newsfirstkannada.com

ಪೊಲೀಸ್​ ಠಾಣೆಯಲ್ಲೇ ಶಿವಸೇನೆ ನಾಯಕನಿಗೆ ಗುಂಡಿಟ್ಟ ಬಿಜೆಪಿ MLA; ಭಯಾನಕ ದೃಶ್ಯ CCTVಯಲ್ಲಿ ಸೆರೆ

Share :

Published February 3, 2024 at 8:17pm

Update February 3, 2024 at 8:11pm

  ಜಮೀನು ವಿವಾದ ರಾಜಿ ಪಂಚಾಯ್ತಿಯಲ್ಲಿ ಗುಂಡು ಹಾರಿಸಿದ್ದೇಕೆ?

  ಪೊಲೀಸ್​ ಠಾಣೆಯಲ್ಲೇ ನಾಯಕನಿಗೆ ಗುಂಡಿಟ್ಟ ಬಿಜೆಪಿ ಎಂಎಲ್​ಎ!

  ಗುಂಡು ಹಾರಿಸಿದ್ದಕ್ಕೆ ಪಶ್ಚಾತ್ತಾಪವಿಲ್ಲ ಎಂದ ಗಣಪತ್ ಗಾಯಕ್​ವಾಡ್

ಒಬ್ಬ ಶಿವಸೇನೆ ನಾಯಕ. ಇನ್ನೊಬ್ಬ ಬಿಜೆಪಿ ಎಂಎಲ್​​ಎ. ಇಬ್ಬರ ಯಾವುದೋ ವಿಚಾರಕ್ಕೆ ಪೊಲೀಸ್​ ಠಾಣೆಯಲ್ಲಿ ರಾಜಿ ಪಂಚಾಯ್ತಿ ನಡೆಸುತ್ತಿದ್ದರು. ಆದ್ರೆ ಅದೇನಾಯ್ತು ಗೊತ್ತಿಲ್ಲ.. ಬಿಜೆಪಿ ಶಾಸಕ ಶಿವಸೇನೆಯ ನಾಯಕನ ಮೇಲೆ ಪೊಲೀಸ್ ಠಾಣೆಯಲ್ಲೇ ಗುಂಡು ಹಾರಿಸಿ ಬಿಟ್ಟಿದ್ದಾನೆ. ಪೊಲೀಸ್ ಠಾಣೆಯೊಳಗೆ ನಾಲ್ಕು ಜನ ಕೂತಿದ್ದಾರೆ. ಆ ಬದಿಯಲ್ಲಿ ಶಿವಸೇನೆ ನಾಯಕ ಮಹೇಶ್ ಗಾಯಕವಾಡ್​ ಕೂತಿದ್ದಾನೆ. ಇತ್ತ ಇನ್ನೊಂದು ಬದಿಯಲ್ಲಿ ಮಹಾರಾಷ್ಟ್ರದ ಬಿಜೆಪಿ ಶಾಸಕ ಗಣಪತ್​ ಗಾಯಕ್​ವಾಡ್ ಕೂತಿದ್ದಾನೆ. ಎಲ್ಲ ನಾರ್ಮಲ್ ಆಗಿಯೇ ಇದೆ.

ಸರಿಯಾಗಿ 10 ಗಂಟೆ 40 ಸೆಕೆಂಡ್​. ಅದೇನಾಯ್ತೋ ಗೊತ್ತಿಲ್ಲ. ಆರಾಮಾಗಿ ಚೇರ್ ಮೇಲೆ ಕೂತಿದ್ದ ಬಿಜೆಪಿ ಶಾಸಕ ಗಣಪತ್ ಗಾಯಕ್​ವಾಡ್​ ಸೊಂಟದಲ್ಲಿದ್ದ ಗನ್ ತೆಗೆದು ಮುಂದೆ ಕೂತಿದ್ದ ಶಿವಸೇನೆ ಮುಖಂಡ ಮಹೇಶ್ ಗಾಯಕ್​ವಾಡ್​ ಮೇಲೆ ಫೈರಿಂಗ್ ಮಾಡೋದಕ್ಕೆ ಶುರು ಮಾಡಿದ್ದಾನೆ. ಗಣಪತ್ ಗಾಯಕ್​ವಾಡ್ ಫೈರಿಂಗ್ ಮಾಡ್ತಿದ್ದಂತೆ ಮಹೇಶ್ ಗಾಯಕ್​ವಾಡ್ ಸೇರಿ ಎಲ್ಲರೂ ಹೊರಗಡೆ ಓಡಿ ಹೋಗೋಕ್ಕೆ ಯತ್ನಿಸಿದ್ದಾರೆ. ಅಷ್ಟೊತ್ತಿಗಾಗಲೇ ಗನ್​ನಿಂದ ಹಾರಿದ ಗುಂಡುಗಳು ಮಹೇಶ್ ಗಾಯಕ್​ವಾಡ ದೇಹ ಸೇರಿದ್ವು. ಗುಂಡೇಟಿನಿಂದ ಮಹೇಶ್ ಗಾಯಕ್​ವಾಡ್ ಕೆಳಗೆ ಬಿದ್ರು. ಗಣಪತ್ ಗಾಯಕ್​ವಾಡ್ ಬಿಟ್ಟಿಲ್ಲ. ಕೈಯಲ್ಲಿದ್ದ ಗನ್​ನಿಂದಲ್ಲೇ ಮಹೇಶ್ ಗಾಯಕ್​ವಾಡ್ ಮೇಲೆ ಹಲ್ಲೆ ಮಾಡಿದ್ದಾನೆ. ಮನಸೋ ಇಚ್ಛೆ ಥಳಿಸಿದ್ದಾನೆ. ಗುಂಡಿನ ಶಬ್ಧ ಕೇಳ್ತಿದ್ದಂತೆ ಹೊರಗಿದ್ದ ಪೊಲೀಸರು ರೂಮ್ ಒಳಗೆ ಓಡಿ ಬಂದಿದ್ದಾರೆ. ಪೊಲೀಸ್ ಹೊಡೆಯೋದನ್ನ ಬಿಡಿಸೋಕೆ ಯತ್ನಿಸಿದ್ರು, ಗಣಪತ್​ ಗಾಯಕ್​ವಾಡ್​ ಬಿಟ್ಟಿಲ್ಲ. ಅದೇನು ಸಿಟ್ಟೋ, ಅದೇನು ದ್ವೇಷವೋ ಗೊತ್ತಿಲ್ಲ. ಮಹೇಶ್ ಗಾಯಕವಾಡ್ ಮೇಲೆ ಅಟ್ಟಹಾಸವನ್ನೇ ಮೆರೆದುಬಿಟ್ಟಿದ್ದಾನೆ.

ಒಂದೇ ಸಮನೆ ಫೈರಿಂಗ್.. ಮಹೇಶ್ ದೇಹ ಸೇರಿದ ಆರು ಗುಂಡು!

ಠಾಣೆಯಲ್ಲೇ ಫೈರಿಂಗ್ ಮಾಡಿದ್ದ ಗಣಪತ್​ ಗಾಯಕ್​ವಾಡ್​ ಒಂದು ಕ್ಷಣ ರಾಕ್ಷಸ ಅವತಾರವನ್ನೇ ತಾಳಿ ಬಿಟ್ಟಿದ್ದ. ಏಕಾಏಕಿ ಗನ್ ತೆಗೆದವನೇ ಒಂದಲ್ಲ ಎರಡಲ್ಲ ಬರೋಬ್ಬರಿ ಆರು ಗುಂಡು ಮಹೇಶ್ ಗಾಯಕ್​ವಾಡ್ ದೇಹ ಸೇರಿದ್ವು. ಗುಂಡಿನ ಶಬ್ಧ ಠಾಣೆಯೊಳಗಿನ ಕೋಣೆ ತುಂಬಾ ಮಾರ್ದನಿಸಿದೆ. ಅಸಲಿಗೆ ಈ ಮಹೇಶ್ ಗಾಯಕ್​ವಾಡ್​ ಮಹಾರಾಷ್ಟ್ರದ ಉಲ್ಲಾಸ ನಗರದ ಶಿವಸೇನೆ ಮುಖಂಡ. ಏರಿಯಾದಲ್ಲಿ ಒಂದೊಳ್ಳೆ ಹವಾ ಮಾಡ್ಕೊಂಡು ಆರಾಮಾಗಿ ಇದ್ದ. ಇತ್ತ ಗಣಪತ್ ಗಾಯಕ್​ವಾಡ್ ಕಲ್ಯಾಣ್​ ನಗರದ ಶಾಸಕ. ಇವರಿಬ್ಬರೂ ಜಮೀನು ವಿಚಾರ ಒಂದಕ್ಕಾಗಿ ರಾಜಿ ಪಂಚಾಯ್ತಿ ಮಾಡ್ಬೇಕು ಅಂತ ಉಲ್ಲಾಸ್‌ನಗರ ಪ್ರದೇಶದ ಹಿಲ್‌ಲೈನ್ ಪೊಲೀಸ್ ಠಾಣೆಗೆ ಬಂದಿದ್ರು. ರಾಜಿ ಪಂಚಾಯ್ತಿ ಮಾಡ್ತಾ ಇದ್ದಾಗ ಗಣಪತ್ ಗಾಯಕ್ ವಾಡ್ ಮತ್ತು ಮಹೇಶ್ ಗಾಯಕವಾಡ್​, ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಅಷ್ಟೇ ನೋಡಿ ಗಣಪತ್ ಗಾಯಕ್ವಾಡ್, ಇನ್ಸ್‌ಪೆಕ್ಟರ್ ಚೇಂಬರ್‌ನೊಗೇ ಸೊಂಟದಲ್ಲಿದ್ದ ಗನ್ ತೆಗೆದು ಮಹೇಶ್ ಗಾಯಕ್ವಾಡ್ ಮೇಲೆ ಗುಂಡು ಹಾರಿಸಿಬಿಟ್ಟಿದ್ದಾನೆ.

ಇದನ್ನು ಓದಿ: ಹೊರಟರೆ ಜಾತ್ರೆ ನಿಂತರೆ ಚರಿತ್ರೆ; ಬಿಗ್‌ಬಾಸ್ ವರ್ತೂರು ಸಂತೋಷ್​ ಮೆರವಣಿಗೆ ಹೇಗಿತ್ತು ಗೊತ್ತಾ?

ವರದಿಗಳ ಪ್ರಕಾರ, ಬಿಜೆಪಿ ಶಾಸಕ ಗಣಪತ್ ಗಾಯಕವಾಡ್ ಹಾಗೂ ಮಹೇಶ್ ಗಾಯಕವಾಡ್ ನಡುವೆ ಜಮೀನಿನ ವಿಚಾರವಾಗಿ ಬಹಳ ದಿನಗಳಿಂದ ವಿವಾದವಿತ್ತು. ಈ ವಿವಾದದಿಂದಾಗಿ ಇಬ್ಬರೂ ಮುಖಂಡರು ಹಾಗೂ ಅವರ ಬೆಂಬಲಿಗರು ದೂರು ನೀಡಲು ಶುಕ್ರವಾರ ತಡರಾತ್ರಿ ಹಿಲ್‌ಲೈನ್ ಪೊಲೀಸ್ ಠಾಣೆಗೆ ಬಂದಿದ್ದರು. ಹಿರಿಯ ಇನ್‌ಸ್ಪೆಕ್ಟರ್ ಅನಿಲ್ ಜಗತಾಪ್ ಅವರ ಕೋಣೆಯಲ್ಲಿ ಬಿಜೆಪಿ ಶಾಸಕ ಗಣಪತ್ ಗಾಯಕ್‌ವಾಡ್ ಮತ್ತು ನಗರ ಮುಖ್ಯಸ್ಥ ಮಹೇಶ್ ಗಾಯಕ್‌ವಾಡ್​ನ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿದ್ದು ಈ ವೇಳೆ ಬಿಜೆಪಿ ಶಾಸಕ ಗಣಪತ್ ಗಾಯಕ್‌ವಾಡ್ ಶೂಟ್ ಮಾಡಿದ್ದಾರೆ ಅಂತ ತಿಳಿದು ಬಂದಿದೆ. ಇನ್ನೊಂದೆಡೆ ಇಬ್ಬರ ನಡುವಿನ ವೈರತ್ವಕ್ಕೆ ಒಳಕಾರಣವೇ ಬೇರೆ ಇದೆ ಅಂತಾ ಹೇಳಲಾಗ್ತಿದೆ. ಮಹಾರಾಷ್ಟ್ರದ ಕಲ್ಯಾಣ್​ ಈಸ್ಟ್​ ವಿಧಾನಸಭಾ ಕ್ಷೇತ್ರದ ಮೇಲೆ ಇಬ್ಬರೂ ಕಣ್ಣಿಟ್ಟಿದ್ದು, ಇಬ್ಬರೂ ಸ್ಪರ್ಧಿಸಬೇಕು ಎನ್ನುವ ಜಿದ್ದಿಗೆ ಬಿದ್ದಿದ್ದಾರೆ. ಇದೇ ವಿಚಾರಕ್ಕೆ ಮೊದಲಿನಿಂದಲೂ ಸಂಘರ್ಷ ನಡೆಯುತ್ತಿದ್ವಂತೆ. ಹೀಗಾಗಿ ಪೊಲೀಸ್ ಠಾಣೆಯಲ್ಲಿ ಗಣಪತ್ ಗಾಯಕ್​ವಾಡ್ ಗುಂಡು ಹಾರಿಸಿದ್ದಾರೆ ಅಂತ ಹೇಳಲಾಗ್ತಿದೆ.

ಪೊಲೀಸ್ ಠಾಣೆಯಲ್ಲಿ ನಡೆದ ಗುಂಡಿನ ದಾಳಿಯಿಂದ ಇಬ್ಬರಿಗೆ ಗಾಯಗಳಾಗಿದ್ದು ಮಹೇಶ್ ಗಾಯಕ್ವಾಡ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಹೇಶ್ ಗಾಯಕ್ವಾಡ್ ಮತ್ತು ಶಿಂಧೆ ಬೆಂಬಲಿಗ ರಾಹುಲ್ ಪಾಟೀಲ್ ತೀವ್ರವಾಗಿ ಗಾಯಗೊಂಡಿದ್ದು, ತಕ್ಷಣ ಚಿಕಿತ್ಸೆಗಾಗಿ ಉಲ್ಲಾಸನಗರದ ಮೀರಾ ಆಸ್ಪತ್ರೆಗೆ ರಾತ್ರಿ 11 ಗಂಟೆಗೆ ಕರೆದೊಯ್ಯಲಾಗಿದೆ. ಆದರೆ ಅವರ ಸ್ಥಿತಿ ಗಂಭೀರವಾದ ನಂತರ, ಇಬ್ಬರೂ ನಾಯಕರನ್ನು ಜುಪಿಟರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಸದ್ಯ ಆಪರೇಷನ್ ಮಾಡಲು ಶುರು ಮಾಡಿದ್ದಾರೆ. ಕರೆಕ್ಟ್ ಟೈಮಿಗೆ ದೇಹದಿಂದ ಗುಂಡು ಹೊರಗೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಒಬ್ಬ ಜನಪ್ರತಿನಿಧಿಯಾಗಿ ಪೊಲೀಸ್ ಠಾಣೆಯಲ್ಲಿ ಈ ರೀತಿಯ ಕೃತ್ಯ ಎಸಗಿರೋದು ನಿಜಕ್ಕೂ ಖಂಡನೀಯ.
– ಗೋಪಾಲ್​ ಜಿಲ್ಲಾ ಮುಖಂಡ, ಶಿವಸೇನೆ

ಇನ್ನು, ಘಟನೆ ಬಗ್ಗೆ ತಿಳಿಯುತ್ತಿದ್ದ ಮಹಾರಾಷ್ಟ ಸಿಎಂ ಏಕಾನಾಥ್ ಸಿಂಧೆ ಜುಪಿಟರ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಗುಂಡೇಟಿನಲ್ಲಿ ಗಾಯಗೊಂಡಿರುವ ಮಹೇಶ್ ಗಾಯಕ್​ವಾಡ್ ಆರೋಗ್ಯ ವಿಚಾರಿಸಿ, ಪೊಲೀಸರಿಗೆ ಕಠಿಣ ಕ್ರಮದ ಬಗ್ಗೆ ಸೂಚನೆ ನೀಡಿದ್ದಾರೆ. ಸದ್ಯ ಈ ಘಟನೆ ಮಹಾರಾಷ್ಟ್ರದಲ್ಲಿ ತಲ್ಲಣ ಸೃಷ್ಟಿಸಿದ್ದು, ಪೊಲೀಸ್ ಠಾಣೆಯಲ್ಲಿ ಶೂಟ್ ಮಾಡಿದ ಬಿಜೆಪಿ ಶಾಸಕ ಗಣಪತ್​ ಗಾಯಕ್​ವಾಡ್​ನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧನಕ್ಕೂ ಮುನ್ನ ಮಾತನಾಡಿರುವ ಗಣಪತ್ ಗಾಯಕ್​ವಾಡ್, ಪೊಲೀಸ್ ಠಾಣೆಯಲ್ಲಿ ಮಗನಿಗೆ ಥಳಿಸಿದ್ದರಿಂದ ಬಂದೂಕನ್ನು ಬಳಸಿದ್ದೇನೆ, ನಾನೇ ಶೂಟ್​ ಮಾಡಿದ್ದು, ಅದರಲ್ಲಿ ನನಗೆ ಯಾವುದೇ ಪಶ್ಚಾತಾಪವಿಲ್ಲ ಎಂದಿದ್ದಾನೆ. ಸದ್ಯ ಬಿಜೆಪಿ ಎಂಎಲ್​ಎ ಗಣಪತ್​ನನ್ನ ಪೊಲೀಸರು ಅರೆಸ್ಟ್ ಮಾಡಿದ್ದು ವಿಚಾರಣೆ ನಡೆಸ್ತಿದ್ದಾರೆ. ಅತ್ತ ಮಹೇಶ್​​ ಗಾಯಕ್​ವಾಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದ್ದು, ಕಾನೂನು ಕಾಪಾಡಬೇಕಿದ್ದ ಜನಪ್ರತಿನಿಧಿಯೇ ಹೀಗೆ ಪೊಲೀಸ್ ಠಾಣೆಯಲ್ಲಿ ಫೈರಿಂಗ್ ಮಾಡಿದ್ದು ನಿಜಕ್ಕೂ ದುರಂತವೇ ಸರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೊಲೀಸ್​ ಠಾಣೆಯಲ್ಲೇ ಶಿವಸೇನೆ ನಾಯಕನಿಗೆ ಗುಂಡಿಟ್ಟ ಬಿಜೆಪಿ MLA; ಭಯಾನಕ ದೃಶ್ಯ CCTVಯಲ್ಲಿ ಸೆರೆ

https://newsfirstlive.com/wp-content/uploads/2024/02/SHOOT-4.jpg

Load More