newsfirstkannada.com

2024ರ ಎಲೆಕ್ಷನ್​​ನಲ್ಲಿ ಬಿಜೆಪಿಯ ಹಲವು ಸಂಸದರಿಗೆ ಕೊಕ್; ಯಾಱರಿಗೆ ಟಿಕೆಟ್ ಸಿಗಲ್ಲ..?

Share :

05-06-2023

  2024ರ ಎಲೆಕ್ಷನ್​​ನಲ್ಲಿ ಬಿಜೆಪಿ ಸಂಸದರಿಗೆ ಕೊಕ್

  ಯಾಱರಿಗೆ ಇದ್ದಾರೆ ಆ ಟಿಕೆಟ್ ಲಿಸ್ಟ್​​ನಲ್ಲಿ?

  ರಾಜ್ಯದಲ್ಲಿ ಮೂರು ಪಕ್ಷಗಳು ಲೋಕಸಭೆಗೆ ತಾಲೀಮು

ವಿಧಾನಸಭೆ ಬಳಿಕ ಲೋಕಸಭೆಗೆ ರಾಜ್ಯದ 3 ಪಕ್ಷಗಳಿಂದ ಭರದ ಸಿದ್ಧತೆ ಶುರುವಾಗಿದೆ. ಲೋಕಸಭೆ ಎಲೆಕ್ಷನ್​ಗೂ ಹಳೇ ಮಾದರಿ ರಣತಂತ್ರಕ್ಕೆ ಬಿಜೆಪಿ ಮುಂದಾಗಿದೆ. ಇತ್ತ ಕಾಂಗ್ರೆಸ್​ನಲ್ಲಿ ತಾನೇ ರೂಪಿಸಿದ ಶಾಸನಕ್ಕೆ ತಡೆಹಿಡಿದಿದೆ. ಜೆಡಿಎಸ್ ತನ್ನ ಪ್ರತಿಷ್ಠೆ ಮರು ಸ್ಥಾಪನೆಗೆ ಪಣ ತೊಟ್ಟಿದೆ.

ವಿಧಾನಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಮೂರು ಪಕ್ಷಗಳು ಲೋಕಸಭೆಗೆ ತಾಲೀಮು ಆರಂಭಿಸಿವೆ. ಈಗಾಗಲೇ ಲೋಕಸಭೆ ಚುನಾವಣೆಗೆ ಹತ್ತೇ ತಿಂಗಳು ಬಾಕಿಯಿದ್ದು, ಕೈ-ಕಮಲ ಕೇಂದ್ರದಲ್ಲಿ ಅಧಿಕಾರದ ಕನಸು ಕಾಣ್ತಿವೆ. ಲೋಕಸಭೆ ಎಲೆಕ್ಷನ್​ಗೂ ವಿಧಾನಸಭಾ ಚುನಾವಣೆ ಮಾದರಿಗೆ ತಂತ್ರ ರೂಪಿಸ್ತಿದ್ದು, ಚುನಾವಣೆ ಕಣ ಹಲವು ಪ್ರಯೋಗಗಳಿಗೆ ಸಾಕ್ಷಿ ಆಗಲಿದೆ.

2024ರ ಎಲೆಕ್ಷನ್​​ನಲ್ಲಿ ಬಿಜೆಪಿಯ ಹಲವು ಸಂಸದರಿಗೆ ಕೊಕ್
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಈ ಫಾರ್ಮೂಲದಿಂದ ಕೈ ಸುಟ್ಟುಕೊಂಡಿದ್ದ ಬಿಜೆಪಿ, ಲೋಕಸಭಾ ಚುನಾವಣೆಯಲ್ಲೂ ಅದೇ ತಂತ್ರದ ಮೊರೆ ಹೋಗೋದು ಅನಿವಾರ್ಯವಾಗಿದೆ. ವಯಸ್ಸು, ಆರೋಗ್ಯ, ಹಾಗೂ ವರ್ಚಸ್ಸಿನ ಕಾರಣ ಕೊಟ್ಟು ಕೊಕ್​ ನೀಡಲು ಮುಂದಾಗಿದೆ. ಸಂಸದರಿಂದಲೇ ಎಲೆಕ್ಷನ್ ಪಾಲಿಟಿಕ್ಸ್​​ ನಿವೃತ್ತಿಗೆ ಪ್ಲಾನ್ ಮಾಡಿದೆ. ಬೆಂಗಳೂರು ಉತ್ತರ ಕ್ಷೇತ್ರ ಡಿ.ವಿ.ಸದಾನಂದಗೌಡ, ಚಾಮರಾಜನಗರ ಲೋಕಸಭಾ ಕ್ಷೇತ್ರದ ವಿ. ಶ್ರೀನಿವಾಸ್ ಪ್ರಸಾದ್, ತುಮಕೂರು ಲೋಕಸಭಾ ಕ್ಷೇತ್ರದ ಜಿ‌.ಎಸ್. ಬಸವರಾಜುಗೆ ಅಲಿಖಿತ ಪಕ್ಷದ ವಯಸ್ಸಿನ ಶಾಸನ ಅಡ್ಡಿಯಾಗುತ್ತಿದೆ.

ದಾವಣಗೆರೆ ಸಂಸದ ಜಿ‌.ಎಂ.ಸಿದ್ದೇಶ್ವರ್, ವಿಜಯಪುರದ ರಮೇಶ್ ಜಿಗಜಿಣಗಿಗೂ ಇದೇ ಕಾಯ್ದೆ ಅಡ್ಡಿ ಆಗಿದೆ. ಬಾಗಲಕೋಟೆಯ ಪಿ.ಸಿ. ಗದ್ದೀಗೌಡರ್ ಕಳೆದ ಬಾರಿಯೇ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಆದ್ರೆ ವರಿಷ್ಠರ ಸೂಚನೆಗೆ ಸ್ಪರ್ಧೆ ಮಾಡಿದ್ದರು. ಚಿಕ್ಕಬಳ್ಳಾಪುರ ಕ್ಷೇತ್ರದ ಬಿ.ಎನ್‌.ಬಚ್ಚೇಗೌಡರಿಗೆ ಈ ಬಾರಿ ಚುನಾವಣೆ ಸ್ಪರ್ಧಿಸಲು ಆಸಕ್ತಿ ಇಲ್ಲ. ಬಳ್ಳಾರಿ ದೇವೇಂದ್ರಪ್ಪ ಕ್ಷೇತ್ರದಲ್ಲಿ ಅಷ್ಟೇ ವರ್ಚಸ್ವಿ ನಾಯಕರಲ್ಲ.

ದಕ್ಷಿಣ ಕನ್ನಡದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಸ್ಪರ್ಧೆಗೆ ಸ್ವತಃ ಸಂಘ ಪರಿವಾರದ ವಿರೋಧವಿದೆ. ಉತ್ತರ ಕನ್ನಡದ ಅನಂತ್‌ಕುಮಾರ್ ಹೆಗಡೆ ರಾಜಕೀಯ ರುಚಿ ಕಳೆದುಕೊಂಡಿದ್ದಾರೆ. ಶೆಟ್ಟರ್ ಸಂಬಂಧಿ ಬೆಳಗಾವಿ ಸಂಸದೆ ಮಂಗಳಾ ಅಂಗಡಿಗೆ ವರಿಷ್ಠರು ಟಿಕೆಟ್ ನೀಡೋದು ಡೌಟು ಎನ್ನಲಾಗ್ತಿದೆ.

ಕಾಂಗ್ರೆಸ್ ಪಕ್ಷದಲ್ಲಿ ಬದಲಾಗುತ್ತಿದೆ ಹುದ್ದೆ ಸಂಪ್ರದಾಯ!
ವಿಧಾನಸಭೆಯಲ್ಲಿ ದಿಗ್ವಿಜಯ ಸಾಧಿಸಿದ ಕಾಂಗ್ರೆಸ್, ಲೋಕಸಭೆ ಚುನಾವಣೆಗೆ ರಂಗ ತಾಲೀಮು ಆರಂಭಿಸಿದೆ. ತಾನೇ ರೂಪಿಸಿದ ಒಂದು ವ್ಯಕ್ತಿಗೆ ಒಂದೇ ಹುದ್ದೆ ಎಂಬ ಸಂಪ್ರದಾಯವನ್ನ ಬದಿಗೆ ಸರಿಸಿದೆ. ಲೋಕಸಭಾ ಚುನಾವಣೆ ಹಿನ್ನಲೆ ಕೆಪಿಸಿಸಿ ಅಧ್ಯಕ್ಷರು, ಕಾರ್ಯಾಧ್ಯಕ್ಷರ ಬದಲಾವಣೆ ಬೇಡ ಎಂಬ ನಿರ್ಧಾರ ತಳೆದಿದೆ. ಇತರರಿಗೆ ಅವಕಾಶ ಕಲ್ಪಿಸಲು ಮುಂದಾದ್ರೆ ಗೊಂದಲ ಸೃಷ್ಟಿಸುವ ಸಾಧ್ಯತೆ ಇದೆ ಅನ್ನೋದು ಹೈಕಮಾಂಡ್ ಅರಿತಂತೆ ಕಾಣಿಸ್ತಿದೆ.

ಅಧ್ಯಕ್ಷರು, ಕಾರ್ಯಾಧ್ಯಕ್ಷರನ್ನ ಬದಲಿಸಿದ್ರೆ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರಬಹುದು. ಡಿಸಿಎಂ ಕೂಡ ಎರಡೂ ಸ್ಥಾನದಲ್ಲಿದ್ದಾರೆ ಎಂಬ ಕೂಗು ಏಳಲಿದೆ. ಸರ್ಕಾರದ ವರ್ಚಸ್ಸು, ಪಕ್ಷದ ಇಮೇಜ್ ಹೆಚ್ಚಿಸುವ ಜವಾಬ್ದಾರಿ ನೀಡಲಾಗಿದ್ದು, ಸದ್ಯ ಈ ಎರಡು ಜವಾಬ್ದಾರಿಗಳಲ್ಲಿ ನೂತನ ಸಚಿವರು ಫುಲ್ ಬ್ಯುಸಿ ಆಗಿದ್ದಾರೆ. ಈ ಎಲ್ಲಾ ಕಾರಣಗಳಿಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್, ಕಾರ್ಯಾಧ್ಯಕ್ಷರುಗಳಾದ ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ ಸಚಿವ ಸ್ಥಾನದ ಜೊತೆ ಪಕ್ಷದ ಹುದ್ದೆಯಲ್ಲೂ ಮುಂದುವರೆಯಲಿದ್ದಾರೆ.

ಎಂಪಿ ಎಲೆಕ್ಷನ್ ಗಂಭೀರವಾಗಿ ತೆಗೆದುಕೊಂಡ ಜೆಡಿಎಸ್

ಲೋಕಸಭೆ ಎಲೆಕ್ಷನ್ ಗಂಭೀರವಾಗಿ ತೆಗೆದುಕೊಂಡಿರುವ ಮಾಜಿ ಸಿಎಂ ಕುಮಾರಸ್ವಾಮಿ, 8 ಲೋಕಸಭಾ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದಾರೆ.. ಹಳೇ ಮೈಸೂರು ಭಾಗದ ಕ್ಷೇತ್ರಗಳನ್ನೇ ಜೆಡಿಎಸ್ ಟಾರ್ಗೆಟ್ ಮಾಡಿದೆ. ಎಂಪಿ ಚುನಾವಣೆಗೆ ಹಳೇ ಮೈಸೂರು ಭಾಗವನ್ನ ಮರುವಶಕ್ಕೆ ತಂತ್ರ ರೂಪಿಸಿರುವ ಹೆಚ್ಡಿಕೆ ಈಗಾಗಲೇ ಗೆಲುವಿನ ತಂತ್ರ ರೂಪಿಸಿದ್ದಾರೆ ಎನ್ನಲಾಗ್ತಿದೆ.

ಒಟ್ಟಾರೆ, ವಿಧಾನಸಭೆ ಚುನಾವಣೆ ಅಂತ್ಯವಾಗಿ ರಾಜ್ಯದಲ್ಲಿ ಕಾಂಗ್ರೆಸ್, ಅಧಿಕಾರದ ಗದ್ದುಗೆ ಹಿಡಿದಿದೆ. ಹಾಗಾಗಿ ಈ ಬಾರಿ ಹೆಚ್ಚು ಸ್ಥಾನಗಳನ್ನ ನಿರೀಕ್ಷೆ ಹೊಂದಿದೆ. ಆದ್ರೆ, ಬಿಜೆಪಿ ಮಾತ್ರ ವಿಧಾನಸಭೆ ಮತ್ತು ಲೋಕಸಭೆಗೆ ಮತದಾರನ ಮನಸ್ಸು ಭಿನ್ನವಾಗಿರುತ್ತೆ ಅನ್ನೋದನ್ನ ನಂಬಿ ಕೂತಿದೆ. ಇತ್ತ, ಅಸ್ತಿತ್ವಕ್ಕೆ ಪೆಟ್ಟು ತಿಂದ ದಳಪತಿ, ಪ್ರತಿಷ್ಠೆ ಮರುಗಳಿಕೆಗೆ ಪಣತೊಟ್ಟಿದ್ದು, ಲೋಕ ಕದನ ರಣರೋಚಕವಾಗಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

2024ರ ಎಲೆಕ್ಷನ್​​ನಲ್ಲಿ ಬಿಜೆಪಿಯ ಹಲವು ಸಂಸದರಿಗೆ ಕೊಕ್; ಯಾಱರಿಗೆ ಟಿಕೆಟ್ ಸಿಗಲ್ಲ..?

https://newsfirstlive.com/wp-content/uploads/2023/06/hdk-1.jpg

Load More