ಡಿಕೆಶಿ ಔತಣ ಕೂಟಕ್ಕೆ ಬಿಜೆಪಿ ಶಾಸಕರೂ ಬಂದಿದ್ದರು, ಆದರೆ ನಾಲ್ವರು ಸಚಿವರು ಗೈರು..!

author-image
Bheemappa
Updated On
ಡಿಕೆಶಿ ಔತಣ ಕೂಟಕ್ಕೆ ಬಿಜೆಪಿ ಶಾಸಕರೂ ಬಂದಿದ್ದರು, ಆದರೆ ನಾಲ್ವರು ಸಚಿವರು ಗೈರು..!
Advertisment
  • ಡಿಕೆ ಶಿವಕುಮಾರ್ ಆಹ್ವಾನಿಸಿದರೂ ಔತಣಕ್ಕೆ ನಾಲ್ವರು ಸಚಿವರ ಗೈರು!
  • ಎಲ್ಲ ಶಾಸಕರ ವಿಶ್ವಾಸಗಳಿಸಲು ಡಿಸಿಎಂ ಡಿನ್ನರ್​ ಪ್ಲಾನ್​ ಮಾಡಿದ್ರಾ.?
  • ಡಿಸಿಎಂ ಏರ್ಪಡಿಸಿದ್ದ ಔತಣ ಕೂಟಕ್ಕೆ ಯಾರು ಯಾರು ಬಂದಿರಲಿಲ್ಲ?

ರಾಜಕಾರಣ ಅಂದ್ರೆ ಇಬ್ಬರ ನಡುವಿನ ಕುಸ್ತಿ ಅಲ್ಲ, ಬ್ಯಾಟ್​​-ಬಾಲ್​​​ ಹಿಡಿದು ಬಡಿದಾಡೋ ಕ್ರಿಕೆಟ್​​​ ಅಲ್ಲ, ಕಾಲಲ್ಲಿ ಒದ್ದು ಗುರಿಮುಟ್ಟಿಸೋ ಫುಟ್ಬಾಲ್​​​ ಅಲ್ವೇ ಅಲ್ಲ. ರಾಜಕಾರಣ ಅನ್ನೋದು ಪಕ್ಕಾ ಚದುರಂಗ. ತಲೆ ನಾನ್​​ಸ್ಟಾಪ್​​ ಆಗಿ ರನ್ ಆಗಬೇಕು. ನಿನ್ನೆ ಡಿಸಿಎಂ ಡಿಕೆ ಶಿವಕುಮಾರ್, ಔತಣಕೂಟ ಆಯೋಜಿಸಿ ಸೈಲೆಂಟ್​​​ ಆಗೇ ಕೆಲವರಿಗೆ ಟಕ್ಕರ್​​​ ಕೊಟ್ಟಿದ್ದಾರೆ. ಕಾಂಗ್ರೆಸ್​ನಲ್ಲಿ ಆಫ್ಟರ್​​​ ಸಿದ್ದು ನಾನೇ ಕ್ಯಾಪ್ಟನ್​​ ಅನ್ನೋ ಸಂದೇಶ ದಾಟಿಸುವಲ್ಲಿ ಸದ್ಯಕ್ಕೆ ಸಕ್ಸಸ್​ ಆಗಿದ್ದಾರೆ. ಆದ್ರೆ, ಪಿಕ್ಚರ್​​ ಅಭಿ ಬಾಕಿ ಇದೆ.

2020.. ಜುಲೈ2.. ಕಾಂಗ್ರೆಸ್​​ ಹೈಕಮಾಂಡ್​​ ದಿಟ್ಟ ಹೆಜ್ಜೆ ಇಟ್ಟಿತ್ತು. ಸೊರಗಿದ್ದ ಕಾಂಗ್ರೆಸ್​ನ ನಿರ್ಧಾರ, ಅಧಿಕಾರದ ಗದ್ದುಗೆ ಏರಿಸಿತ್ತು. ಸಂಘಟನೆಗೆ ಬಲ ತುಂಬಿದ ಪುನಶ್ಚೇತನ ನೀಡಲು ಬಲಿಷ್ಠ ಆಟಗಾರನಿಗೆ ಹೈಕಮಾಂಡ್​​ ಜವಾಬ್ದಾರಿ ವಹಿಸಿತ್ತು. ಸಿದ್ದರಾಮಯ್ಯಗೆ ಜೋಡೆತ್ತು ಕಲ್ಪಿಸಿದ ವರಿಷ್ಠರ ದಾಳದ ಆ ಪರಿಣಾಮ ಕರ್ನಾಟಕದ ಉತ್ತರದಿಂದ ದಕ್ಷಿಣದವರೆಗೆ ಕಾಂಗ್ರೆಸ್​​ ಪತಾಕೆ ಫಳಫಳಿಸಿತ್ತು. ಆ ದಿನದ ಸವಿ ನೆನಪಿಗಾಗಿ ನಿನ್ನೆ ಡಿಸಿಎಂ ಡಿಕೆ ಶಿವಕುಮಾರ್ ಔತಣಕೂಟ ಆಯೋಜಿಸಿದ್ದರು. ಆದ್ರೆ, ಗಳಿಗೆಗೆ ಇನ್ನೂ ಮೂರುವರೆ ತಿಂಗಳು ಬಾಕಿ. ಡಿಕೆ ಶಿವಕುಮಾರ್ ಔತಣ ರಾಜಕಾರಣ ಚರ್ಚೆ ಹುಟ್ಟುಹಾಕಿದೆ.

publive-image

ಪಕ್ಷದ ಶಾಸಕರಿಗೆ ಭೋಜನ.. ಡಿಸಿಎಂ ಡಿಕೆಶಿ ರಾಜಕಾರಣ!

ಡಿಸಿಎಂ ಡಿಕೆ ಶಿವಕುಮಾರ್ ಡಿನ್ನರ್​ ಪಾಲಿಟಿಕ್ಸ್​, ಕಾಂಗ್ರೆಸ್​​ನ ಆಚೆಗೂ ಸಂಚಲನ ಎಬ್ಬಿಸಿದೆ. ಕೆಪಿಸಿಸಿ ಅಧ್ಯಕ್ಷರಾಗಿ 5 ವರ್ಷ ಪೂರ್ಣ ಅನ್ನೋ ಕಾರಣ ನೆಪಮಾತ್ರ. ಆದ್ರೆ, ಶಾಸಕರಿಗೆ ಭೋಜನ ಆಯೋಜಿಸಿ, ಶಾಸಕರ ವಿಶ್ವಾಸ ಗಳಿಸುವ ಲೆಕ್ಕಾಚಾರ ಅನ್ನೋ ಚರ್ಚೆ ಇದೆ. ಈ ಚದುರಂಗದ ಮಹತ್ವಾಕಾಂಕ್ಷೆ ಅರಿತ ಕೆಲ ಸಚಿವರು, ಈ ಡಿನ್ನರ್​​ ಕೂಟಕ್ಕೆ ಚಕ್ಕರ್​ ಹಾಕಿ ಚರ್ಚೆ ಹುಟ್ಟುಹಾಕಿದ್ದಾರೆ.

ಡಿಸಿಎಂ ಔತಣಕೂಟಕ್ಕೆ ಸಿಎಂ ಸಿದ್ದರಾಮಯ್ಯ ಸೇರಿ ಬಹುತೇಕ ಸಿದ್ದು ಕ್ಯಾಂಪ್​​​ನ ಬಳಗ ಹಾಜರಿತ್ತು. ಆದ್ರೆ, ಸಿದ್ದರಾಮಯ್ಯ ಫ್ರಂಟ್​​​ಲೈನ್​​​ ಟೀಂ ಮಾತ್ರ ಗೈರಾಗಿ ಶಾಕ್​​​ ನೀಡಿದೆ.

ಡಿಕೆ ಶಿವಕುಮಾರ್ ಔತಣಕ್ಕೆ ಗೈರು

  • ಡಾ.ಜಿ.ಪರಮೇಶ್ವರ್, ಗೃಹ ಸಚಿವ
  • ಹೆಚ್.ಸಿ ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ
  • ಕೆ.ಎನ್. ರಾಜಣ್ಣ, ಸಹಕಾರ ಸಚಿವ
  • ಜಮೀರ್ ಅಹ್ಮದ್, ವಸತಿ ಸಚಿವ

ಇದನ್ನೂ ಓದಿ: ಕಾಡು ಉಳಿಸೋ ಶೃಂಗಸಭೆ, ಆದ್ರೆ ಸಾವಿರಾರು ಮರಗಳನ್ನೇ ಕಡಿದರು; Amazon ಅಲ್ಲಿ ಅರಣ್ಯರೋಧನ!

publive-image

ತಿಂಗಳ ಹಿಂದೆ ಅವರು ಡಿನ್ನರ್​​​ ಪಾರ್ಟಿ ಆಯೋಜಿಸಿದ್ದರು. ಆಯೋಜಿಸಿದ್ದು ದಲಿತ ಸಚಿವರು. ಸಮುದಾಯದ ಅಭಿವೃದ್ಧಿ ಚರ್ಚೆಯ ಕಾರಣ ಕೊಟ್ಟಿದ್ದರು. ಆದ್ರೆ, ಅದರಲ್ಲಿ ರಪ್ಪ ಅಂತ ರಾಜಕೀಯ ಇಣುಕಿತ್ತು. ಆವತ್ತು ಅಪೋಸ್​​ ಮಾಡಿ ಅದನ್ನ ರದ್ದು ಮಾಡಿಸಿ ಗಡ್ಡ ಸವರಿದ್ದ ಡಿಸಿಎಂ ಡಿಕೆ ಶಿವಕುಮಾರ್, ತಮ್ಮ ಎದುರಾಳಿಗಳಿಗೆ ಚೆಕ್​​ಮೇಟ್​​​ ಇಟ್ಟಿದ್ದರು. ಈಗ ಸ್ವತಃ ತಾವೇ ಇಡೀ ಕೈಪಡೆಗೆ ಔತಣ ಕೊಟ್ಟು, ಕೆಪಿಸಿಸಿ ಪಟ್ಟಾಭಿಷೇಕಕ್ಕೆ ಪಂಚ ವರ್ಷ ಅಂತ ಕಾರಣ ಕೊಟ್ಟು, ಮತ್ತೊಮ್ಮೆ ಮೇಲುಗೈ ಸಾಧಿಸಿದ್ದಾರೆ.

ಇಂಟ್ರಸ್ಟಿಂಗ್​ ಅಂದ್ರೆ, ಡಿಕೆ ಶಿವಕುಮಾರ್​​ಗೆ ಸಚಿವರು, ಶಾಸಕರು ಶುಭಾಶಯ ಕೋರಿದ್ದಾರೆ. ಅಚ್ಚರಿ ಎಂದ್ರೆ, ಭೋಜನದಲ್ಲಿ ಇಬ್ಬರು ಬಿಜೆಪಿ ಶಾಸಕರು ಪಾಲ್ಗೊಂಡಿದ್ದರು. ಯಾರು ಅನ್ನೋದು ಎಲ್ಲರಿಗೂ ಗೊತ್ತಿದ್ದಿದ್ದೆ. ಬಿಜೆಪಿಯಲ್ಲಿರುವ ಮಾಜಿ ಸಚಿವರಾದ ಸೋಮಶೇಖರ್​ ಮತ್ತು ಹೆಬ್ಬಾರ್​​, ಮಾತೃ ಪಕ್ಷ ಕಾಂಗ್ರೆಸ್​​ಗೆ ನಿಷ್ಠೆ ತೋರಿದ್ದಾರೆ. ಡಿಕೆ ಶಿವಕುಮಾರ್ ಔತಣಕೂಟ ಕಾಂಗ್ರೆಸ್​ನಲ್ಲಿ ಹೊಸ ಸಂಘರ್ಷ ಸೃಷ್ಟಿ ಆಗಲಿದೆ. ದಲಿತ ಸಚಿವರು, ಶಾಸಕರ ನಡೆ ಏನಾಗಿರಲಿದೆ ಅನ್ನೋ ಕುತೂಹಲ ಇದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment