newsfirstkannada.com

ರಾಜ್ಯ ಸರ್ಕಾರದ ಸಚಿವರಿದ್ದ ವೇದಿಕೆಯಲ್ಲಿ ‘ಕೈ’ ಶಾಸಕನಿಗೆ ಮಾತಿನಲ್ಲೇ ತಿವಿದ ಇಬ್ಬರು ಬಿಜೆಪಿ ಶಾಸಕರು..!

Share :

Published January 18, 2024 at 2:05pm

  ತುಂಬಿದ ವೇದಿಕೆಯಲ್ಲಿ ಮೂವರು MLAಗಳಿಂದ ಟಾಕ್ ಫೈಟ್

  ಶರಣು ಸಲಗರ್, ಬಿ.ಆರ್‌.ಪಾಟೀಲ್, ಸಿದ್ದು ಪಾಟೀಲ ವಾಗ್ಯುದ್ಧ

  ಬಸವಕಲ್ಯಾಣದ ಹಾರಕೂಡ ಜಾತ್ರಾ ಮಹೋತ್ಸವದಲ್ಲಿ ಘಟನೆ

ಬೀದರ್: ಬಸವ ಕಲ್ಯಾಣ ತಾಲೂಕಿನ ಹಾರಕೂಡ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ-ಕಾಂಗ್ರೆಸ್ ಶಾಸಕರ ಮಧ್ಯೆ ರಾಮ ಮಂದಿರ ವಿಚಾರಕ್ಕೆ ತುಂಬಿದ ಸಭೆಯಲ್ಲೇ ವಾಕ್ಸಮರ ನಡೆದಿದೆ.

ಬಸವಕಲ್ಯಾಣ ಶಾಸಕ ಶರಣು ಸಲಗರ್ v/s ಆಳಂದ ಶಾಸಕ ಬಿ.ಆರ್‌.ಪಾಟೀಲ್ v/s ಹುಮನಾಬಾದ್ ಶಾಸಕ ಸಿದ್ದು ಪಾಟೀಲ ನಡುವೆ ಟಾಕ್ ಪೈಟ್ ನಡೆದಿದೆ. ಸಚಿವರಾದ ಈಶ್ವರ ಖಂಡ್ರೆ, ಶರಣಪ್ರಕಾಶ ಪಾಟೀಲ, ಕೆಕೆಆರ್‌ಡಿಬಿ ಅಧ್ಯಕ್ಷ ಅಜಯ್ ಸಿಂಗ್, ಸಂಸದ ಉಮೇಶ ಜಾಧವ್ ಸೇರಿದಂತೆ ಹಲವು ನಾಯಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಆಗಿದ್ದೇನು..?
ಕಾರ್ಯಕ್ರಮದಲ್ಲಿ ಮೊದಲು ಮಾತನಾಡಿದ್ದ ಬಿಜೆಪಿ ಶಾಸಕ ಶರಣು ಸಲಗರ್, ರಾಮ ಮಂದಿರ ವಿಚಾರ ಪ್ರಸ್ತಾಪಿಸಿ.. ಮೋದಿ ನೇತೃತ್ವದಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಆಗ್ತಿದೆ, ಎಲ್ಲರೂ ಹಬ್ಬದ ರೀತಿ ಸಂಭ್ರಮಿಸಬೇಕು. ಕೋಟ್ಯಾನು ಹಿಂದೂಗಳ 500 ವರ್ಷಗಳ ಕನಸು ಈಡೇರಿದೆ. ಕೋಟಿ ಕೋಟಿ ಭಕ್ತರ ಆಸೆಯಾಗಿತ್ತು. ತಿಂಗಳಿಲ್ಲ, ದಿನಗಳಿಲ್ಲ, ವರ್ಷಗಳಿಲ್ಲ ಕೆಲವೇ ಕೆಲವು ಗಂಟೆಗಳಲ್ಲಿ ರಾಮ ಮಂದಿರ ನಿರ್ಮಾಣ ಆಗಿದೆ. ಅದೆಲ್ಲ ನರೇಂದ್ರ ಮೋದಿ ಪ್ರಯತ್ನದಿಂದ ಎಂದು ಬಣ್ಣಿಸಿದ್ದರು.

ಕಾಂಗ್ರೆಸ್​ ಶಾಸಕ ಟಾಂಗ್..!
ಸಲಗರ್ ಮಾತಿಗೆ ಟಾಂಗ್ ಕೊಟ್ಟಿದ್ದ ಶಾಸಕ ಬಿಆರ್ ಪಾಟೀಲ್.. ಧಾರ್ಮಿಕ ಕಾರ್ಯಕ್ರಮವನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು. ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ. ಇಲ್ಲಿಗೆ ಬಂದವರೆಲ್ಲ ಭಕ್ತಿಯಿಂದ, ಪ್ರೀತಿಯಿಂದ ಪೂಜ್ಯರ ದರ್ಶನ ಪಡೆದು ಹೋಗಬೇಕಿದೆ. ಆದರೆ ಇವತ್ತು ವೇದಿಕೆ ಎಲ್ಲೆಲ್ಲೋ ಹೋಗುತ್ತಿದೆ ಅನ್ನೋ ಮೂಲಕ ವೇದಿಕೆಯಲ್ಲೇ ಖಂಡಿಸಿದರು.

ಕೈ ಶಾಸಕನಿಗೆ ವೇದಿಕೆಯಲ್ಲೇ ಉತ್ತರ
ಬಿ‌.ಆರ್.ಪಾಟೀಲ್ ಮಾತಿಗೆ ಎದುರೇಟು ಕೊಟ್ಟ ಹುಮನಾಬಾದ್‌ ಶಾಸಕ ಸಿದ್ದು ಪಾಟೀಲ್.. ಇದು ಧಾರ್ಮಿಕ ಕಾರ್ಯಕ್ರಮ ಇದೆ, ಧರ್ಮದ ಬಗ್ಗೆ ಮಾತನಾಡಿದರೆ ಏನು ತಪ್ಪು? ಧರ್ಮದ ಬಗ್ಗೆ ಮಾತನಾಡಿದ್ರೆ ಕೆಲವರಿಗೆ ಅರಗಿಸಿಕೊಳ್ಳೋಕೆ ಆಗಲ್ಲ. ನಮ್ಮ ಸಲಗರಣ್ಣ ಒಳ್ಳೆಯ ಮಾತುಗಳನ್ನು ಹೇಳಿದರು. ಅದು ಕೆಲವರಿಗೆ ಜೀರ್ಣಿಸಿಕೊಳ್ಳಲು ಆಗಲ್ಲ. ಅಂಥವರಿಗೆ ಏನು ಮಾಡೋಕಾಗಲ್ಲ. ಧರ್ಮದ ಸಭೆಯಲ್ಲಿ ಧರ್ಮದ ಬಗ್ಗೆ ಮಾತಾಡಿದ್ರೆ ತಪ್ಪೇನು ಎಂದು ಮಾತಿನಲ್ಲೇ ತಿವಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯ ಸರ್ಕಾರದ ಸಚಿವರಿದ್ದ ವೇದಿಕೆಯಲ್ಲಿ ‘ಕೈ’ ಶಾಸಕನಿಗೆ ಮಾತಿನಲ್ಲೇ ತಿವಿದ ಇಬ್ಬರು ಬಿಜೆಪಿ ಶಾಸಕರು..!

https://newsfirstlive.com/wp-content/uploads/2024/01/BDR-MLA-FIGHT.jpg

Load More