50 MLAಗಳಿಗೆ ತಲಾ ₹50 ಕೋಟಿ ಆಫರ್.. ರಾಜಕೀಯದಲ್ಲಿ ಸಂಚಲನ ಮೂಡಿಸಿದ ಸಿದ್ದರಾಮಯ್ಯ ಹೇಳಿಕೆ

author-image
Bheemappa
Updated On
ಮುಡಾಗೆ ಮೇಜರ್​ ಸರ್ಜರಿ ಮಾಡಲು ನಿರ್ಧಾರ; ಇನ್ಮುಂದೆ BDA ಮಾದರಿಯಲ್ಲೇ ಮೈಸೂರು ಅಭಿವೃದ್ಧಿ ಪ್ರಾಧಿಕಾರ..!
Advertisment
  • ಹೆಚ್​​.ಡಿ ದೇವೇಗೌಡರು ಕಾಂಗ್ರೆಸ್​ ಸರ್ಕಾರದ ಕುರಿತು ಹೇಳಿದ್ದು ಇಲ್ಲಿದೆ
  • ಸರ್ಕಾರದ ಪತನದ ಬಗ್ಗೆ ವಿ ಸೋಮಣ್ಣ ಭವಿಷ್ಯವಾಣಿ ನಿಜವಾಗುತ್ತಾ?
  • ರಾಜಕೀಯ ವಲಯದಲ್ಲಿ ನಡೆಯುತ್ತಿದೆಯಾ ದೊಡ್ಡಮಟ್ಟದ ವ್ಯವಹಾರ?

ಆಡಿಸಿ ನೋಡು ಬೀಳಿಸಿ ನೋಡು ಅಂತ ಸಿದ್ದರಾಮಯ್ಯ ಸವಾಲು ಹಾಕುತ್ತಿದ್ದರು. ಆದ್ರೆ, ಈಗ ಆಡಿಸಿ ಬೀಳಿಸುವ ಆಟವೊಂದು ಸದ್ದಿಲ್ಲದೇ ನಡೆಯುತ್ತಿದೆ. ಮೊನ್ನೆ ಸಂಸದ ಸೋಮಣ್ಣ ಕವಡೆ ಹಾಕಿ ಹೇಳಿದ ಭವಿಷ್ಯ ನಿಜವಾಗುತ್ತೋ ಏನೋ? ನಿನ್ನೆ ಸಿಎಂ ಸಹ 50 ಕೋಟಿ ರೂಪಾಯಿ ಬಾಂಬ್​ ಹಾಕಿ ಬೆಚ್ಚಿ ಬೀಳಿಸಿದ್ದಾರೆ.

ಒಬ್ಬೊಬ್ಬ ಶಾಸಕನಿಗೆ 50 ಕೋಟಿ ರೂಪಾಯಿ ಆಫರ್​. ಈ ಕೋಟಿಗಳ ಲೆಕ್ಕವೇ ರಾಜ್ಯ ರಾಜಕೀಯದಲ್ಲಿ ದಂಗು ಬಡಿಸುತ್ತಿದೆ. ಅಂದ್ಹಾಗೆ ಸಿದ್ದರಾಮಯ್ಯ ಸರ್ಕಾರ ಕೆಡವಲು ಬಿಗ್​​ ಆಪರೇಷನ್ ​ ನಡೆಯುತ್ತಿದೆ. ಸರ್ಕಾರದ ಪತನದ ಬಗ್ಗೆ ಸ್ವತಃ ಸಿಎಂ ಅಪ್​ಡೇಟ್​ ಬಾಂಬ್​​ ಸಿಡಿಸಿದ್ದಾರೆ.

ಇದನ್ನೂ ಓದಿ: ಒಬ್ಬರಲ್ಲ, ಇಬ್ಬರಲ್ಲ 500 ಸ್ವಿಗ್ಗಿ ಡೆಲಿವರಿ ಬಾಯ್ಸ್​​ ಈಗ ಕೋಟ್ಯಾಧಿಪತಿಗಳು.. ಅದು ಹೇಗೆ?

publive-image

ಐವತ್ತು ಶಾಸಕರಿಗೆ 50 ಕೋಟಿ ಆಫರ್ ನೀಡಿದ್ದಾರೆ!

ಸಿದ್ದರಾಮಯ್ಯ ಸರ್ಕಾರ 5 ವರ್ಷ ಅಧಿಕಾರ ಪೂರ್ಣ ಮಾಡಲ್ವಾ?. ರಾಜ್ಯದಲ್ಲಿ ಆಪರೇಷನ್​ ಕಮಲ ಸದ್ದಿಲ್ಲದೇ ನಡೀತಿದ್ಯಾ? ಬಿಜೆಪಿ ಹಿಂಬಾಗಿಲ ರಾಜಕಾರಣಕ್ಕೆ ಪ್ಲಾನ್​ ರೂಪಿಸ್ತಿದ್ಯಾ? ಈ ಪ್ರಶ್ನೆಗಳು ಹುಟ್ಟಲು ಕಾರಣ ಮೈಸೂರಲ್ಲಿ ಸಿದ್ದರಾಮಯ್ಯ ಆಡಿದ ಅದೊಂದು ಮಾತು. 50 ಶಾಸಕರ ಜೊತೆ ಸಂಪರ್ಕ ಕ್ರಾಂತಿ ನಡೆದಿದ್ದು, ಒಬ್ಬೊಬ್ಬ ಶಾಸಕನಿಗೆ 50 ಕೋಟಿ ರೂಪಾಯಿ ಆಫರ್​​ ಮಾಡಲಾಗಿದೆಯಂತೆ.

‘ಒಬ್ಬೊಬ್ಬ ಶಾಸಕನಿಗೆ ₹50 ಕೋಟಿ ಆಫರ್​’

ಈ ಸಲ ಹೇಗದರೂ ಮಾಡಿ ಸಿದ್ದರಾಮಯ್ಯ ಸರ್ಕಾರ ಕಿತ್ತು ಹಾಕಬೇಕೆಂದು ಒಬ್ಬೊಬ್ಬ ಎಂಎಲ್​ಎಗೆ 50 ಕೋಟಿ ರೂಪಾಯಿ ಆಫರ್ ಮಾಡಿದ್ದಾರೆ. 50 ಜನ ಎಂಎಲ್​​ಎಗಳಿಗೆ 50 ಕೋಟಿ ರೂಪಾಯಿ ಕೊಡುತ್ತೇವೆ ಎಂದಿದ್ದಾರೆ. ಇದಕ್ಕೆ ನಮ್ಮ ಎಂಎಲ್​ಎಗಳು ಯಾರೂ ಕೂಡ ಒಪ್ಪಲಿಲ್ಲ. ಹೆಂಗದರೂ ಮಾಡಿ ಸಿಎಂ ಸಿದ್ದರಾಮಯ್ಯಗೆ ಮಸಿ ಬಳಿದು, ಅಧಿಕಾರದಿಂದ ತೆಗೆದು ಹಾಕಲು ಸಜ್ಜಾಗಿದ್ದಾರೆ.

ಸಿದ್ದರಾಮಯ್ಯ, ಮುಖ್ಯಮಂತ್ರಿ

ಸಚಿವ ಸೋಮಣ್ಣ ಹೇಳಿದ್ದ ಭವಿಷ್ಯ ನಿಜವಾಗುತ್ತಾ?

ಅಂದ್ಹಾಗೆ ಮೊನ್ನೆಯಷ್ಟೇ ಮಿನಿ ಸಮರದ ಕಣದಲ್ಲಿ ಕೇಂದ್ರ ಸಚಿವ ಸೋಮಣ್ಣ, ಸರ್ಕಾರ ಪತನದ ಭವಿಷ್ಯ ನುಡಿದಿದ್ದರು. ಇದಕ್ಕೆ ಹೆಚ್​​.ಡಿ ದೇವೇಗೌಡ್ರು ಸಹ ಧ್ವನಿಗೂಡಿಸಿದರು. ಈ ಬೆನ್ನಲ್ಲೆ ಸಿಎಂ ನೀಡಿದ ಹೇಳಿಕೆ ಸಂಚಲನ ಸೃಷ್ಟಿಸಿದೆ. ಅಂದ್ಹಾಗೆ, ಸೋಮಣ್ಣ ಮತ್ತು ಗೌಡ್ರು ಮೊನ್ನೆ ಹೇಳಿದ್ದೇನು?.

‘ಡಿಸೆಂಬರ್ ವೇಳೆ ಸರ್ಕಾರ ಇರಲ್ಲ’

ಡಿಸೆಂಬರ್​ ಒಳಗೆ ನಮ್ಮಪ್ಪನಾಣೆ ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಇರಲ್ಲ. ನಾವು ಯಾರೂ ಬೇಕಿಲ್ಲ. ಕಾಂಗ್ರೆಸ್​​ನವರೇ 23ನೇ ತಾರೀಖು ಸಂಜೆ ಯಾರು ಯಾರು ಯಾವ್ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ. ಕೇಂದ್ರದ ಹೈಕಮಾಂಡ್ ಎಲ್ಲದಕ್ಕೂ ನೀವೇ ಹೊಣೆ ಅಂತಾರೆ.

ವಿ.ಸೋಮಣ್ಣ, ಕೇಂದ್ರ ಸಚಿವ

ಇದನ್ನೂ ಓದಿ:ಯೋಗೇಶ್ವರ್ ವಿರುದ್ಧ ಟಿಕೆಟ್​ ಪ್ಲಸ್​ ₹30 ಕೋಟಿ ಕೇಳಿದ ಆರೋಪ- ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ..!

publive-image

‘ಸೋಮಣ್ಣ ಮಾತು ನಿಜವಾಗಲಿದೆ’

ಜನವರಿ ಒಳಗೆ ಈ ಸರ್ಕಾರ ಹೋಗುತ್ತದೆ. ನನಗೆ ಜೋತಿಷ್ಯ ಕೇಳುವ ಅಭ್ಯಾಸ ಇದೆ. ಆದರೆ ಸೋಮಣ್ಣಗೂ ಅಭ್ಯಾಸ ಇದೆಯಾ?. ಇದು ನನಗೆ ಗೊತ್ತಿಲ್ಲ. 3 ತಿಂಗಳೊಳಗೆ ಹೊರಟು ಹೋಗುತ್ತೆ.

ಹೆಚ್​​.ಡಿ ದೇವೇಗೌಡ, ಮಾಜಿ ಪ್ರಧಾನಿ

ಕರ್ನಾಟಕ, ನಾನು ಇಬ್ಬರು ಟಾರ್ಗೆಟ್ ಆಗ್ತಿದ್ದೇವೆ ಅಂತ ಸಿಎಂ ಹೇಳ್ತಿದ್ದಾರೆ. ಹೀಗಾಗಿ ಸೋಮಣ್ಣ ಭವಿಷ್ಯವಾಣಿ ನಿಜವಾಗುತ್ತಾ? ಡಿಸೆಂಬರ್​​ ಕ್ರಾಂತಿ ಮೊಳಗುತ್ತಾ? ಕಾಲವೇ ಉತ್ತರಿಸಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment