newsfirstkannada.com

ನಾನೇ ಬಾಂಬೆ ಶಾಸಕರ ಲೀಡರ್, ರಾಜ್ಯದಲ್ಲಿ ಕಂಡರಿಯದ ಭ್ರಷ್ಟಾಚಾರಕ್ಕೆ ಕಾರಣಿಕರ್ತ ಡಾ.ಸುಧಾಕರ್: ವಿಶ್ವನಾಥ್ ವಾಗ್ದಾಳಿ

Share :

Published May 19, 2023 at 10:26am

Update September 25, 2023 at 9:19pm

  ಬಾಂಬೆ ಶಾಸಕರ ಲೀಡರ್ ನಾನೇ, ನಾನೇ.. ನಾನೇ!

  ದೋಸ್ತಿ ಸರ್ಕಾರ ಉರುಳಿಸಲು ಪ್ರೇರಣೆ ಯಾರು?

  ಬಂಡಾಯಗಾರರಿಗೆ ಸಿದ್ದರಾಮಯ್ಯ ಪ್ರೇರಣೆ ನಿಜಾನಾ?

ಮಾಜಿ ಆರೋಗ್ಯ ಸಚಿವ ಡಾ.ಸುಧಾಕರ್ ವಿರುದ್ಧ ಎಂಎಲ್​ಸಿ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ. ಕುಮಾರಸ್ವಾಮಿ ನೇತೃತ್ವದ​ ಮೈತ್ರಿ ಸರ್ಕಾರ ಮುರಿದು ಬೀಳಲು ಸಿದ್ದರಾಮಯ್ಯ ಅವರೇ ನಮಗೆ ಪ್ರೇರಣೆ ಎಂದು ಇತ್ತೀಚೆಗೆ ಸುಧಾಕರ್ ಟ್ವೀಟ್ ಮಾಡಿದ್ದರು.

ಇದನ್ನು ಖಂಡಿಸಿ ಮಾಧ್ಯಮಗಳ ಜೊತೆ ಮಾತನಾಡಿರುವ ವಿಶ್ವನಾಥ್, ಕರ್ನಾಟಕದಲ್ಲಿ ಕಂಡರಿಯದಷ್ಟು ಭ್ರಷ್ಟಾಚಾರಕ್ಕೆ ಕಾರಣಿಕರ್ತರಾದ ಮಾಜಿ ಆರೋಗ್ಯ ಸಚಿವ ಡಾ.ಸುಧಾಕರ್ ಕೊಟ್ಟಿರುವ ಸ್ಟೇಟ್​ಮೆಂಟ್ ಬಗ್ಗೆ ನನಗೆ ಗೊತ್ತಿದೆ. ಸಿದ್ದರಾಮಯ್ಯರನ್ನು ಮನೆಗೆ ಕಳುಹಿಸಬೇಕು ಎಂದು ಹೇಳಿದ್ದಾರೆ. ಅವನು (ಸುಧಾಕರ್) ಇಷ್ಟು ದಿನ ಏನ್ ಮಾಡುತ್ತಿದ್ದ? ನೀವು ಅಧಿಕಾರದಲ್ಲಿದ್ದಾಗ ಏನ್ ಮಾಡುತ್ತಿದ್ರಿ. ಸೋತು ಸುಣ್ಣವಾಗಿ, ಮನೆ ಸೇರಿದ ಮೇಲೆ ನಿನ್ನ ಭಷ್ಟಾಚಾರವನ್ನೆಲ್ಲ ಮುಚ್ಚಿಕೊಳ್ಳಲು ಸಿದ್ದರಾಮಯ್ಯ ವಿರುದ್ಧ ಮಾತನಾಡುತ್ತಿದ್ದೀರಿ.. ನೋ, ಇದು ಸರಿ ಅಲ್ಲ ಎಂದು ವಾಗ್ದಾಳಿ ನಡೆಸಿದರು.

ಇದೆಲ್ಲ ಸುಳ್ಳಿನ ಕಂತೆ, 17 ಬಂಡಾಯ ಶಾಸಕರ,ಬಾಂಬೇ ಶಾಸಕರ ಲೀಡರ್ ನಾನೇ ಆಗಿದ್ದೆ. ಬಾಂಬೆಯಲ್ಲಿ ಏನೇನ್ ಆಗಿದೆ ಅನ್ನೋದು ನನಗೆ ಗೊತ್ತಿದೆ. 17 ಶಾಸಕರಲ್ಲಿ ಯಾರೊಬ್ಬರೂ ಕೂಡ ಸಿದ್ದರಾಮಯ್ಯರ ಪ್ರೇರಣೆಯಿಂದ ಮೈತ್ರಿ ಸರ್ಕಾರವನ್ನು ಬೀಳಿಸಿಲ್ಲ ಎಂದು ಸುಧಾಕರ್​ಗೆ ಟಾಂಗ್ ಕೊಟ್ಟರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾನೇ ಬಾಂಬೆ ಶಾಸಕರ ಲೀಡರ್, ರಾಜ್ಯದಲ್ಲಿ ಕಂಡರಿಯದ ಭ್ರಷ್ಟಾಚಾರಕ್ಕೆ ಕಾರಣಿಕರ್ತ ಡಾ.ಸುಧಾಕರ್: ವಿಶ್ವನಾಥ್ ವಾಗ್ದಾಳಿ

https://newsfirstlive.com/wp-content/uploads/2023/05/H-Vishwanath.jpg

Load More