newsfirstkannada.com

‘ಸಂಸದರು ಜವಾಬ್ದಾರಿ ಅರಿತು ಮಾತನಾಡಬೇಕು’- ಡಿಕೆ ಸುರೇಶ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಆಕ್ರೋಶ

Share :

Published February 2, 2024 at 8:54am

    ಸರ್ಕಾರ ಸಂವಿಧಾನದ 75ನೇ ವರ್ಷದ ರಥಯಾತ್ರೆ ಆಚರಿಸುತ್ತಿದೆ

    ಭಾರತದ ಅಖಂಡತೆ, ಸಾರ್ವಭೌಮತ್ವ ಕಾಪಾಡ್ತೇನೆ ಎಂದು ಪ್ರತಿಜ್ಞೆ

    ಸಂಸದರು ಪ್ರತಿಜ್ಞೆ ಮಾಡಿದ್ದನ್ನ ಮರೆತು ಏನೇನೋ ಮಾತಾಡ್ತಿದ್ದಾರೆ

ಹುಬ್ಬಳ್ಳಿ: ದಕ್ಷಿಣ ಭಾರತ ಪ್ರತ್ಯೇಕ ರಾಷ್ಟ್ರದ ಕುರಿತು ಸಂಸದ ಡಿ.ಕೆ.ಸುರೇಶ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಡಿ.ಕೆ ಸುರೇಶ್​ ಸಂಸದರಾಗಿದ್ದು ತಮ್ಮ ಜವಾಬ್ದಾರಿ ಅರಿತು ಮಾತನಾಡಬೇಕು. ರಾಜ್ಯ ಸರ್ಕಾರ ಸಂವಿಧಾನದ 75ನೇ ವರ್ಷದ ರಥಯಾತ್ರೆ ಆಚರಣೆ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಂಸದರು ಈ ರೀತಿ ಮಾತನಾಡಿರುವುದು ಖಂಡನೀಯ. ಯಾವುದೇ ಒಬ್ಬ ಜನಪ್ರತಿನಿಧಿ ತಮ್ಮ ಸ್ಥಾನ ಅಲಂಕರಿಸುವ ಸಂದರ್ಭದಲ್ಲಿ ಸಂವಿಧಾನವನ್ನು ಮುಂದಿಟ್ಟುಕೊಂಡು ಪ್ರತಿಜ್ಞೆ ಮಾಡುತ್ತಾರೆ. ಈ ವೇಳೆ ಭಾರತದ ಅಖಂಡತೆ, ಸಾರ್ವಭೌಮತ್ವವನ್ನು ಕಾಪಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿರುವುದನ್ನ ಸುರೇಶ್ ಅವ್ರು ಮರೆತು ಹೋಗಿದ್ದಾರೆ ಎಂದು ಟಾಂಗ್ ಕೊಟ್ಟರು.

ಸಂಸದರು ಯಾವ ಅಭಿವೃದ್ಧಿ, ಯಾವ ಅನುದಾನದ ಬಗ್ಗೆ ಮಾತನಾಡುತ್ತಿದ್ದಾರೆ. ಈ ಹಿಂದೆ ಮನಮೋಹನ್ ಸಿಂಗ್​ ಪ್ರಧಾನಿಯಾಗಿದ್ದಾಗ ನಮ್ಮ ರಾಜ್ಯಕ್ಕೆ 2004-2014ರವರೆಗೆ 60 ಸಾವಿರ ಕೋಟಿ ರೂ. ಅನುದಾನ ಕೊಟ್ಟಿದ್ದಾರೆ. 2014 ರಿಂದ ಇಲ್ಲಿಯವರೆಗೆ ಪ್ರಧಾನಿ ಮೋದಿ 2 ಲಕ್ಷ 36 ಸಾವಿರ ಕೋಟಿ ರೂ.ಗಳನ್ನ ಕೊಟ್ಟಿದ್ದಾರೆ.

ಟ್ಯಾಕ್ಸ್​ ಬಗ್ಗೆ ಪದೇ ಪದೆ ಮಾತಾಡುತ್ತಾರೆ. ಯುಪಿಎ ಇದ್ದಾಗ 81 ಸಾವಿರ ಕೋಟಿ ರೂ.ಗಳು ರಾಜ್ಯಕ್ಕೆ ಬಂದಿದೆ. ಬಿಜೆಪಿ ಸರ್ಕಾರದಲ್ಲಿ 2 ಲಕ್ಷ 82 ಸಾವಿರ ಕೋಟಿ‌ ರೂ. ತೆರಿಗೆ ಹಣ ಕರ್ನಾಟಕಕ್ಕೆ ಬಂದಿದೆ. ಒಬ್ಬ ಸಂಸದರು ಬೇಜವಾಬ್ದಾರಿಯುತದಿಂದ ನಡೆದುಕೊಂಡಿದ್ದಾರೆ ಎಂದು ಬಿ.ವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಸಂಸದರು ಜವಾಬ್ದಾರಿ ಅರಿತು ಮಾತನಾಡಬೇಕು’- ಡಿಕೆ ಸುರೇಶ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಆಕ್ರೋಶ

https://newsfirstlive.com/wp-content/uploads/2024/02/VIJAYENDRA_DK_SURESH.jpg

Load More