/newsfirstlive-kannada/media/post_attachments/wp-content/uploads/2024/04/MODI.jpg)
2024ರಲ್ಲಿ ನಡೆದ ಲೋಕಸಭಾ ಚುನಾವಣೆಗೆ ಬಿಜೆಪಿ ಖರ್ಚು ಮಾಡಿದ ಒಟ್ಟು ಮೊತ್ತ ಸುಮಾರು 1 ಸಾವಿರದಾ 737 ಕೋಟಿ.68 ಲಕ್ಷ ರೂಪಾಯಿ ಎಂದು ಹೇಳಲಾಗುತ್ತಿದೆ. ಭಾರತೀಯ ಚುನಾವಣಾ ಆಯೋಗಕ್ಕೆ ಪಕ್ಷದಿಂದಲೇ ಸಲ್ಲಿಸಲಾಗಿರುವ ವರದಿಯಲ್ಲಿ ಈ ಒಂದು ಮಾಹಿತಿ ದೊರಕಿದೆ. ಒಟ್ಟು 884.45 ಕೋಟಿ ರೂಪಾಯಿಯನ್ನು ಪಕ್ಷದ ಪ್ರಚಾರಕ್ಕಾಗಿ ಹಾಗೂ 853.23 ಕೋಟಿ ರೂಪಾಯಿಯನ್ನು ಪಕ್ಷದ ಅಭ್ಯರ್ಥಿಗಳಿಗೆ ಸಂಬಂಧಿಸಿದ ಖರ್ಚಿಗಾಗಿ ನೀಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ಇದನ್ನೂ ಓದಿ:ಸೋನಿಯಾ ವಿರುದ್ಧ ರಾಷ್ಟ್ರಪತಿಗೆ ಅವಮಾನ ಮಾಡಿದ ಆರೋಪ.. ಟೀಕಿಸುವ ಭರದಲ್ಲಿ ಹೇಳಿದ್ದೇನು?
ಇನ್ನುಳಿದಂತೆ ಸುಮಾರು 611.50 ಕೋಟಿ ರೂಪಾಯಿಯನ್ನು ಮಾಧ್ಯಮಗಳ ಜಾಹೀರಾತಿಗಾಗಿ ಬಿಜೆಪಿ ಖರ್ಚು ಮಾಡಿದೆ. ಪ್ರಿಂಟ್ ಹಾಗೂ ಎಲೆಕ್ಟ್ರಾನಿಕ್ ಮೀಡಿಯಾಗಳಿಗೆ ಸೇರಿ ಜಾಹೀರಾತಿಗಾಗಿ ಇಷ್ಟು ಹೂಡಿಕೆ ಮಾಡಿದೆ ಇನ್ನು ಎಸ್ಎಂಎಸ್ ಕ್ಯಾಂಪೇನ್ ಮತ್ತು ಕೇಬಲ್, ವೆಬ್ಸೈಟ್ ಮತ್ತು ಟಿವಿ ಚಾನೆಲ್ಗಳಿಗೆ ಪ್ರಚಾರಕ್ಕಾಗಿ ನೀಡಿದ ಹಣವು ಇದರಲ್ಲಿ ಸೇರಿದೆ. ಇನ್ನು ಪ್ರಚಾರದ ಮತ್ತೊಂದು ಮಾದರಿ ಪೋಸ್ಟರ್, ಬ್ಯಾನರ್, ಹೋರ್ಡಿಂಗ್ಸ್ ಮತ್ತು ಧ್ವಜಗಳಿಗಾಗಿ ಸುಮಾರು 55.75 ಕೋಟಿ ರೂಪಾಯಿಯನ್ನು ಖರ್ಚು ಮಾಡಲಾಗಿದೆ.
ಇದನ್ನೂ ಓದಿ: ದೆಹಲಿ ಚುನಾವಣೆ ಹೊಸ್ತಿಲಲ್ಲೇ ಕೇಜ್ರಿವಾಲ್ಗೆ ಬಿಗ್ ಶಾಕ್.. 7 AAP ಶಾಸಕರು ಪಕ್ಷಕ್ಕೆ ಗುಡ್‌ಬೈ!
ಸಾರ್ವಜನಿಕ ಸಭೆ, ಱಲಿಗಳಲ್ಲಿ ವೇದಿಕೆ, ಆಡಿಯೋ ಸೆಟಪ್, ಬ್ಯಾರಿಕೇಡ್ ಮತ್ತು ವಾಹನಗಳ ವ್ಯವಸ್ಥೆಗೆ ಸುಮಾರ 19.84 ಕೋಟಿ ರೂಪಾಯಿಯನ್ನು ಖರ್ಚಾಗಿದೆ. ಸ್ಟಾರ್ ಪ್ರಚಾರಕರ ಪ್ರಯಾಣದ ಖರ್ಚು ಮತ್ತು ಪಕ್ಷದ ಲೀಡರ್ಗಳ ಪ್ರಯಾಣದ ಖರ್ಚು ತಲಾ 168.92 ಕೋಟಿ ಹಾಗೂ 2.53 ಕೋಟಿ ರೂಪಾಯಿಯಷ್ಟು ಖರ್ಚು ಮಾಡಲಾಗಿದೆ ಎಂದು ಬಿಜೆಪಿ ತಿಳಿಸಿದೆ.
ಇನ್ನು ಅರುಣಾಚಲ ಪ್ರದೇಶದ ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ 5,552 ಕೋಟಿ, ಸಿಕ್ಕಿಂ 5,552.41 ಕೋಟಿ ಹಾಗೂ ಓಡಿಶಾದ ಚುನಾವಣಾ ಪ್ರಚಾರಕ್ಕೆ 5,555.65 ಕೋಟಿ ರೂಪಾಯಿ ಖರ್ಚು ಮಾಡಿರುವುದಾಗಿ ಬಿಜೆಪಿ ಭಾರತೀಯ ಚುನಾವಣಾ ಆಯೋಗಕ್ಕೆ ವರದಿಯನ್ನು ಸಲ್ಲಿಕೆ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ