newsfirstkannada.com

ವಿ. ಸೋಮಣ್ಣಗೆ ತುಮಕೂರು ಲೋಕಸಭಾ ಟಿಕೆಟ್? ಬಿಎಸ್‌ವೈ ಜೊತೆ ಸಂಸದ ಬಸವರಾಜು ಮಾಸ್ಟರ್ ಪ್ಲಾನ್‌!

Share :

Published February 13, 2024 at 1:20pm

  ವಿ.ಸೋಮಣ್ಣ ಅವರಿಗೆ ಟಿಕೆಟ್ ಕೊಡಿಸಲು ಜಿದ್ದಿಗೆ ಬಿದ್ದ ಸಂಸದರು

  ಯಡಿಯೂರಪ್ಪ ಅವರ ಮನೆಗೆ ಭೇಟಿ ಕೊಟ್ಟ ಸಂಸದ ಬಸವರಾಜು

  ದೆಹಲಿ ವರಿಷ್ಠರನ್ನ ಭೇಟಿ ಮಾಡಿ ಬಂದ ಬಳಿಕ ರಾಜ್ಯದಲ್ಲಿ ಲಾಬಿ ಶುರು

ತುಮಕೂರು: ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ಗಾಗಿ ದೆಹಲಿಯ ತೀವ್ರ ಕಸರತ್ತು ನಡೆಸಿದ ಬಳಿಕ ಈಗ ರಾಜ್ಯ ಮಟ್ಟದಲ್ಲೂ ಲಾಬಿ ಶುರುವಾಗಿದೆ. ಮಾಜಿ ಸಚಿವ ವಿ.ಸೋಮಣ್ಣ ಅವರಿಗೆ ತುಮಕೂರು ಲೋಕಸಭಾ ಟಿಕೆಟ್ ಕೊಡಿಸಲು ಸಂಸದ ಜಿ.ಎಸ್ ಬಸವರಾಜು ಜಿದ್ದಿಗೆ ಬಿದ್ದು ಓಡಾಡುತ್ತಿದ್ದಾರೆ.

ತುಮಕೂರು ಸಂಸದ ಜಿ.ಎಸ್ ಬಸವರಾಜು ಅವರು ಶಿವಮೊಗ್ಗದಲ್ಲಿರುವ ಯಡಿಯೂರಪ್ಪ ಅವರ ಮನೆಗೆ ಭೇಟಿ ಕೊಟ್ಟು ಮಹತ್ವದ ಮಾತುಕತೆ ನಡೆಸಿದ್ದಾರೆ. ಈ ವೇಳೆ ತುಮಕೂರಿನಲ್ಲಿ ವಿ. ಸೋಮಣ್ಣಗೆ ಟಿಕೆಟ್ ಕೊಡುವಂತೆ ಯಡಿಯೂರಪ್ಪನವರ ಮನವೊಲಿಕೆಯ ಪ್ರಯತ್ನ ಮಾಡಿದ್ದಾರೆ.

ಮಹತ್ವದ ಚರ್ಚೆ ನಡೆಸಿರುವ ಸಂಸದ ಬಸವರಾಜು ಅವರು ತುಮಕೂರು ಲೋಕಸಭೆ ಕ್ಷೇತ್ರದ ಗ್ರೌಂಡ್ ರಿಪೋರ್ಟ್ ಅನ್ನು ಯಡಿಯೂರಪ್ಪ ಅವರಿಗೆ ಕೊಟ್ಟಿದ್ದಾರೆ. ಈ ಗ್ರೌಂಡ್ ರಿಪೋರ್ಟ್ ಜೊತೆಗೆ ಈ ಬಾರಿ ಸೋಮಣ್ಣ ಅವರಿಗೆ ಟಿಕೆಟ್ ಕೊಟ್ರೆ ಬಿಜೆಪಿ ಗೆಲ್ಲಬಹುದು ಅನ್ನೋ ಸಂದೇಶ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಮಂಡ್ಯದಿಂದ ಸ್ಪರ್ಧಿಸೋದು ನಿಖಿಲಾ.. HDKನಾ? ದೊಡ್ಡಗೌಡರ ಮನೆಯಲ್ಲಿ ಮಹತ್ವದ ಸಭೆ; ಲೆಕ್ಕಾಚಾರ ಏನು?

ಮಾಧುಸ್ವಾಮಿ ಟಕ್ಕರ್ ಕೊಟ್ಟ ಬಸವರಾಜು!
ತುಮಕೂರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ನಾಯಕರ ಮಧ್ಯೆ ಪೈಪೋಟಿ ನಡೆಯುತ್ತಿದೆ. ಬಿ.ಎಸ್‌ ಯಡಿಯೂರಪ್ಪನವರು ನನಗೆ ಸ್ಪರ್ಧೆ ಮಾಡಿ ಅಂತಾ ಹೇಳಿದ್ದಾರೆ. ಹೀಗಾಗಿ ನಾನು ಕೂಡ ಟಿಕೆಟ್‌ ಆಕಾಂಕ್ಷಿ ಎಂದು ಮಾಧುಸ್ವಾಮಿ ಹೇಳಿದ್ದರು. ಮಾಜಿ ಸಚಿವ ಮಾಧುಸ್ವಾಮಿ ಅವರ ಹೇಳಿಕೆ ಬೆನ್ನಲ್ಲೆ‌ ಸಂಸದ ಜಿ.ಎಸ್ ಬಸವರಾಜು ಅವರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ.

ಸಂಸದ‌ ಜಿ.ಎಸ್ ಬಸವರಾಜು ಅವರು ಈಗಾಗ್ಲೇ ವಿ.ಸೋಮಣ್ಣ ಅವರ ಜೊತೆಗೆ ದೆಹಲಿ ವರಿಷ್ಠರನ್ನ ಭೇಟಿ ಮಾಡಿ ಬಂದಿದ್ದಾರೆ. ಸೋಮಣ್ಣ ಜೊತೆಗೆ ಅಮಿತ್ ಶಾ, ಜೆ.ಪಿ ನಡ್ಡಾ, ನಿತಿನ್ ಗಡ್ಕರಿಯನ್ನ ಭೇಟಿ ಮಾಡಿದ್ದು, ಇದೀಗ ಯಡಿಯೂರಪ್ಪ ಅವರ ಮೂಲಕ ಟಿಕೆಟ್‌ಗಾಗಿ ಲಾಬಿ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿ. ಸೋಮಣ್ಣಗೆ ತುಮಕೂರು ಲೋಕಸಭಾ ಟಿಕೆಟ್? ಬಿಎಸ್‌ವೈ ಜೊತೆ ಸಂಸದ ಬಸವರಾಜು ಮಾಸ್ಟರ್ ಪ್ಲಾನ್‌!

https://newsfirstlive.com/wp-content/uploads/2024/02/Somanna-Bsyediyurappa.jpg

Load More