ರಾಜಭವನದ ಕದ ತಟ್ಟಿದ ಮತ್ತೊಂದು ದೊಡ್ಡ ಹಗರಣ; ಸಿದ್ದು ಬಳಿಕ ಖರ್ಗೆ ಕುಟುಂಬ, ಎಂಬಿ ಪಾಟೀಲ್​​ಗೆ ಸಂಕಷ್ಟ..!

author-image
Ganesh
Updated On
ರಾಜಭವನದ ಕದ ತಟ್ಟಿದ ಮತ್ತೊಂದು ದೊಡ್ಡ ಹಗರಣ; ಸಿದ್ದು ಬಳಿಕ ಖರ್ಗೆ ಕುಟುಂಬ, ಎಂಬಿ ಪಾಟೀಲ್​​ಗೆ ಸಂಕಷ್ಟ..!
Advertisment
  • ಸಿದ್ದು ಬಳಿಕ ಖರ್ಗೆ ಕುಟುಂಬ, ಎಂ.ಬಿ. ಪಾಟೀಲ್ ಸರದಿ
  • ಕೆಐಎಡಿಬಿ 5 ಎಕರೆ ಜಾಗ ಅಕ್ರಮವಾಗಿ ಪರಭಾರೆ ಆರೋಪ
  • ರಾಜ್ಯಪಾಲರ ಭೇಟಿಯಾಗಿ ಲೆಹರ್ ಸಿಂಗ್‌ ಕ್ರಮಕ್ಕೆ ಆಗ್ರಹ

ಮುಡಾ ಅಕ್ರಮದ ಮಾದರಿಯಲ್ಲಿಯೇ ಮತ್ತೊಂದು ದೊಡ್ಡ ಹಗರಣ ರಾಜಭವನದ ಕದ ತಟ್ಟಿದೆ. ಖರ್ಗೆ ಕುಟುಂಬ, ಸಚಿವ ಎಂ.ಬಿ.ಪಾಟೀಲ್ ಹೆಸರು ಈ ಅಕ್ರಮದಲ್ಲಿ ತಳುಕು ಹಾಕಿಕೊಂಡಿದೆ. ಈ ಹಿಂದೆ ದಾಖಲಾಗಿದ್ದ ಖಾಸಗಿ ದೂರು ಹಿಡಿದು ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್‌ಸಿಂಗ್ ರಾಜ್ಯಪಾಲರನ್ನ ಭೇಟಿಯಾಗಿದ್ದಾರೆ. ಹೀಗಾಗಿ ಕೈ ಪಾಳಯದ ಮತ್ತಷ್ಟು ನಾಯಕರಿಗೂ ಪ್ರಾಸಿಕ್ಯೂಷನ್‌ ಭೂತ ಬೆನ್ನತ್ತುತ್ತಾ ಎಂಬ ಪ್ರಶ್ನೆ ಮೂಡಿದೆ.

ಮೈಸೂರು ನಗರಾಭಿವೃದ್ಧಿ ಇಲಾಖೆ ಅಕ್ರಮ ನಿವೇಶನ ಹಂಚಿಕೆ ಪ್ರಕರಣ ಸಿಎಂಗೆ ಇನ್ನಿಲ್ಲದಂತೆ ಕಾಡ್ತಿದೆ. ಸಿದ್ದರಾಮಯ್ಯಗೆ ಕಾನೂನು ಸಂಕಷ್ಟವನ್ನೂ ತಂದಿಟ್ಟಿದೆ. ಈಗ ಇದೇ ಮಾದರಿಯಲ್ಲಿಯೇ ಮತ್ತೊಂದು ಹೊಸ ಹಗರಣ ಸರ್ಕಾರಕ್ಕೆ ಕಂಟಕವಾಗಲು ಹವಣಿಸುತ್ತಿದೆ.

ಇದನ್ನೂ ಓದಿ:16 ಬಾರಿ ಮೂಳೆ ಮುರಿತ, 8 ಸಲ ಸರ್ಜರಿ.. ಆದರೂ ಛಲ ಬಿಡಲಿಲ್ಲ; IAS ಅಧಿಕಾರಿಯಾದ ಯಶೋಗಾಥೆ..!

publive-image

ಖರ್ಗೆ ಕುಟುಂಬ, ಎಂ.ಬಿ. ಪಾಟೀಲ್ ಸರದಿ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಎಂ.ಬಿ‌.ಪಾಟೀಲ್ ವಿರುದ್ಧ ಅಕ್ರಮ ಆಸ್ತಿ ಪರಭಾರೆ ಪ್ರಕರಣ ರಾಜಭವನ ಕದ ತಟ್ಟಿದೆ. ಈಗಾಗಲೇ ಇದೇ ವಿಚಾರಕ್ಕೆ ಖಾಸಗಿ ದೂರು ಕೂಡ ದಾಖಲಾಗಿದೆ. ಆದ್ರೀಗ ಇದೇ ದೂರಿನ ಅನ್ವಯ ಬಿಜೆಪಿ ನಾಯಕ ಕಾಂಗ್ರೆಸ್ ಮೂಲ ಬುಡವನ್ನೇ ಹಿಡಿದು ಅಲ್ಲಾಡಿಸಲು ಸಜ್ಜಾಗಿದ್ದಾರೆ. ರಾಜ್ಯಪಾಲ ಥಾವರ್‌ಚಂದ್ ಗೆಹಲೋಟ್‌ ಅವರನ್ನು ಭೇಟಿಯಾಗಿ ಅಕ್ರಮದ ತನಿಖೆಗೆ ಒತ್ತಾಯಿಸಿದ್ದಾರೆ. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ. ಮುಡಾ ಅಕ್ರಮದ ಮಾದರಿಯಂತೆಯೇ ಇದು ಕೂಡಾ ಬಹು ದೊಡ್ಡ ಹಗರಣ ಅಂತ ತಿಳಿದುಬಂದಿದೆ.

ಏನಿದು ಕೆಐಎಡಿಬಿ ಹಗರಣ?

  • ಬೆಂಗಳೂರಿನ ಏರೋಸ್ಪೇಸ್ ಬಳಿ ಕೆಐಎಡಿಬಿ 5 ಎಕರೆ ಜಾಗ
  • ಈ ಜಾಗನ ಎಸ್‌ಸಿ, ಎಸ್‌ಟಿಗಳಿಗೆ ನೀಡಬೇಕೆಂಬ ನಿಬಂಧನೆ
  • ಕೆಳ ಹಂತದ ವ್ಯಕ್ತಿಗಳಿಗೆ ರಾಜ್ಯ ಸರ್ಕಾರ ಹಂಚಿಕೆ ಮಾಡಬೇಕಿತ್ತು
  • ಅದೇ 5 ಎಕರೆ ಜಾಗ ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ನೀಡಿಕೆ
  • ಸಿದ್ಧಾರ್ಥ ವಿಹಾರ್ ಟ್ರಸ್ಟ್‌ಗೆ ಕೊಟ್ಟಿರುವ ಸಚಿವ ಎಂ.ಬಿ.ಪಾಟೀಲ್‌
  • ಸಿಎಂ ಪತ್ನಿಗೆ ಹಂಚಿಕೆ ಆದಂತೆ ಖರ್ಗೆ ಕುಟುಂಬಕ್ಕೂ ಜಾಗ ಹಂಚಿಕೆ?

ಪ್ರಾಸಿಕ್ಯೂಷನ್‌ಗೆ ನೀಡುವಂತೆ ಲೆಹರ್ ಸಿಂಗ್ ಒತ್ತಾಯ
ಚಿನ್ನದಂತ ಬೆಲೆ ಬಾಳುವ ಜಾಗವನ್ನ ಶೋಷಿತರಿಗೆ, ಬಡವರಿಗೆ ನೀಡುವ ಬದಲು ಅದೇ ಸಮುದಾಯದ ಉಳ್ಳವರಿಗೆ ನೀಡಲಾಗಿದೆ ಅನ್ನೋದು ಆರೋಪ. ಹೀಗಾಗಿ ಲೆಹರ್‌ಸಿಂಗ್ ಸಿರೋಯಾ-ಗವರ್ನರ್‌ನ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಭೂಮಿ ಹಂಚಿಕೆಯಾಗಿದ್ದೇಗೆ? ಯಾವ ಮಾನದಂಡದಲ್ಲಿ 5 ಎಕರೆ ನೀಡಲಾಗಿದೆ. ಈ ಬಗ್ಗೆ ನಿಷ್ಪಕ್ಷಪಾತವಾದ ತನಿಖೆಯಾಗಬೇಕು ಅಂತ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್‌ ಬಳಿ ಚರ್ಚೆ ನಡೆಸಿದ್ದಾರೆ. ಅಲ್ಲದೇ ಕೆಐಎಡಿಬಿ ಹಗರಣಕ್ಕೂ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ಅಂತ ಬಿಜೆಪಿ ರಾಜ್ಯಸಭಾ ಸದಸ್ಯ ಒತ್ತಾಯಿಸಿದ್ದಾರೆ.

ಮುಡಾ ಅಕ್ರಮದ ಕುಣಿಕೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇದ್ರಿಂದ ಪಾರಾಗಲು ಸರ್ಕಾರ ಹವಣಿಸುತ್ತಿರುವ. ಈ ಮಧ್ಯೆ ಕೆಐಎಡಿಬಿ ನಿಗಮದ ಎಸ್‌ಸಿ, ಎಸ್‌ಟಿ ಭೂ ಹಗರಣದ ಚೆಂಡು ರಾಜ್ಯಪಾಲರ ಅಂಗಳದಲ್ಲಿದೆ. ಈಗ ಈ ಪ್ರಕರಣವನ್ನು ರಾಜ್ಯಪಾಲ ಥಾವರ್‌ಚಂದ್ ಗೆಹಲೋಟ್‌ ಗಂಭೀರವಾಗಿ ಪರಿಗಣಿಸಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡ್ತಾರಾ? ಅನ್ನೋದೆ ಮುಂದಿರೋ ಕೌತುಕ.

ಇದನ್ನೂ ಓದಿ:ಮಗಳು IAS ಆಗುವ ಕನಸು ಕಂಡಿದ್ದ ಅಪ್ಪ-ಅಮ್ಮ; ಕನಸು ನನಸು ಆದಾಗ ಸಂಭ್ರಮಿಸಲು ಅವರೇ ಇರಲಿಲ್ಲ

Advertisment