ಕಂಗನಾಗೆ ಕರೆಂಟ್ ಶಾಕ್.. ತಾವೇ ಕೋಲು ಕೊಟ್ಟು ಪೆಟ್ಟು ತಿಂದ ಕಹಾನಿ ಇದು..!

author-image
Veena Gangani
Updated On
ಸಂಸದೆ ಕಂಗನಾ ಹೇಳಿಕೆಯಿಂದ ಬಿಜೆಪಿ ಪಕ್ಷಕ್ಕೆ ಅತಿ ದೊಡ್ಡ ಮುಜುಗರ; ನಡು ಬೀದಿಯಲ್ಲಿ ಕೈ ಬಿಡ್ತಾ ಹೈಕಮಾಂಡ್‌?
Advertisment
  • ಕಾಂಟ್ರವರ್ಸಿ ಕ್ವೀನ್​ ಎಂದೇ ಫೇಮಸ್​ ಆಗಿರೋ ನಟಿ
  • ಕಾಂಗ್ರೆಸ್ ಸರ್ಕಾರ ಟೀಕಿಸೋ ಭರದಲ್ಲಿ ತಾವೇ ಪೆಟ್ಟು ತಿಂದ್ರಾ?
  • ಕಂಗನಾ ಗಂಭೀರ ಆರೋಪಕ್ಕೆ ವಿದ್ಯುತ್ ಮಂಡಳಿ ಖಡಕ್​ ತಿರುಗೇಟು

ಒಂದು ಕಾಲದ ಬಾಲಿವುಡ್ ಕ್ವೀನ್.. ಈಗ ಬಿಜೆಪಿ ಸಂಸದೆ ಕಂಗನಾ ರಣಾವತ್​ಗೆ ಕರೆಂಟ್ ಶಾಕ್ ಹೊಡೆದಂತಾಗಿದೆ. ಕಾಂಗ್ರೆಸ್ ಸರ್ಕಾರವನ್ನು ಟೀಕಿಸೋ ಭರದಲ್ಲಿ ತಾವೇ ಕೋಲು ಕೊಟ್ಟು.. ತಾವೇ ಪೆಟ್ಟು ತಿನ್ನುವಂತಾಗಿದೆ. ಇದು ಕಂಗನಾ ಕರೆಂಟ್ ಕಹಾನಿ.

ಇದನ್ನೂ ಓದಿ: 9 ಸಾವಿರಕ್ಕೂ ಹೆಚ್ಚು ಸಹಾಯಕ ಲೋಕೋ ಪೈಲಟ್ ಹುದ್ದೆಗಳು.. SSLC ಪಾಸ್ ಆಗಿದ್ರೆ ಸಾಕು…!

publive-image

ಕಾಂಟ್ರವರ್ಸಿ ಕ್ವೀನ್​ ಎಂದೇ ಫೇಮಸ್​ ಆಗಿರೋ ಬಾಲಿವುಡ್​ ನಟಿ ಕಂಗನಾ ರಣಾವತ್​ ರಾಜಕೀಯ ಜೀವನಕ್ಕೆ ಕಾಲಿಟ್ಟರೂ ವಿವಾದಗಳೂ ಬಿಟ್ಟಂತೆ ಕಾಣ್ತಿಲ್ಲ. ಸದಾ ಚರ್ಚೆಗೆ ಕಾರಣ ಆಗೋ ಮಾತುಗಳಿಂದಲೇ ಸದ್ದು ಮಾಡೋ ನಟಿ ಕಮ್​ ಸಂಸದೆ ಕಂಗನಾಗೆ ಕರೆಂಟ್ ಶಾಕ್ ಎದುರಾಗಿದೆ.

ಸದಾ ಕಾಂಗ್ರೆಸ್​ ಸರ್ಕಾರವನ್ನ ಬಾಯಿಗೆ ಬಂದಂತೆ ಬೈಯುತ್ತಲೇ, ಕೆಲವೊಮ್ಮೆ ವಿವಾದಗಳನ್ನೂ ಮೈಗೆಳೆದುಕೊಳ್ತಿರೋ ಕಂಗನಾ, ಈಗ ವಾಸವೇ ಇರದ ಮನೆಗೆ ಕಾಂಗ್ರೆಸ್ ಸರ್ಕಾರ 1 ಲಕ್ಷ ರೂಪಾಯಿ ಕರೆಂಟ್ ಬಿಲ್​ ಹಾಕಿದ್ದಾರೆ ಅನ್ನೋ ಆರೋಪ ಮಾಡಿದ್ದರು. ಹಿಮಾಚಲ ಪ್ರದೇಶದ ಮಂಡಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಕಂಗನಾ, ನಮ್ಮ ಮನೆಗೆ 1 ಲಕ್ಷ ಕರೆಂಟ್ ಬಿಲ್ ಬಂದಿದೆ ಅಂತಾ ಆರೋಪಿಸಿದ್ದರು.

publive-image

ಈ ತಿಂಗಳು ಮನಾಲಿಯಲ್ಲಿ ಇರುವ ನನ್ನ ಮನೆಗೆ ಒಂದು ಲಕ್ಷ ರೂಪಾಯಿ ವಿದ್ಯುತ್ ಬಿಲ್ ಬಂದಿದೆ. ಆ ಮನೆಯಲ್ಲಿ ನಾನು ವಾಸ ಮಾಡುತ್ತಿಲ್ಲ. ಇದು ನಿಜಕ್ಕೂ ಶೋಚನೀಯ ಪರಿಸ್ಥಿತಿ. ಅದನ್ನು ಓದಿ ನನಗೆ ನಾಚಿಕೆ ಆಯಿತು. ಎಂಥ ಸ್ಥಿತಿ ಬಂತು ಎನಿಸಿತು.

-ಕಂಗನಾ ರಣಾವತ್, ನಟಿ

1 ಲಕ್ಷ ರೂಪಾಯಿ ಕರೆಂಟ್ ಬಿಲ್ಲಾ? ಅಂತಾ ಕಂಗನಾ ಆರೋಪ ಕೇಳಿದ ಎಲ್ಲರಿಗೂ ಅಚ್ಚರಿಯಾಗಿತ್ತು. ಆದ್ರೆ ಅಸಲಿ ವಿಷಯ ಏನು ಅನ್ನೋದು ಈಗ ಬಹಿರಂಗವಾಗಿದೆ. ಕಂಗನಾ ಹೇಳಿಕೆಗೆ ಹಿಮಾಚಲ ಪ್ರದೇಶ ಸರ್ಕಾರ ಉತ್ತರ ನೀಡಿದೆ. ಇದರಿಂದ ಕರೆಂಟ್ ಶಾಕ್ ಕೊಡೋದಕ್ಕೆ ಪ್ಲಾನ್ ಮಾಡಿದ್ದ ಕಂಗನಾ ಟ್ರ್ಯಾನ್ಸ್​ಫಾರ್ಮರ್ ಬ್ಲಾಸ್ಟ್ ಆದಂತಾಗಿದೆ.

ಕಂಗನಾ ಆರೋಪದ ಬಗ್ಗೆ ಹಿಮಾಚಲ ಪ್ರದೇಶ ರಾಜ್ಯ ವಿದ್ಯುತ್ ಮಂಡಳಿಯ ಮ್ಯಾನೇಜಿಂಗ್ ಡೈರೆಕ್ಟರ್ ಸಂದೀಪ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಕಂಗನಾರವರು ಹಳೇ ಬಾಕಿ 32 ಸಾವಿರದ 287 ರೂಪಾಯಿ ಪಾವತಿ ಮಾಡಿರಲಿಲ್ಲ. ಅದನ್ನೂ ಸೇರಿಸಿ ಜನವರಿ ಮತ್ತು ಫೆಬ್ರವರಿ ತಿಂಗಳ ವಿದ್ಯುತ್ ಬಿಲ್ 90 ಸಾವಿರದ 384 ರೂಪಾಯಿ ಆಗಿದೆ ಎಂದು ಲೆಕ್ಕ ನೀಡಿದ್ದಾರೆ. ತಡವಾಗಿ ವಿದ್ಯುತ್ ಬಿಲ್ ಪಾವತಿ ಮಾಡುವುದನ್ನೇ ಕಂಗನಾ ಅಭ್ಯಾಸ ಮಾಡಿಕೊಂಡಿದ್ದಾರೆ. ಹೀಗಾಗಿ ದುಬಾರಿ ಬಿಲ್ ಬಂದಿದೆ ಎಂದಿದ್ದಾರೆ. 700 ರೂಪಾಯಿ ಸಬ್ಸಿಡಿ ಕೂಡ ಕಂಗನಾ ಪಡೆಯುತ್ತಿದ್ದಾರೆ ಎಂದು ಸಂದೀಪ್ ಕುಮಾರ್ ಅಸಲಿ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ:ವಿಚಾರಣೆಯ ರಣವ್ಯೂಹದಲ್ಲಿ ಉಗ್ರ ರಾಣಾ.. ಭಾರತಕ್ಕೆ ಕರೆ ತರ್ತಿದ್ದಂತೆ ಏನೆಲ್ಲ ಆಯ್ತು..?

ಕಂಗನಾ ಮನೆಗೆ ಸುಮ್ಮ ಸುಮ್ಮನೆ 1 ಲಕ್ಷ ಬಿಲ್ ಬಂದಿಲ್ಲ. ಆಕೆಗೆ ಕರೆಂಟ್ ಬಿಲ್ ಕಟ್ಟೋ ಅಭ್ಯಾಸ ಇಲ್ಲ. ಹಳೇ ತಿಂಗಳುಗಳ ಹಣ ಕಟ್ಟದೇ ಇರೋದ್ರಿಂದ ದುಬಾರಿ ಬಿಲ್ ಬಂದಿದೆ ಅನ್ನೋ ಟೀಕೆ ಶುರುವಾಗಿದೆ. ಈ ಬಗ್ಗೆ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಮಾತನಾಡಿ, ಕಂಗನಾಗೆ ಮಾತನಾಡೋ ಚಾಳಿ ಅಂತಾ ಜಸ್ಟ್ ಅವಾಯ್ಡ್ ಮಾಡಿದ್ದಾರೆ. ಅವರು ಎತ್ತಿರುವ ವಿಷಯ ಹೆಚ್ಚಿನ ವಿದ್ಯುತ್ ಬಿಲ್ ಬಗ್ಗೆ. ಅವರು ದೊಡ್ಡ ಮನೆ ಕಟ್ಟಿದ್ದಾರೆ, ಅದು ಸ್ವಾಭಾವಿಕವಾಗಿ ದೊಡ್ಡ ಬಿಲ್‌ಗೆ ಕಾರಣವಾಗುತ್ತದೆ. ನಾನು ಈ ವಿಷಯದ ಬಗ್ಗೆ ನಿರ್ದೇಶನಗಳನ್ನು ನೀಡಿದ್ದೇನೆ. ಆದಾಗ್ಯೂ, ನಾನು ಅವರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಆಗಾಗ್ಗೆ ಇಂತಹ ಹೇಳಿಕೆಗಳನ್ನು ನೀಡ್ತಾ ಇರ್ತಾರೆ. 

- ಸುಖ್ವಿಂದರ್ ಸಿಂಗ್, ಹಿಮಾಚಲ ಪ್ರದೇಶ ಸಿಎಂ

publive-image

ದಾಖಲೆ ಸಹಿತ ಕರೆಂಟ್ ಬಿಲ್​ಗಳನ್ನ ಹಿಮಾಚಲ ಸರ್ಕಾರ ತೆರೆದಿಟ್ಟಿದೆ. ಈ ಮೂಲಕ ಬಿಜೆಪಿ ಸಂಸದೆ ಆರೋಪ ಸುಳ್ಳು ಅನ್ನೋದು ಸ್ಪಷ್ಟವಾಗಿ ಗೊತ್ತಾಗಿದೆ. ಕಂಗನಾ ಮಾತು ಕೇಳಿ ಮೊದಲಿಗೆ ಕಾಂಗ್ರೆಸ್​ ಸರ್ಕಾರವನ್ನ ಟೀಕೆ ಮಾಡಿದ್ದ ಜನ ನಟಿಯ ಕಳ್ಳಾಟದ ಬಗ್ಗೆ ಮಾತನಾಡೋದಕ್ಕೆ ಶುರು ಮಾಡಿದ್ದಾರೆ. ಸದ್ಯ ಕಂಗನಾ ಪರಿಸ್ಥಿತಿ ಇರಲಾರದೇ ಇರುವೆ ಬಿಟ್ಟುಕೊಂಡಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment