/newsfirstlive-kannada/media/post_attachments/wp-content/uploads/2024/12/BSY_YATNAL.jpg)
ಬೆಂಗಳೂರು: ಅಟ್ಟ ಮೇಲೆ ಒಲೆ ಉರಿಯಿತು. ಕೆಟ್ಟ ಮೇಲೆ ಬುದ್ಧಿ ಬಂತು. ಈ ಗಾದೆ ಪ್ರಸಕ್ತ ಬಿಜೆಪಿಗೆ ಪರ್ಫೆಕ್ಟ್ ಆಗಿ ಸೂಟ್ ಆಗುತ್ತೆ. ಸಹಿಸ್ಕೊಂಡು ಎಷ್ಟು ದಿನ ಅಂತಾ ತಳ್ಳಕ್ಕೆ ಆಗುತ್ತೆ. ಎಲ್ಲದಕ್ಕೂ ಒಂದು ಅಂತ್ಯ ಇದ್ದೇ ಇರುತ್ತೆ. ಯಶವಂತಪುರ ಶಾಸಕ ಸೋಮಶೇಖರ್, ಮತ್ತೆ ಯಲ್ಲಾಪುರದ ಎಂಎಲ್ಎ ಶಿವರಾಮ್ ಹೆಬ್ಬಾರ್. ಇವರು ಆಡಿದ್ದೆ ಆಟ ಆಗಿದ್ದು, ಬಿಜೆಪಿ ಕೋರ್ ಕಮಿಟಿಯಲ್ಲಿ ಒಂದು ನಿರ್ಧಾರಕ್ಕೆ ಬಂದಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆಗೆ ಬ್ರೇಕ್ ಹಾಕಲು ಬಿಎಸ್ವೈ, ವಿಜಯೇಂದ್ರ ಪ್ಲಾನ್!
ಪಕ್ಷದೊಳಗಿದ್ದು ಉಪ್ಪು-ಖಾರ ಸವಿದು ಮಸಲತ್ತು ಮಾಡ್ತಿದ್ದವರಿಗೆ ಜಾಪಾಳ ಮಾತ್ರೆ ಕೊಡುವ ಸಂದರ್ಭ ಬಂದಂತೆ ಕಾಣಿಸ್ತಿದೆ. ಸೋಮಶೇಖರ್ ಮತ್ತು ಹೆಬ್ಬಾರ್ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗಿದೆ. ಈ ಮೂಲಕ ತಮ್ಮ ವಿರುದ್ಧ ಸೊಲ್ಲೆತ್ತುವ ಭಿನ್ನರ ತಂಡಕ್ಕೂ ಇದೇ ಪರಿಸ್ಥಿತಿ ಬರಲಿದೆ ಅನ್ನೋ ಸಂದೇಶ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ರವಾನೆ ಮಾಡಿದ್ದಾರೆ.
ಶಿಸ್ತು ಕ್ರಮಕ್ಕೆ ಬಿವೈವಿ ಶಿಫಾರಸ್ಸು!
ಇನ್ನು, ಪಕ್ಷ ವಿರೋಧಿ ಕೆಲಸ ಮಾಡುವವರನ್ನು ತಡೆಯಲು ಈ ರಣತಂತ್ರ ಸಿದ್ಧವಾಗಿದೆ. ಎಸ್.ಟಿ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ವಿರುದ್ಧ ಕ್ರಮ ಆಗೋದು ನಿಶ್ಚಿತವಾಗಿದೆ. ಈ ಇಬ್ಬರ ಭುಜದ ಮೇಲೆ ಗನ್ ಇಟ್ಟು ಶೂಟ್ ಮಾಡಲು ಸಿದ್ಧತೆ ಆಗಿದ್ದು, ಪಕ್ಷ ವಿರೋಧಿ ಮಾಡ್ತಿರುವ ಭಿನ್ನರ ವಿರುದ್ಧ ಕ್ರಮ ಕೈಗೊಳ್ಳಲು ಸಿದ್ಧ ಅನ್ನೋ ಎಚ್ಚರಿಕೆಯನ್ನ ಯತ್ನಾಳ್ ಬಣಕ್ಕೂ ಪರೋಕ್ಷವಾಗಿ ದಾಟಿಸಿದ್ದಾರೆ.
ಬಿಜೆಪಿ ಪಕ್ಷದ ವೇದಿಕೆಯಿಂದ ಎಸ್ಟಿಎಸ್ & ಹೆಬ್ಬಾರ್ ದೂರವೇ ಇದ್ದಾರೆ. ಅವರ ಮೇಲೆ ಕ್ರಮ ಕೈಗೊಂಡ್ರು ಅಷ್ಟೇ ಬಿಟ್ರು ಅಷ್ಟೇ. ಹಾಗಂತ ಸುಮ್ನೆ ಇರೋದಕ್ಕಂತು ಆಗಲ್ಲ. ಗಾಯ ಚಿಕ್ಕದಿದ್ದಾಗೇ ಬ್ಯಾಂಡೇಜ್ ಕಟ್ಟೋದು, ಔಷಧಿ ಹಾಕೋದು ವಾಸಿ ಅಲ್ವಾ? ಇದನ್ನ ಬಿಜೆಪಿ ಯಾವತ್ತೋ ಮಾಡಬೇಕಿತ್ತು. ಯತ್ನಾಳ್ ಆ್ಯಂಡ್ ಟೀಂನ ಕಿರಿಕ್ ಕಾರಣಕ್ಕೆ ಈಗ ಜ್ಞಾನೋದಯ ಆದಂತೆ ಕಾಣಿಸ್ತಿದೆ.
ಇದನ್ನೂ ಓದಿ:ಕ್ಯಾಪ್ಸನ್ಸಿ ನಿರೀಕ್ಷೆಯಲ್ಲಿದ್ದ ಪಂತ್ಗೆ ಬಿಗ್ ಶಾಕ್ ಕೊಟ್ಟ ಲಕ್ನೋ; 27 ಕೋಟಿ ಸುರಿದಿದ್ದೇಕೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ