newsfirstkannada.com

ಕಾಂಗ್ರೆಸ್​​​ ರಕ್ತದ ಕಣ ಕಣದಲ್ಲೂ ಜಿನ್ನಾ, ಟಿಪ್ಪು ಸಂಸ್ಕೃತಿ ಇದೆ.. ವಿಪಕ್ಷ ನಾಯಕ ಅಶೋಕ್​ ಆಕ್ರೋಶ

Share :

Published February 7, 2024 at 11:43am

  ಕಾಂಗ್ರೆಸ್​​ನವರ ಮೇನ್ ಟಾರ್ಗೆಟ್​ ಪ್ರಧಾನಿ ನರೇಂದ್ರ ಮೋದಿ

  ಸುರೇಶ್ ಅವರ ದೇಶ ವಿಭಜನೆ ಹೇಳಿಕೆ ಬೆಂಬಲಿಸಿ ಹೋರಾಟ

  ದೇಶ ವಿಭಜನೆ ಮಾತನಾಡುವ ಕಾಂಗ್ರೆಸ್​​ಗೆ ನಾಚಿಕೆಯಾಗಬೇಕು

ಬೆಂಗಳೂರು: ಸಂಸದ ಡಿಕೆ ಸುರೇಶ್ ಅವರ ದೇಶ ವಿಭಜನೆ ಹೇಳಿಕೆ ಬೆಂಬಲಿಸಿ ಕಾಂಗ್ರೆಸ್​​ನವರು ದೆಹಲಿಗೆ ಹೋಗಿದ್ದಾರೆ. ಕಾಂಗ್ರೆಸ್​ನವರ ಡಿಎನ್​ಎನಲ್ಲಿ, ರಕ್ತದ ಕಣ ಕಣದಲ್ಲೂ ಜಿನ್ನಾ, ಟಿಪ್ಪು ಸಂಸ್ಕೃತಿ ಅಂಟಿಕೊಂಡಿದೆ. ದೇಶ ವಿಭಜನೆ ಮಾತನಾಡುವ ಕಾಂಗ್ರೆಸ್​​ನವರಿಗೆ ನಾಚಿಕೆಯಾಗಬೇಕು ಎಂದು ವಿರೋಧ ಪಕ್ಷದ ನಾಯಕ ಆರ್. ಆಶೋಕ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಮಾಧ್ಯಮದವರ ಜೊತೆ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಭಗತ್ ಸಿಂಗ್, ಕಿತ್ತೂರು ರಾಣಿ ಚನ್ನಮ್ಮ, ಸುಭಾಷ್ ಚಂದ್ರ ಬೋಸ್​ನಂತಹ ಮಹಾನ್ ವೀರರು ಪ್ರಾಣ ಕೊಟ್ಟು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಕಾಂಗ್ರೆಸ್ಸಿಗರು ದೇಶದ ಒಗ್ಗಟ್ಟಿಗೆ ಹೋರಾಟ ಮಾಡಿದ ನಾಡಿನ ಲಕ್ಷಂತಾರ ಜನರ ಕಣ್ಣಲ್ಲಿ ನೀರು ತರಿಸುತ್ತಿದ್ದಾರೆ. ಈ ರೀತಿಯ ಹೇಳಿಕೆಯನ್ನು ಇತಿಹಾಸಲ್ಲಿ ಯಾರೂ ಕೂಡ ಕೊಟ್ಟಿಲ್ಲ. ಈ ಹಿಂದೆ ಕಾಂಗ್ರೆಸ್​​ನವರು ಈ ರೀತಿ ಜಿನ್ನಾ ಅವರ ನೇತೃತ್ವದಲ್ಲಿ ಮಾಡಿದ್ದರು. ಮೊದಲು ಕಾಂಗ್ರೆಸ್​​ನವರು ಕಾಶ್ಮೀರನೇ ನಮ್ಮದಲ್ಲ ಅಂತಿದ್ದರು. ಆದ್ರೆ ಮೋದಿ ಬಂದ ಮೇಲೆ ಕಾಶ್ಮೀರ ನಮ್ಮದು ಆಯಿತು. ಬಜೆಟ್​​ನಲ್ಲಿ ಅನ್ಯಾಯ ಆಗಿದೆ ಎಂದರೆ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅಧಿಕಾರದಲ್ಲಿ ಅಭಿವೃದ್ಧಿ ಏನಾಗಿತ್ತು ಎಂದು ಆರ್​ ಅಶೋಕ್ ಅವರು ಪ್ರಶ್ನೆ ಮಾಡಿದ್ದಾರೆ.

ಕಾಂಗ್ರೆಸ್​ನವರಿಗೆ ಮೇನ್ ಟಾರ್ಗೆಟ್​ ನರೇಂದ್ರ ಮೋದಿ. ಕಳೆದ 10 ವರ್ಷದಲ್ಲಿ ಮೋದಿ ಕೊಟ್ಟಂತಹ ಲೆಕ್ಕದ ಬಗ್ಗೆ ಮಾಹಿತಿ ಕೊಡಿ. ನಿಮ್ಮ ಅಧಿಕಾರದಲ್ಲಿ, ನಮ್ಮ ಅಧಿಕಾರದಲ್ಲಿ ಅಭಿವೃದ್ಧಿಯ ವೇಗ ಇಲ್ಲಿಯೇ ಗೊತ್ತಾಗುತ್ತದೆ. ಹಾಗೆಯೇ ಮನಮೋಹನ್ ಸಿಂಗ್ ಕಾಲದಲ್ಲಿ ಮಾಡಿದ ಕೆಲಸ ಬಗ್ಗೆಯು ಲೆಕ್ಕ ಕೊಡಿ ಎಂದು ವಿಪಕ್ಷ ನಾಯಕ ಆಕ್ರೋಶ ವ್ಯಕ್ತಪಡಿಸಿದರು.

​ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಗ್ರೆಸ್​​​ ರಕ್ತದ ಕಣ ಕಣದಲ್ಲೂ ಜಿನ್ನಾ, ಟಿಪ್ಪು ಸಂಸ್ಕೃತಿ ಇದೆ.. ವಿಪಕ್ಷ ನಾಯಕ ಅಶೋಕ್​ ಆಕ್ರೋಶ

https://newsfirstlive.com/wp-content/uploads/2024/02/R_ASHOK-1.jpg

Load More