/newsfirstlive-kannada/media/post_attachments/wp-content/uploads/2024/04/MODI-6.jpg)
ದೇಶದಲ್ಲಿ ಲೋಕಸಭೆ ಚುನಾವಣೆ ಘೋಷಣೆಯಾಗಿದ್ದು, ಇದೀಗ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಬಿಜೆಪಿಯ ಪ್ರಣಾಳಿಕೆಗೆ ಸಂಕಲ್ಪ ಪತ್ರ ಎಂದು ಹೆಸರಿಡಲಾಗಿದೆ. ದೆಹಲಿಯ ಪಕ್ಷದ ಕೇಂದ್ರ ಕಚೇರಿಯಲ್ಲಿ ನೀಡಿರುವ ನಿರ್ಣಯ ಪತ್ರದಲ್ಲಿ ರೈತರಿಂದ ಹಿಡಿದು ಯುವಕರವರೆಗೂ ಎಲ್ಲರ ಗಮನ ಕೇಂದ್ರೀಕೃತವಾಗಿದೆ. ಬಿಜೆಪಿಯ ಪ್ರಣಾಳಿಕೆಯು GYAN ಅಂದರೆ ಬಡವರು, ಯುವಕರು, ರೈತರು ಮತ್ತು ಮಹಿಳಾ ಶಕ್ತಿಯ ಮೇಲೆ ಕೇಂದ್ರೀಕರಿಸಿದೆ.
ಇದನ್ನೂ ಓದಿ:ಇಸ್ರೇಲ್ ಮೇಲೆ ಯುದ್ಧ ಸಾರಿದ ಇರಾನ್; ಸ್ಟ್ರಾಂಗ್ ಮೆಸೇಜ್ ಕೊಟ್ಟ ಭಾರತ..
‘ಮೋದಿ ಕೀ ಗ್ಯಾರಂಟಿ; ಅಭಿವೃದ್ಧಿ ಹೊಂದಿದ ಭಾರತ 2047’ ಬಿಜೆಪಿ ಪ್ರಣಾಳಿಕೆಯಲ್ಲಿರುವ ಧ್ಯೇಯವಾಗಿದೆ. ಅದರಲ್ಲಿ ದೇಶದ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ಇದೆ.
ಪ್ರಣಾಳಿಕೆಯ ಹೈಲೈಟ್ಸ್​
- ಉದ್ಯೋಗ ಖಾತರಿ
- 2036 ರಲ್ಲಿ ಒಲಿಂಪಿಕ್ಸ್ ಆತಿಥ್ಯ
- 3 ಕೋಟಿ ಲಕ್​ಪತಿ ದೀದಿ ಮಾಡುವ ಗುರಿ
- ಮಹಿಳಾ ಮೀಸಲಾತಿ ಜಾರಿಗೊಳಿಸುವ ಭರವಸೆ
- ಕೃಷಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು
- ಮೀನುಗಾರರಿಗೆ ಯೋಜನೆ
- ಇ-ಶ್ರಮ್ ಮೂಲಕ ಕಲ್ಯಾಣ ಯೋಜನೆಯ ಪ್ರಯೋಜನ
- 2025 ಬುಡಕಟ್ಟು ಹೆಮ್ಮೆಯ ವರ್ಷ
- ಪ್ರತಿ ಕ್ಷೇತ್ರದಲ್ಲೂ ಒಬಿಸಿ-ಎಸ್‌ಸಿ-ಎಸ್‌ಟಿಗೆ ಗೌರವ
- ಜಾಗತಿಕ ಉತ್ಪಾದನಾ ಕೇಂದ್ರ ರಚಿಸಲು ಸಿದ್ಧತೆ
- ಪ್ರಪಂಚದಾದ್ಯಂತ ರಾಮಾಯಣ ಹಬ್ಬ
- ಅಯೋಧ್ಯೆಯ ಅಭಿವೃದ್ಧಿ
- ಒಂದು ರಾಷ್ಟ್ರ, ಒಂದು ಚುನಾವಣೆ
- ಈಶಾನ್ಯ ಭಾರತದ ಅಭಿವೃದ್ಧಿ
- AI, ಸೆಮಿಕಂಡಕ್ಟರ್ ಮತ್ತು ಬಾಹ್ಯಾಕಾಶ ವಲಯದಲ್ಲಿ ಅಭಿವೃದ್ಧಿ
- ಮುಂದಿನ ಐದು ವರ್ಷ ಬಡವರಿಗೆ ಪಡಿತರ ಮುಂದುವರೆಯಲಿದೆ
- ಜನೌಷಧಿ ಮೂಲಕ ಶೇಕಡಾ 80 ರಷ್ಟು ಕಡಿಮೆ ದರದಲ್ಲಿ ಔಷಧಿ
- ಆಯುಷ್ಮಾನ್ ಭಾರತದ ಮೂಲಕ ಐದು ಲಕ್ಷ ಆರೋಗ್ಯ ಸೇವೆ
- 70 ವರ್ಷ ಮೇಲ್ಪಟ್ಟ ಎಲ್ಲರಿಗೂ ಆಯುಷ್ಮಾನ್ ಯೋಜನೆ ಲಾಭ
- ಮೂರು ಕೋಟಿ ಮನೆಗಳ ನಿರ್ಮಾಣಕ್ಕೆ ತೀರ್ಮಾನ ಮಾಡಿದೆ
- ಬಡವರಿಗೆ ಕಡಿಮೆ ದರದಲ್ಲಿ ಸಿಲಿಂಡರ್ ವ್ಯವಸ್ಥೆ ಮಾಡುವುದು
- ವಿದ್ಯೂತ್ ದರವನ್ನು ಝೀರೋ ಮಾಡಲು ತೀರ್ಮಾನ ಮಾಡಲಾಗಿದೆ
- ಮುದ್ರಾ ಯೋಜನೆ ಮೂಲಕ ಲಕ್ಷಾಂತರ ಜನ ಉದ್ಯೋಗ ಸೃಷ್ಟಿ
- ಮುದ್ರಾ ಯೋಜನೆಯ ಮಿತಿ 10 ಲಕ್ಷದಿಂದ 20 ಲಕ್ಷಕ್ಕೆ ಏರಿಸುವ ಭರವಸೆ
- ಬೀದಿಬದಿ ವ್ಯಾಪಾರಿಗಳ ಧನ ಸಹಾಯದಲ್ಲಿ ಏರಿಕೆ ಮಾಡಲು ತೀರ್ಮಾನ
- ತೃತೀಯ ಲಿಂಗದ ಸಮುದಾಯಕ್ಕೂ ಆಯುಷ್ಮಾನ್ ಭಾರತ್ ಯೋಜನೆ
- ಮುಂದಿನ ಐದು ವರ್ಷ ನಾರಿಶಕ್ತಿಯ ವರ್ಷವಾಗಲಿದೆ
- ಐಟಿ, ಪ್ರವಾಸೋದ್ಯಮ, ಸೇವೆ, ಕ್ಷೇತ್ರದಲ್ಲಿ ಟ್ರೈನಿಂಗ್ಕ್ರೀ
- ಡಾರಂಗದಲ್ಲಿ ವಿಶೇಷವಾಗಿ ಹೊಸ ಮಿಷನ್ಸ
- ಗರ್ಭಕಂಠ ಕ್ಯಾನ್ಸರ್ ಗಾಗಿ ವಿಶೇಷ ಯೋಜನೆ
- ರೈತರ ವರ್ಗಕ್ಕೆ ಉತ್ತೇಜಿಸಲು ಕಿಸಾನ್ ಕ್ರೆಡಿಟ್ ಕಾರ್ಡ್ಪಿ
- ಪಿಎಂ ಕಿಸಾನ್ ಸಮ್ಮಾನ್ ಮೂಲಕ ಮುಂದೆಯೂ ಹಣ ತಲುಪಲಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ