/newsfirstlive-kannada/media/post_attachments/wp-content/uploads/2024/04/MODI-NADDA-2.jpg)
ಲೋಕಸಭೆ ಚುನಾವಣೆಗೆ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ‘ಸಂಕಲ್ಪ ಪತ್ರ’ ಹೆಸರಲ್ಲಿ ದೇಶದ ಜನರಿಗೆ ಪ್ರಧಾನಿ ಮೋದಿ ಆಶ್ವಾಸನೆಗಳನ್ನು ನೀಡಿದರು. ಪ್ರಧಾನಿ ನರೇಂದ್ರ ಮೋದಿಯಿಂದ ಮೊದಲ ಸಂಕಲ್ಪ ಪತ್ರವನ್ನು ದೆಹಲಿ ನಿವಾಸಿಗಳಿಗೆ ವಿತರಣೆ ಮಾಡಿದರು.
ದೆಹಲಿಯಲ್ಲಿರುವ ಬಿಜೆಪಿಯ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ನಿರ್ಮಲಾ ಸೀತಾರಾಮನ್, ಪಿಯೂಶ್ ಗೊಯಲ್, ಜೈ ಶಂಕರ್, ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮಾತನಾಡಿ.. ಡಾ.ಬಿ.ಆರ್.ಅಂಬೇಡ್ಕರ್​ಗೆ ನಾವು ನಮನಿಸುತ್ತೇವೆ. ಪ್ರತಿ ಬಾರಿ ಚುನಾವಣೆ ಬಂದಾಗ ನಾವು ನಮ್ಮ ವಿಚಾರವನ್ನ ಜನರ ಮುಂದಿಡುತ್ತೇವೆ. ನಂತರ ಆ ವಿಚಾರವನ್ನು ಅನುಷ್ಟಾನ ಮಾಡಿ ಮುಂದುವರೆಸುತ್ತೇವೆ. ಅದರಂತೆ ಇಂದು ಸಂಕಲ್ಪ ಪತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ. ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್ ಧೇಯವಾಕ್ಯದಂತೆ ನಮ್ಮ ಸರ್ಕಾರದ ಕಲ್ಪನೆ ಆಗಿದೆ. ಮೊದಲ ಬಾರಿಗೆ ಪ್ರಧಾನಿಯಾಗಿ ಮೋದಿ ಬಂದಾಗ ಸದನದಲ್ಲಿ ಬಡವರ ಬಗ್ಗೆ ಮಾತನಾಡಿದರು. ಅದರಂತೆ ಕಳೆದ ಹತ್ತು ವರ್ಷಗಳಿಂದ ನಮ್ಮ ಸೇವೆ ಬಡವರಿಗಾಗಿ, ರೈತರಿಗಾಗಿ, ತುಳತಕ್ಕೆ ಒಳಗಾಗಿರೋ ಬಗ್ಗೆ ಸ್ಪಂದಿಸುತ್ತದೆ. 2014ಕ್ಕೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂತು. ನಂತರ 2019ಕ್ಕೆ ನಾವು ನಮ್ಮ ದಾಖಲೆಯನ್ನೆ ಸರಿಗಟ್ಟಿ ಮುನ್ನುಗ್ಗುತ್ತಿದ್ದೇವೆ. ಈ ಬಾರಿಯೂ ಮತ್ತೆ ಮತಗಳ ಸಂಖ್ಯೆ ಹೆಚ್ಚಳವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಇಸ್ರೇಲ್ ಮೇಲೆ ಯುದ್ಧ ಸಾರಿದ ಇರಾನ್; ಸ್ಟ್ರಾಂಗ್ ಮೆಸೇಜ್ ಕೊಟ್ಟ ಭಾರತ..
ಸಂಕಲ್ಪ ಪತ್ರದ ಮುಖ್ಯಸ್ಥ ರಾಜನಾಥ್ ಸಿಂಗ್ ಮಾತನಾಡಿ, ನಾವು ಪ್ರಣಾಳಿಕೆ ರಚನೆ ಮಾಡುವಾಗ ಈ ಹಿಂದೆ ನೀಡಿರೋ ಎಲ್ಲಾ ಭರವಸೆ ಈಡೆರಿಸಿದ್ದೇವೆ. ಅದರಂತೆ ಮುಂದಿನ ಪ್ರಣಾಳಿಕೆಯೂ ಅದೇ ರೀತಿಯಲ್ಲಿರಬೇಕೆಂದು ಪ್ರಣಾಳಿಕೆ ತಯಾರಿಸಿದ್ದೇವೆ. ನಾವು ಏನು ಹೇಳುತ್ತೇವೆಯೋ, ಅದನ್ನೇ ಮಾಡುತ್ತೇವೆ. ಇದು ಬಿಜೆಪಿಯ ಅತಿದೊಡ್ಡ ಶಕ್ತಿ. ನಾವು ಈ ಹಿಂದೆ ಹೇಳಿದಂತೆ ರಾಮಮಂದಿರ ನಿರ್ಮಾಣ ಮಾಡಿದ್ದೇವೆ. ಆರ್ಟಿಕಲ್ 370 ರದ್ದು ಮಾಡಿ ತೋರಿಸಿದ್ದೇವೆ. ಗರೀಬ್ ಕಲ್ಯಾಣ್ ಬಗ್ಗೆ ಮಾತನಾಡಿದ್ದೆವು. ಅದರಂತೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ತಂದು ಅನುಷ್ಟಾನ ಮಾಡಿದ್ದೇವೆ. ಸಂಕಲ್ಪಿತ್ ಭಾರತ್ ಮತ್ತು ಸಶಕ್ತ ಭಾರತವನ್ನಾಗಿ ಮಾಡಿದ್ದೇವೆ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ