newsfirstkannada.com

ಮಂಡ್ಯದಲ್ಲಿ ಸ್ವತಂತ್ರ ಸ್ಪರ್ಧೆ? ಸುಮಲತಾ ಮನೆಗೆ ದಿಢೀರ್ ಭೇಟಿ ಕೊಟ್ಟ ಬಿ.ವೈ ವಿಜಯೇಂದ್ರ

Share :

Published March 29, 2024 at 5:35pm

    ದೆಹಲಿಯಿಂದ ವಾಪಸ್ ಬಳಿಕ ಬೆಂಬಲಿಗರ ಸಭೆ ಕರೆದಿದ್ದ ಸುಮಲತಾ

    ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರಾ ಹಾಲಿ ಸಂಸದೆ

    ಮಂಡ್ಯ ಟಿಕೆಟ್ ಘೋಷಣೆ ಬೆನ್ನಲ್ಲೇ ಬಿ.ವೈ ವಿಜಯೇಂದ್ರ ಮಹತ್ವದ ಭೇಟಿ

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಅವರು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಪಕ್ಕಾ ಆಗಿದೆ. ಈ ಟಿಕೆಟ್ ಸಸ್ಪೆನ್ಸ್‌ ಮುಗಿಯುತ್ತಿದ್ದಂತೆ ಸಂಸದೆ ಸುಮಲತಾ ಅಂಬರೀಶ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಭೇಟಿ ಮಾಡಿದ್ದಾರೆ.

ಜೆ.ಪಿ ನಗರದ ಸುಮಲತಾ ಅಂಬರೀಶ್ ಅವರ ಮನೆಗೆ ಬಿ.ವೈ ವಿಜಯೇಂದ್ರ ಅವರು ಭೇಟಿ ಮಾಡಿದ್ದು, ಮಹತ್ವದ ಚರ್ಚೆ ನಡೆಸಿದ್ದಾರೆ. ಮಂಡ್ಯ ಮೈತ್ರಿ ಅಭ್ಯರ್ಥಿ ನಾನೇ ಎಂದು ಹೇಳುತ್ತಿದ್ದ ಸಂಸದೆ ಸುಮಲತಾ ಅವರು ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದರು. ಮೈತ್ರಿ ಹೊಂದಾಣಿಕೆಯಲ್ಲಿ ಜೆಡಿಎಸ್ ಪಾಲಾದ ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕಣಕ್ಕಿಳಿಸಲು ತೀವ್ರ ಕಸರತ್ತು ನಡೆಸಿದ್ದರು.

ದೆಹಲಿಯಿಂದ ವಾಪಸ್ ಆದ ಬಳಿಕ ಸುಮಲತಾ ಅಂಬರೀಶ್ ಅವರು ನಾಳೆ ಬೆಂಬಲಿಗರ ಸಭೆ ಕರೆದು ಮುಂದಿನ ನಿಲುವಿನ ಬಗ್ಗೆ ತೀರ್ಮಾನ ಕೈಗೊಳ್ಳಲು ಮುಂದಾಗಿದ್ದಾರೆ. ಬೆಂಬಲಿಗರ ಸಭೆ ಬಳಿಕ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರಾ ಅಥವಾ ಬಿಜೆಪಿ ಪಕ್ಷದಿಂದ ಉನ್ನತ ಹುದ್ದೆಗೆ ಒಪ್ಪಿಕೊಳ್ತಾರಾ ಅನ್ನೋ ಚರ್ಚೆ ನಡೆಯುತ್ತಿದೆ.

ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರ ರೆಬೆಲ್ ನಡೆಯಿಂದ ಬಿಜೆಪಿ, ಜೆಡಿಎಸ್ ಮೈತ್ರಿಗೆ ಮುಜುಗರ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಟಿಕೆಟ್ ವಿಚಾರಕ್ಕೆ ಅಸಮಾಧಾನಗೊಂಡಿದ್ದ ಸುಮಲತಾ ಅವರನ್ನು ಬಿ.ವೈ ವಿಜಯೇಂದ್ರ ಅವರನ್ನು ಭೇಟಿ ಮಾಡಿದ್ದಾರೆ. ಮಂಡ್ಯ ಟಿಕೆಟ್ ವಿಚಾರದಲ್ಲಿ ಸುಮಲತಾ ಅವರ ಮನವೊಲಿಕೆಗೆ ಬಿ.ವೈ ವಿಜಯೇಂದ್ರ ಅವರು ಪ್ರಯತ್ನಿಸಿದ್ದಾರೆ.

ಇದನ್ನೂ ಓದಿ: ಸಿದ್ದು ಗರ್ವ ಭಂಗ ಆಗಬೇಕು.. ಬಹಳ ದಿನಗಳ ಬಳಿಕ ಮತ್ತೆ ಗುಡುಗಿದ ದೊಡ್ಡ ಗೌಡರು; ಹೇಳಿದ್ದೇನು?

ದೆಹಲಿಗೆ ತೆರಳಿದ್ದ ಸುಮಲತಾ ಅಂಬರೀಶ್ ಅವರು ನರೇಂದ್ರ ಮೋದಿ, ಅಮಿತ್ ​​ಶಾ, ಜೆಪಿ ನಡ್ಡಾ ಅವರನ್ನು ಭೇಟಿಯಾಗಿದ್ದರು. ನಾನಾ ಪ್ರಯತ್ನ ಮಾಡಿದ್ರೂ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಸುಮಲತಾ ಅವರು ಅಸಮಾಧಾನಗೊಂಡಿದ್ದಾರೆ. ಇನ್ನು, ಇಂದು ಅಧಿಕೃತವಾಗಿ ಮಂಡ್ಯ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಅವರ ಹೆಸರನ್ನು ಘೋಷಣೆ ಮಾಡಲಾಗಿದೆ. ಮಂಡ್ಯ ಟಿಕೆಟ್ ಘೋಷಣೆ ಬೆನ್ನಲ್ಲೇ ಸುಮಲತಾ ಅವರ ಮನೆಗೆ ಬಿವೈ ವಿಜಯೇಂದ್ರ ಭೇಟಿ ಕೊಟ್ಟು ಅಸಮಾಧಾನ ಶಮನಕ್ಕೆ ಪ್ರಯತ್ನಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಂಡ್ಯದಲ್ಲಿ ಸ್ವತಂತ್ರ ಸ್ಪರ್ಧೆ? ಸುಮಲತಾ ಮನೆಗೆ ದಿಢೀರ್ ಭೇಟಿ ಕೊಟ್ಟ ಬಿ.ವೈ ವಿಜಯೇಂದ್ರ

https://newsfirstlive.com/wp-content/uploads/2024/03/Sumalatha-By-Vijayendra.jpg

Load More