ಕಾಂಗ್ರೆಸ್‌ನಂತೆಯೇ ಬಿಜೆಪಿಯಿಂದಲೂ ‘ಗ್ಯಾರಂಟಿ’ ಮಾದರಿ ಯೋಜನೆಗಳ ಘೋಷಣೆ; ಏನವು?

author-image
Gopal Kulkarni
Updated On
ಬೈಎಲೆಕ್ಷನ್‌ನಲ್ಲೂ ಮೋದಿಗೆ ಮುಖಭಂಗ.. 7 ರಾಜ್ಯಗಳಲ್ಲಿ ಇಂಡಿಯಾ ಕೂಟಕ್ಕೆ ಭರ್ಜರಿ ಜಯ; ಮುಂದೇನು?
Advertisment
  • ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಿದ್ದ ಬಿಜೆಪಿಯಿಂದಲೇ ಗ್ಯಾರಂಟಿ
  • ದೆಹಲಿ ಚುನಾವಣೆ ಗೆಲ್ಲಲು ಭರಪೂರ ಉಚಿತ ಗ್ಯಾರಂಟಿಗಳ ಘೋಷಣೆ
  • ಮಹಿಳಾ ಮತದಾರರನ್ನು ಗಮನದಲ್ಲಿಟ್ಟುಕೊಂಡ ಬಿಜೆಪಿಯಿಂದ ಪ್ರಣಾಳಿಕೆ

ಪ್ರಧಾನಿ ನರೇಂದ್ರ ಮೋದಿ ಪ್ರತಿ ಚುನಾವಣೆಯಲ್ಲಿ ಪ್ರಚಾರದಲ್ಲಿಯೂ ಕೂಡ ಉಚಿತ ಕೊಡುಗೆಗಳ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದರು. ಫ್ರೀಬೀಸ್​ಗಳು ದೇಶದ ಆರ್ಥಿಕತೆಗೆ ದೊಡ್ಡ ಹೊಡೆತ ಕೊಡುತ್ತದೆ ಎಂದು ಹೇಳುತ್ತಿದ್ದರು. ಈ ಹಿಂದೆ ನಡೆದ ಯಾವ ಚುನಾವಣೆಯಲ್ಲಿಯೂ ಕೂಡ ಬಿಜೆಪಿ ಉಚಿತ ಕೊಡುಗೆಗಳ ಗೊಡವೆಗೆ ಹೋಗುತ್ತಿರಲಿಲ್ಲ. ಆದ್ರೆ ಈಗ ಚುನಾವಣೆ ಗೆಲ್ಲಲು ಗ್ಯಾರಂಟಿ ಕೊಡುಗೆಗಳು ಅನಿವಾರ್ಯ ಎಂಬ ಮಟ್ಟಿಗೆ ಬಿಜೆಪಿಯೂ ಕೂಡ ಬಂದು ಮುಟ್ಟಿರುವ ಸೂಚನೆಗಳು ಕಾಣುತ್ತಿವೆ. ಮಹಾರಾಷ್ಟ್ರದಲ್ಲಿ ಲಾಡ್ಲಿ ಬೆಹನಾ, ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಲಾಡ್ಲಿ ಬೆಹನಾ ಈ ಯೋಜನೆಗಳು ಬಿಜೆಪಿಯ ಕೈಹಿಡಿದವು. ಮಹಿಳಾ ಮತದಾರರನ್ನು ಸೆಳೆಯಲು ಫ್ರೀ ಬೀಸ್​ಗಳನ್ನು ನೀಡುವುದು ಅನಿವಾರ್ಯ ಎಂಬ ನಿಲುವಿಗೆ ಈಗ ಬಿಜೆಪಿ ಬಂದಿದೆ.

publive-image

ಅದರ ಮುಂದುವರಿದ ಭಾಗವಾಗಿ ದೆಹಲಿಯ ಬಿಜೆಪಿಯ ಪ್ರಣಾಳಿಕೆಯು ಸಿದ್ಧಗೊಂಡಿದೆ. ಇಂದು ದೆಹಲಿ ಚುನಾವಣೆಯ ಪ್ರಣಾಳಿಕೆಯನ್ನು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬಿಡುಗಡೆ ಮಾಡಿದ್ದಾರೆ. ಬಿಜೆಪಿ ಸಂಕಲ್ಪ ಪತ್ರದಲ್ಲಿ ಮಹಿಳಾ ಮತಗಳನ್ನು ಸೆಳೆಯಲು ಹಲವು ಉಚಿತ ಘೋಷಣೆಗಳನ್ನು ಮಾಡಿದ್ದಾರೆ. ಗರ್ಭಿಣಿಯರಿಗೆ 21 ಸಾವಿರ ರೂಪಾಯಿ ಹಾಗೂ 6 ನ್ಯೂಟ್ರಿಷಿಯನ್ ಕಿಟ್​ ಕೊಡುವುದಾಗಿ ಮತ್ತು ಮೊದಲ ಮಗು ಹೆರಿಗೆ 5 ಸಾವಿರ ರೂಪಾಯಿ ಮತ್ತು ಎರಡನೇ ಮಗು ಹೆರಿಗೆಗೆ 6 ಸಾವಿರ ರೂಪಾಯಿ ಸಹಾಯಧನ ನೀಡಿವುದಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ:ಡಿ.ಕೆ ಶಿವಕುಮಾರ್‌ಗೆ ಬಿಗ್ ಶಾಕ್‌.. ಸತೀಶ್ ಜಾರಕಿಹೊಳಿ ಸಿಡಿದೇಳಲು 3 ಪ್ರಮುಖ ಕಾರಣ ಇಲ್ಲಿದೆ!

ಅದು ಮಾತ್ರವಲ್ಲ ಮಹಿಳಾ ಸಮೃದ್ಧಿ ಯೋಜನೆಯಲ್ಲಿ ಸುಮಾರು 2500 ರೂಪಾಯಿ ಪ್ರತಿ ತಿಂಗಳು ನೀಡುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಮತ್ತು ಗೃಹಪಯೋಗಿ ಸಿಲಿಂಡರ್​ಗಳ ಮೇಲೆ 500 ರೂಪಾಯಿ ಸಬ್ಸಿಡಿ ನೀಡುವುದಾಗಿಯೂ ಕೂಡ ಬಿಜೆಪಿ ಹೇಳಿಕೊಂಡಿದೆ. ಮತ್ತು ದೀಪಾವಳಿ ಹಾಗೂ ಹೋಳಿ ಸಮಯದಲ್ಲಿ ಎರಡು ಸಿಲಿಂಡರ್ ಉಚಿತವಾಗಿ ನೀಡುವುದಾಗಿ ಬಿಜೆಪಿ ಹೇಳಿಕೊಂಡಿದೆ.

publive-image

ಇದನ್ನೂ ಓದಿ:ಲಕ್ಷ್ಮೀ ಹೆಬ್ಬಾಳ್ಕರ್ ‘ಲಕ್ಕಿ’ ಕಾರು ಅಪಘಾತ; ಅಸಲಿಗೆ ಆಗಿದ್ದೇನು? ಚನ್ನರಾಜ್ ಹಟ್ಟಿಹೊಳಿ ಏನಂದ್ರು?

ಇನ್ನು ಬಿಜೆಪಿ ಹಿರಿಯ ನಾಗರಿಕರಿಗೂ ಕೂಡ ಹಲವು ಸೌಲಭ್ಯಗಳನ್ನು ನೀಡಿದೆ. 60 ರಿಂದ 70 ವಯಸ್ಸಿನೊಳಗೆ ಇರುವರಿಗೆ 2000 ರೂಪಾಯಿಂದ 2500 ರೂಪಾಯಿ ವೃದ್ಧಾಪ್ಯ ವೇತನ ನೀಡಲಾಗುವುದು 70ಕ್ಕೂ ಮೀರಿದ ಹಿರಿಯ ನಾಗರಿಕರಿಗೆ 3 ಸಾವಿರ ರೂಪಾಯಿ. ವಿಧವೆ ಹಾಗೂ ದಿವ್ಯಾಂಗದವರಿಗೆ ಪ್ರತಿ ತಿಂಗಳು 3 ಸಾವಿರ ರೂಪಾಯಿ ನೀಡುವುದಾಗಿ ಘೋಷಿಸಿದೆ.

ಇನ್ನು ಬಿಜೆಪಿಯ ಈ ಪ್ರಣಾಳಿಕೆಯನ್ನು ಕಾಂಗ್ರೆಸ್ ಹಾಗೂ ಆಪ್ ತೀವ್ರವಾಗಿ ಟೀಕಿಸಿವೆ. ನಮ್ಮದೇ ಯೋಜನೆಗಳನ್ನು ಕಾಪಿ ಪೇಸ್ಟ್ ಮಾಡಿಕೊಂಡು ಬಿಜೆಪಿ ಚುನಾವಣೆ ಗೆಲ್ಲಲ ಮುಂದಾಗಿದೆ ಎಂದು ಲೇವಡಿ ಮಾಡಿದೆ. ಈ ಹಿಂದೆ ಕಾಂಗ್ರೆಸ್​ನ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ಟೀಕೆ ಮಾಡಿದ್ದನ್ನು ಕಾಂಗ್ರೆಸ್ ಈಗ ನೆನಪಿಸುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment