆರೋಪಗಳನ್ನ ಸಾರಸಗಟಾಗಿ ತಳ್ಳಿ ಹಾಕಿದ್ದಾರೆ ನನ್ನ ಮಗ ತಪ್ಪು ಮಾಡಿಲ್ಲ ಅಂತ ಸಮರ್ಥಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಆ ಯುವತಿಗೆ ಮತ್ತೊಬ್ಬ ಯುವಕನ ಜೊತೆಗೆ ಅಫೇರ್ ಇತ್ತು. ಇದೇ ಕಾರಣಕ್ಕೆ ಮದುವೆ ಮುರಿದು ಬಿದ್ದಿದೆ ಅಂತ ಸಂತ್ರಸ್ತ ಯುವತಿ ಮತ್ತೊಬ್ಬ ಯುವಕ ಜೊತೆಗಿನ ವಿಡಿಯೋ ಕಾಲ್, ಫೋಟೋ ರಿಲೀಸ್ ಮಾಡಿದ್ದಾರೆ.
ನಿಶ್ಚಿತಾರ್ಥ.. ದೋಖಾ ಕಹಾನಿಯಲ್ಲಿ ರಾಜಕೀಯವೂ ಬೆರೆತಿದೆ. ಮಾಜಿ ಕೇಂದ್ರ ಸಚಿವ ಭಗವಂತ್ ಖೂಬಾ ಕಡೆಯೂ ಪ್ರಭು ಚೌಹಾಣ್ ಬೊಟ್ಟು ಮಾಡಿದ್ದಾರೆ. ನನ್ನ ಕುಟುಂಬದ ಹೆಸರು ಹಾಳು ಮಾಡಲು ಒಳಸಂಚು ನಡೆದಿದೆ ಅಂತಲೂ ಮಾತಿನ ಪ್ರಹಾರ ಮಾಡಿದ್ದಾರೆ. ಆರೋಪ-ಪ್ರತ್ಯಾರೋಪ ಏನೇ ಇರಲಿ ಯಾರದ್ದು ತಪ್ಪು- ಒಪ್ಪು ಅನ್ನೋದು ಪೊಲೀಸರ ತನಿಖೆ ಮೂಲಕವೇ ಹೊರ ಬೀಳಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ